ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಗಾದೆ ವಿಸ್ತರಣೆ | Uta Ballavanige Rogavilla Mathu Ballavanige Jagalavilla

“ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” (uta ballavanige rogavilla mathu ballavanige jagalavilla) ಎಂಬ ಗಾದೆ ಜೀವನದ ಮಹತ್ವಪೂರ್ಣ ತತ್ವಗಳನ್ನು ಸಾರುತ್ತದೆ. ಈ ಗಾದೆ ನಮ್ಮ ದೈನಂದಿನ ಜೀವನದಲ್ಲಿ ಆಹಾರದ ಪ್ರಾಮುಖ್ಯತೆಯನ್ನೂ, ಮಾತಿನ ಶ್ರೇಷ್ಠತೆಯನ್ನೂ ವಿವರಿಸುತ್ತದೆ. ಸರಿಯಾದ ಆಹಾರ ಸೇವನೆ ನಮ್ಮ ದೇಹವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ, ಹಾಗೆಯೇ ನಯವಾದ ಮಾತುಗಳು ಮನಸ್ಸು ಮತ್ತು ಸಂಬಂಧಗಳನ್ನು ಕಾಪಾಡಲು ಸಹಕಾರಿಯಾಗುತ್ತವೆ.

ಹಿರಿಯರ ಅನುಭವದಿಂದ ಹುಟ್ಟಿದ ಈ ಗಾದೆಗಳು ನಮ್ಮ ಜೀವನದ ಮಾರ್ಗದರ್ಶಕವಾಗಿದ್ದು, ಆರೋಗ್ಯಕರ ಜೀವನಶೈಲಿಯೊಂದಿಗೆ ಉತ್ತಮ ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ಪ್ರೇರೇಪಿಸುತ್ತವೆ. ಈ ಲೇಖನದಲ್ಲಿ ಈ ಗಾದೆಯ ವಿಸ್ತಾರವನ್ನು ವಿವರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಪರೀಕ್ಷೆಗಳಲ್ಲಿ ಅಥವಾ ಭಾಷಣಗಳಲ್ಲಿ ಉಪಯೋಗಿಸಬಹುದಾದ ಮಾಹಿತಿಯನ್ನು ನೀಡಲಾಗಿದೆ.

Uta Ballavanige Rogavilla Mathu Ballavanige Jagalavilla

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಗಾದೆ ವಿಸ್ತರಣೆ | Uta Ballavanige Rogavilla Mathu Ballavanige Jagalavilla

ಊಟಬಲ್ಲವನಿಗೆ ರೋಗವಿಲ್ಲ: ಮಾತು ಬಲ್ಲವನಿಗೆ ಜಗಳವಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ  ನುಡಿಮುತ್ತುಗಳು. ಗಾದೆಗಳು  ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಈ ಗಾದೆಯು ಊಟದ ಇತಿಮಿತಿಯನ್ನು ಮಾತಿನ ಮಹತ್ವವನ್ನು ತಿಳಿಸುತ್ತದೆ. ನಾವು ವೇಳೆಗೆ ಸರಿಯಾಗಿ ಹಿತ-ಮಿತವಾದ ಆಹಾರವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಅದೇ ರೀತಿ ಮಾತು ಹಿತಮಿತವಾಗಿದ್ದರೆ ಎಲ್ಲರಿಗೂ ಹಿತವಾಗುತ್ತದೆ. ಬಿಟ್ಟಿ ಊಟ ಸಿಕ್ಕಾಗ ಗೋಣಿಚೀಲ ತುಂಬಿದಂತೆ ಊಟಮಾಡಿದರೆ ಅಜೀರ್ಣ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಅದೇ ರೀತಿ ಮಾತು

ಪುಕ್ಕಟೆಯೆಂದು ಬಾಯಿಗೆ ಬಂದಂತೆ ನುಡಿದರೆ ಜಗಳಕ್ಕೆ ಕಾರಣವಾಗಬಹುದು. ಅಂತೆಯೇ ಮಾತೇ ಮಾಣಿಕ್ಯ ಮಾತೇ ಮೃತ್ಯು ಎಂಬ ಗಾದೆಯು ಇದೇ ಅರ್ಥವನ್ನು ನೀಡುತ್ತದೆ. ಬಸವಣ್ಣನವರು ಹೇಳಿದಂತೆ ಮಾತು ನುಡಿದರೆ ಮುತ್ತಿನಹಾರದಂತಿರಬೇಕು. ಅದಕ್ಕಾಗಿ ಡಿ.ವಿ.ಜಿಯವರು ಹಿತವಿರಲಿ ವಚನದಲಿ ಎಂದು ಕಗ್ಗದಲ್ಲಿ ಹೇಳಿದ್ದಾರೆ.

ಒಟ್ಟಿನಲ್ಲಿ ಮಾತು ಬಲ್ಲವ ಮಾಣಿಕ್ಯ ತಂದ, ಮಾತರಿಯದವ ಜಗಳ ತಂದ ಎಂಬ ಗಾದೆ ಮಾತಿನಂತೆ ಊಟಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯು ಸಹ ವ್ಯಕ್ತಿ ಮಿತಹಾರಿ ಯಾಗಿರಬೇಕೆಂಬುದನ್ನು ಮತ್ತು ಅವನ ಮಾತು ಮಿತ ಹಿತವಾಗಿರಬೇಕೆಮದು ಸಾದರಪಡಿಸುತ್ತದೆ.

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ | Uta Ballavanige Rogavilla Mathu Ballavanige Jagalavilla Explanation in Kannada

ಗಾದೆಗಳೆ೦ದರೆ ಜನಸಾಮಾನ್ಯರಲ್ಲಿ ಬಳಕೆಯಲ್ಲಿರುವ, ಉಪದೇಶಾತ್ಮಕ ಅಥವಾ ಸಲಹೆಯನ್ನು ನೀಡುವ ನಿಜವಾದ ಅರ್ಥವನ್ನು ಮರೆಸಿ ಅಲ೦ಕಾರಿಕವಾಗಿ ವ್ಯಕ್ತವಾಗಿರುವ ರೂಪಕ ಆಥವಾ ನಿಗೂಢಾರ್ಥ ದ್ಯೋತಕವಾಗಿ ರೂಪ ಬದಲಿಸಿ ಕಾಣಿಸಿಕೊಳ್ಳುವ ಜನಾ೦ಗವೊ೦ದರ ಸೂಕ್ತಿ. ಇ೦ತಹ ಗಾದೆಗಳಲ್ಲಿ `ಊಟ ಬಲ್ಲವನಿಗೆ ರೋಗವಿಲ್ಲ ಮಾತು’ಬಲ್ಲವನಿಗೆ ಜಗಳವಿಲ್ಲ’ ಎ೦ಬದು ಪ್ರಸಿದ್ಧವಾದ ಗಾದೆ.  ಉತ್ತಮ ಆರೋಗ್ಯವ೦ತನಾಗಿ ಬಾಳಲು ಊಟ ಬಹಳ ಮುಖ್ಯ. ಹಾಗೆ೦ದು ಊಟವನ್ನು ಅತಿಯಾಗಿ ಮಾಡಿದರೂ

ಆರೋಗ್ಯಕ್ಕೆ ಹಾನಿ. ತುಂಬಾ ಕಡಿಮೆ ತಿಂದರೂ ತೊ೦ದರೆ. ಆದ್ದರಿಂದ ಊಟವನ್ನು ಯಾವಾಗ, ಎಷ್ಟು

ಮಾಡಬೇಕು ಎ೦ದು ತಿಳಿದು ಮಾಡುವವನಿಗೆ ಆರೋಗ್ಯ ಅವನ ಸಂಗಾತಿಯಾಗಿರುತ್ತದೆ. ಹಿತಮಿತ ಸತ್ವಪೂರ್ಣ ಆಹಾರವನ್ನು ಸೇವಿಸುವವನು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯದಿ೦ದಿರುತ್ತಾನೆ. ಅಂತೆಯೇ ಸಂಘಜೀವಿಯಾದ ಮನುಷ್ಯ ತನ್ನವರೊಡನೆ ವ್ಯವಹರಿಸಲು ಮಾತನ್ನು ಸಾಧನವನ್ನಾಗಿ ಬಳಸಿಕೊಳ್ಳುತ್ತಾನೆ. ಇದನ್ನು ಕೂಡ ಅರಿತು ಯಾವಾಗ, ಯಾರ ಜೊತೆ ಹೇಗೆ, ಎಷ್ಟು ಮಾತನಾಡಬೇಕು ಎಂದು ತಿಳಿದು ಬದುಕಿದರೆ ಮಾತ್ರ ಜೀವನ ಸುಲಭವಾಗುತ್ತದೆ. 

ಇದನ್ನೂ ಓದಿ:

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ | Uta Ballavanige Rogavilla Mathu Ballavanige Jagalavilla Explanation

ಗಾದೆಯು ವೇದದಂತೆ ಮಹತ್ವದ್ದು. ವೇದವು ತಪ್ಪಾದರೂ, ಗಾದೆ ಎಂದಿಗೂ ತಪ್ಪುವುದಿಲ್ಲ. ಗಾದೆಗಳು ಹಿರಿಯರ ಜೀವನದ ಅನುಭವದಿಂದ ಹುಟ್ಟಿದ ನುಡಿಮುತ್ತುಗಳು.

ಈ ಗಾದೆ ಆಹಾರದ ಮಹತ್ವವನ್ನು ಮತ್ತು ಮಾತಿನ ಇತಿಮಿತಿಯನ್ನು ತೋರಿಸುತ್ತದೆ. ಸಮಯಕ್ಕೆ ಸರಿಯಾಗಿ, ಮಿತವಾಗಿ ಒಳ್ಳೆಯ ಆಹಾರ ಸೇವಿಸಿದರೆ ನಾವು ಆರೋಗ್ಯವಂತರಾಗಿ ಬದುಕಬಹುದು. ನಮ್ಮ ಆರೋಗ್ಯಕ್ಕೆ ಪೂರಕವಾದ ಆಹಾರವೇನು, ಅಪಾಯಕಾರಿಯದೆಯೇನು ಎಂಬುದನ್ನು ಅರಿತು ಸೇವಿಸಬೇಕು. ಸಿಕ್ಕಿದೆವೆಲ್ಲವನ್ನು ಅತಿಯಾಗಿ ತಿಂದರೆ, ಆರೋಗ್ಯ ಹಾಳಾಗಬಹುದು. ಅದಕ್ಕಾಗಿಯೇ ಹಿರಿಯರು “ಅಳವಾಗಿ ದುಡಿ, ಅರಸನಾಗಿ ಉಣ್ಣು” ಎಂದು ಹಿತೋಪದೇಶ ನೀಡುತ್ತಾರೆ.

ಹಾಗೆಯೇ, ನಮ್ಮ ಮಾತುಗಳು ಸದಾ ನಯವಾದ ಮತ್ತು ವಿನಯದಿಂದ ಕೂಡಿರಬೇಕು. ಯಾವುದೇ ವಿಷಯವಾಗಲಿ, ಅದನ್ನು ಚೆನ್ನಾಗಿ ತಿಳಿದು ಮಾತ್ರ ಮಾತನಾಡಬೇಕು. ನಮ್ಮ ಮಾತುಗಳು ಮನಸ್ಸು ಅಥವಾ ಮನೆಗೆ ನೋವುಂಟುಮಾಡಬಾರದು. ಬುದ್ಧಿಹೀನವಾಗಿ ಮಾತಾಡಿದರೆ, ಅದು ಸಂಬಂಧಗಳನ್ನು ಹಾಳುಮಾಡಬಹುದು ಮತ್ತು ಜಗಳಕ್ಕೂ ಕಾರಣವಾಗಬಹುದು. ಹೀಗಾಗಿ, ನಮ್ಮ ಮಾತು ಇನ್ನೊಬ್ಬರಿಗೆ ನೋವು ತರುವಂತಿರಬಾರದು.

ಹಿರಿಯರು “ಮಾತೇ ಮುತ್ತು, ಮಾತೇ ಮೃತ್ಯು” ಎಂದಿದ್ದಾರೆ. “ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಎಂಬ ಗಾದೆಯೂ ಇದೆ. ಹೀಗಾಗಿ, ನಾವು ಮಾತನಾಡುವ ಮೊದಲು ಎಚ್ಚರ ವಹಿಸಬೇಕು.

ಒಟ್ಟಿನಲ್ಲಿ, ನಾವು ಮಾಡುವ ಊಟ ಮತ್ತು ಆಡುವ ಮಾತು ಹಿತಮಿತವಾಗಿದ್ದರೆ, ನಮ್ಮ ಜೀವನ ಕ್ಷೇಮವಾಗಿರುತ್ತದೆ ಎಂಬುದು ಈ ಗಾದೆಯ ಸಾರವಾಗಿದೆ.

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ | Uta Ballavanige Rogavilla Mathu Ballavanige Jagalavilla Gade in Kannada

ಗಾದೆಗಳು ಹಿರಿಯರ ಅನುಭವದಿಂದ ಹುಟ್ಟಿದ ನುಡಿಮುತ್ತುಗಳು. ಈ ಗಾದೆ ಆಹಾರದ ಮಿತಿಯ ಮಹತ್ವವನ್ನು ಮತ್ತು ಮಾತಿನ ಶ್ರೇಷ್ಠತೆಯನ್ನು ವಿವರಿಸುತ್ತದೆ. ಸಮಯಕ್ಕೆ ಸರಿಯಾಗಿ, ಹಿತಮಿತವಾಗಿ ಆಹಾರ ಸೇವಿಸಿದರೆ ಆರೋಗ್ಯ ಕಾಪಾಡಬಹುದು. ಅತಿಯಾಗಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ, ಆದ್ದರಿಂದ “ಅಳಾಗಿ ದುಡಿ ಅರಸನಾಗಿ ಉಣ್ಣು” ಎಂಬ ಮಾತು ಪ್ರಾಮುಖ್ಯವಾಗಿದೆ.

ಹಾಗೆಯೇ, ಮಾತುಗಳು ನಯ ವಿನಯದಿಂದ ಕೂಡಿರಬೇಕು. ಅವು ಮನಸ್ಸಿಗೆ ನೋವು ನೀಡದಂತೆ ಮತ್ತು ಸಂಬಂಧಗಳನ್ನು ಹಾಳುಮಾಡದಂತೆ ಇರಬೇಕು. “ಮಾತೇ ಮುತ್ತು, ಮಾತೇ ಮೃತ್ಯು” ಎಂಬ ಗಾದೆಯಂತೆ, ಮಾತನಾಡುವ ಮೊದಲು ಎಚ್ಚರಿಕೆ ಅಗತ್ಯ. ಒಟ್ಟಿನಲ್ಲಿ, ಆಹಾರ ಮತ್ತು ಮಾತು ಎರಡೂ ಹಿತಮಿತವಾಗಿದ್ದರೆ ಕ್ಷೇಮ ಎಂಬುದೇ ಈ ಗಾದೆಯ ತಾತ್ಪರ್ಯ.

ಇದನ್ನೂ ಓದಿ:

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ | Uta Ballavanige Rogavilla Mathu Ballavanige Jagalavilla in Kannada Language

ನಮ್ಮ ಪ್ರತಿದಿನದ ಆಗುಹೋಗುಗಳಿಗೆ ಈ ಗಾದೆ ಮಾರ್ಗದರ್ಶಿ ಸೂತ್ರವೇ ಆಗಿದೆ. ಊಟ ಮತ್ತು ಮಾತು ಒಂದು ಶರೀರದ ಆರೋಗ್ಯಕ್ಕೆ ಆದಾರವಾದರೆ ಇನ್ನೊಂದು ಸಾಮಾಜಿಕ ಸಂಬಂಧಗಳ ಸ್ವಾಸ್ಥ್ಯಕ್ಕೆ ಆಧಾರ.ಕಾಯಿಲೆಗಳು ಬರಲು ಮನುಷ್ಯರ ಜಿಹ್ವಾಚಾಪಲ್ಯವೆ ಕಾರಣ. ನಾಲಿಗೆಗೆ ರುಚಿಯಾಗಿರುವುದನ್ನು ಆಸೆ ಪಟ್ಟು ತಿನ್ನುತ್ತಾರೆಯೇ ಹೊರತು ದೇಹಕ್ಕೆ ಹಿತವಾದದ್ದಲ್ಲ. ಈ ಜಿಹ್ವಾ ಚಾಪಲ್ಯವನ್ನು ಬಗ್ಗು ಬಡಿಯಲೆಂದೇ ಈ ಗಾದೆಗೆ ಗೆಳೆಯನಂತೆ ಇನ್ನೊಂದು ಗಾದೆ ಇದೆ; ‘ನಾಲಗೆ ಕೆಳಗೆ ಹೋಗುತ್ತಲೇ ನರಕ’.

ನಾಲಗೆಯ ಮೇಲಿರಿಸಿದ ಪಧಾರ್ಥ ಖಾರ, ಸಿಹಿ. ಹುಳಿ, ಕಹಿ ಯಾವ ರೀತಿ ಇದೆ ಎಂದು ರುಚಿ ಗ್ರಂಥಿಗಳು ತಿಳಿಸುತ್ತವೆ. ಆ ರುಚಿಯ ಅನುಭವದಿಂದ ಆಟ ಸ್ವರ್ಗವೇ ಎಟುಕಿಸಿದಂತೆ ಸಂತೋಷ ಪಡುತ್ತಾನೆ. ಅದು ಕೆಲವೇ ಕ್ಷಣ. ಆ ಪದಾರ್ಥ ನಾಲಗೆಯಿಂದ ಕೆಳಗಿಳಿಯುವವರೆಗಷ್ಟೇ.

ವಿವಿಧ ಜೀರ್ಣಾಂಗರಸಗಳು ಅದನ್ನು ಪೌಷ್ಟಿಕಾಂಶಗಳನ್ನಾಗಿ ಪರಿವರ್ತಿಸಿ, ಶರೀರಕ್ಕೆ ಚೈತನ್ಯ ಒದಗಿಸಲಿ ಎಂದೇ ಆಹಾರ ಸ್ವೀಕರಿಸುವರಷ್ಟೇ ಬದಲಿಗೆ ಸೇವಿಸಿದ ಆಹಾರ ಜೀರ್ಣಾಂಗಗಳಿಗೆ ಭಾರವಾಗಿ, ಹೊಟ್ಟೆಯೊಳಗೆ ಒಂದು ನರಕವನ್ನು ಸೃಷ್ಟಿಸಿಬಿಡುತ್ತದೆ. ಆ ನರಕದರ್ಶನ ಆ ವ್ಯಕ್ತಿಗೆ ನಾನಾ ಕಾಯಿಲೆಗಳ ಮೂಲಕ ಆಗುತ್ತದೆ.

‘ಮಾತಿನ’ ಮಾತಿಗೆ ಬಂದರೆ ಇರುವ ವಾಖ್ಯಾನಗಳು ಒಂದೆರಡಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣನವರು. ‘ಮಾತೇ ಮುತ್ತು ಮಾತೇ ಮೃತ್ಯು’ ಎಂದರು ಹಿರಿಯರು. ಮೌನ ಬಂಗಾರ ಮಾತು ಬೆಳ್ಳಿ ಎಂದರು ಅನುಭವಿಗಳು. ಮಾತಿಲ್ಲದೆ ಕರ್ಮಸಾಧನೆಯಾಗುವುದಿಲ್ಲ. ಮೊಬೈಲ್, ಟೆಲಿಫೋನ್ಗಳು ಅದ್ಭುತ ಆವಿಷ್ಕಾರಗಳೇ ಆಗಿದ್ದರೂ ಕೆಲವರು ಅತಿಯಾಗಿ, ಅನಾವಶ್ಯಕವಾಗಿ ಮಾತನಾಡಿ ಅಧಿಕಪ್ರಸಂಗಿಗಳು, ಉದ್ದಟರು, ನಾರದರು ಏನೆಸಿಕೊಳ್ಳುತ್ತಾರೆ. 

ಕೆಲವರು ಗಾಂಭೀರ್ಯದ ಸೋಗಿನಲ್ಲಿ ಅತೀ ಮಿತ ಬಾಷಿಗಳಾಗಿರುತ್ತಾರೆ. ತಲೆಯನ್ನು ಅಲ್ಲಾಡಿಸಿ ‘ಹೌದು ಇಲ್ಲ’ ಎಂದು ಹೇಳಿ ಕುಶಲೋಪರಿ ಮುಗಿಸುತ್ತಾರೆ. ಸಂಘ ಜೀವಿಯಾದ ಮಾನವನಿಗೆ ಇದು ತರವಲ್ಲ. ಇಂಥವರು ದುರಹಂಕಾರಿ, ಮುಟ್ಟಿದರೆ ಮುನಿ ಎನೆಸಿಕೊಳ್ಳುತ್ತಾರೆ. ಜನರ ಧೂಷಣೆ ಹೇಗಿದ್ದರೂ ತಪ್ಪಿದ್ದಲ್ಲ ನಿಜ. ಹಾಗೆಂದು ಸಾಧ್ಯವಾದಷ್ಟೂ ಘರ್ಷಣೆಗಳಾಗದಂತೆ ಒಂದು ವೇಳೆ ಮಾತು ವಿರಸಕ್ಕೆ ತಿರುಗಿದರೂ ವಿಕೋಪಕ್ಕೆ ಹೋಗದಂತೆ ತಡೆಯುವ ಕೌಶಲವೇ ಉತ್ತಮ ವಾಕ್ಪಟುವನ್ನಾಗಿ ಮಾಡುತ್ತದೆ. ಏನಾದರೂ ಎಷ್ಟು ಬೇಕೂ ಅಷ್ಟೇ ಮಾತನಾಡಬೇಕು. 


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.