ರತ್ನತ್ರಯರಲ್ಲಿ ಮೂರನೆಯವನಾದ ರನ್ನನು ಕರ್ನಾಟಕದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಮೆರೆದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿ ಎತ್ತರದಲ್ಲಿ ನಿಲ್ಲುತ್ತಾರೆ. ಕನ್ನಡ ಕಾವ್ಯಕ್ಕೆ ಅವರು ನೀಡಿದ ಕೊಡುಗೆಗಳು ಅಪರಿಮಿತವಾಗಿದ್ದು, ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿವೆ.
10 ನೇ ಶತಮಾನದಲ್ಲಿ ಜನಿಸಿದ ರನ್ನನ ಕಲಾತ್ಮಕ ಪರಾಕ್ರಮವು ಮಹಾಕಾವ್ಯ ಮತ್ತು ಕಂದಪದ್ಯಗಳ ನಿಘಂಟು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವ್ಯಾಪಿಸಿದೆ.
ಈ ರನ್ನ ಕವಿ ಪರಿಚಯ (Ranna Kannada Poet Information in Kannada) ಲೇಖನವು ರನ್ನನ ಜೀವನ, ಕೃತಿಗಳು ಮತ್ತು ಪ್ರಭಾವವನ್ನು ಪರಿಶೀಲಿಸುತ್ತದೆ. ಅವರ ಕಾವ್ಯದ ತೇಜಸ್ಸಿನ ಮೇಲೆ ಮತ್ತು ಕನ್ನಡ ಸಾಹಿತ್ಯದ ಮೇಲೆ ಅವರು ಬೀರಿದ ಶಾಶ್ವತವಾದ ಪ್ರಭಾವದ ಮೇಲೆ ಬೆಳಕು ಚೆಲ್ಲುತ್ತದೆ.
Table of Contents
ರನ್ನ ಕವಿ ಪರಿಚಯ Ranna Kannada Poet | Ranna Information in Kannada
ಬಾಲ್ಯ ಜೀವನ
ಮುಧೋಳ ತಾಲೂಕಿನ ಬೆಳಗುಲಿ (ಈಗಿನ ರನ್ನಬೆಳಗಲಿ) ಎಂಬ ಗ್ರಾಮದಲ್ಲಿ ಕ್ರಿ.ಶ.949 ರಲ್ಲಿ ಜನಿಸಿದ ರನ್ನನ ತಂದೆಯ ಹೆಸರು ಜಿನವಲ್ಲಭ ಮತ್ತು ತಾಯಿ ಅಬ್ಬಲಬ್ಬೆ. ಜೈನ ಮನೆತನದ ಗೌರವಾನ್ವಿತ ಬಳೆಗಾರ ಕುಲದಿಂದ ಬಂದ ರನ್ನ ಅಂದಿನ ಹೆಸರಾಂತ ಗುರು ಅಜಿತಸೇನಾಚಾರ್ಯರ ಮಾರ್ಗದರ್ಶನದಲ್ಲಿ ಕಲಿಕೆ ಮತ್ತು ಕಲಾತ್ಮಕ ಅನ್ವೇಷಣೆಯ ಗಮನಾರ್ಹ ಪ್ರಯಾಣವನ್ನು ಪ್ರಾರಂಭಿಸಿದರು. ಜೈನಧರ್ಮೀಯನಾದರೂ ರನ್ನನು ವೈಶ್ಯ ಪಂಗಡದವನು ಎನ್ನಲಾಗುತ್ತದೆ.
ತನ್ನ ಕಾವ್ಯ ರಚನೆಗಳ ಪದ್ಯಗಳೊಳಗೆ ರನ್ನನು “ಪುಟ್ಟಿದ ಬಳೆಗಾರ ಕುಲದೊಳ್” ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಇದಲ್ಲದೆ, ಅವರು ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಹೆಚ್ಚಾಗಿ ತನ್ನ ಕಾವ್ಯದಲ್ಲಿ ಬಳಸಿದ್ದಾನೆ.
ಶಿಕ್ಷಣ
ಬಾಲ್ಯದಲ್ಲಿಯೇ ಎಲ್ಲರ ಮೆಚ್ಚಿನ ಹುಡುಗನಾಗಿದ್ದ ರನ್ನನು ಪದ್ಯ, ಹಾಡು, ಶ್ಲೋಕಗಳನ್ನು ಕಲಿತು, ಕಟ್ಟಿ ಹೇಳುವುದರಲ್ಲಿ ಹೆಸರುವಾಸಿಯಾಗಿದ್ದನು. ದೊಡ್ಡವನಾದಂತೆ ತಮ್ಮ ಕುಲಕಸುಬಾದ ಬಳೆಗಾರ ವೃತ್ತಿಯಲ್ಲಿ ನಿರಾಸಕ್ತಿ ಮೂಡಿತು. ಕುಲಧರ್ಮವಾದ ಜೆನಧರ್ಮವನ್ನು ಮತ್ತು ಕಾವ್ಯ ಕಲೆಯನ್ನು ಇನ್ನಷ್ಟು ಅರಿಯಬೇಕೆಂಬ ಆಸೆ ರನ್ನದಾಗಿತ್ತು. ಹುಟ್ಟಿದೂರಿನಲ್ಲಿ ಇದ್ಯಾವುದಕ್ಕೂ ಪ್ರಾಮುಖ್ಯತೆಯು ಇರಲಿಲ್ಲ. ಅವಕಾಶವೂ ಇರಲಿಲ್ಲ.
ಕಲಿಕೆಗಾಗಿ ಗುರುಗಳನ್ನು ಹುಡುಕುತ್ತಾ ವಿದ್ಯೆಗೆ ಸಹಾಯ ಬೇಡಿದರೂ ಸಹ ಉಪಯೋಗವಾಗಲಿಲ್ಲ. ಏಕೆಂದರೆ ಪ್ರತಿಯೊಬ್ಬರೂ ರನ್ನನ ಮನೆತನದ ಬಗ್ಗೆ, ಅವನ ಕುಲಕಸುಬಿನ ಬಗ್ಗೆ ಕೇಳಿ ವಿದ್ಯಾದಾನ ಮಾಡಲು ನಿರಾಕರಿಸಿದರು. ಆ ಕಾಲದಲ್ಲಿ ಶಿಕ್ಷಣವು ಕೇವಲ ರಾಜ ಮನೆತನಕ್ಕೆ ಮತ್ತು ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿತ್ತು.
ಹೀಗಿರುವಾಗ ಒಮ್ಮೆ ಒಂದು ಗುರುಗಳು “ಕೊಂಡು ತಂದು, ಹೊತ್ತು ಮಾರಿ, ಲಾಭಗಳಿಸಲು ವಿದ್ಯೆ ಏನು ಬಳೆಯ ಮಲಾರವೇ” ಎಂದು ಹಂಗಿಸಿದರು. ಇದು ರನ್ನನನ್ನು ಬಹಳಷ್ಟು ಕುಗ್ಗಿಸಿತು. ಆದರೆ ರನ್ನನು ಎದೆಗುಂದಲಿಲ್ಲ. ವಿದ್ಯಾಭ್ಯಾಸ ಮಾಡುವ ಪಣ ತೊಟ್ಟೆ ಬಿಟ್ಟ. ಆ ಕಾಲದಲ್ಲಿ ಜೈನ ಧರ್ಮಕ್ಕೂ ವಿದ್ಯೆಗೂ ನೆಲೆವೀಡು ಎನಿಸಿದ್ದ ಗಂಗರಾಜ್ಯಕ್ಕೆ ಪ್ರಯಾಣ ಬೆಳೆಸಿದ.
ಆ ಸಮಯದಲ್ಲಿ (ಕ್ರಿ.ಶ.೯೭೩-೯೮೬) ರಕ್ಕ ರಾಚಮಲ್ಲನು ಗಂಗಮಂಡಲದ ಅಧಿಪತಿಯಾಗಿದ್ದನು. ವಿದ್ಯಾವಂತ, ವಿದ್ಯಾಪಕ್ಷಪಾತಿಯಾದಂತಹ ಚಾವುಂಡರಾಯನು ಗಂಗ ದೊರೆಯ ಮಂತ್ರಿ ಯಾಗಿದ್ದನು.
ರನ್ನ ಚಾವುಂಡರಾಯನನ್ನು ಭೇಟಿ ಮಾಡಿದನು. ವಿದ್ಯಾಭ್ಯಾಸದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರನ್ನನಿಗೆ ಚಾವುಂಡರಾಯನು ಸಹಾಯ ಮಾಡಿದನು. ಅಜಿತ ಸೇನಾಚಾರ್ಯರಂತಹ ಪ್ರಸಿದ್ಧ ಗುರುಗಳ ಸಹಾಯದಿಂದ ಭಾಷೆ ಸಾಹಿತ್ಯಗಳಲ್ಲಿ ಪ್ರಾಬಲ್ಯತೆ ಪಡೆದನು. ಕನ್ನಡ, ಸಂಸ್ಕ್ರತ, ಪ್ರಾಕೃತ ಭಾಷೆಗಳಲ್ಲಿ ಪಾಂಡಿತ್ಯನಾದನು. ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತಗಳನ್ನೂ, ಭಾಸ, ಕಾಳಿದಾಸ, ಭಟ್ಟನಾರಾಯಣ, ಬಾಣ ಮುಂತಾದ ಕವಿಗಳ ಗದ್ಯ ಪದ್ಯ ನಾಟಕ ಗ್ರಂಥಗಳನ್ನೂ ಅಭ್ಯಸಿಸಿದನು.
ಇದಲ್ಲದೆ ರನ್ನನು ಅಲಂಕಾರಶಾಸ್ತ್ರ, ನಾಟ್ಯಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಕಲಿತನು. ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣಮುಂತಾದವರು ರನ್ನನ ಮೆಚ್ಚಿನ ಕವಿಗಳಾಗಿದ್ದರು.
ಜೈನ ಧರ್ಮವನ್ನ ಇನ್ನಷ್ಟು ಅರಿಯಬೇಕೆಂಬ ಹಂಬಲವು ಮೊದಲಿನಿಂದಲೂ ಇತ್ತು. ಅಜಿತಸೇನಾಚಾರ್ಯರಂತಹ ಅದ್ಭುತ ಗುರುಗಳ ಬಳಿ ಇರುವ ಭಾಗ್ಯ ಸಿಕ್ಕಾಗ ರನ್ನನು ಜೈನ ಧರ್ಮವನ್ನು ಸಂಪೂರ್ಣ ಅಭ್ಯಾಸ ಮಾಡಿದನು. ಇದರಿಂದಾಗಿಯೇ ರನ್ನನು ಜೈನ ಪುರಾಣವನ್ನು ಬರೆಯುವುದು ಸುಲಭವಾಯಿತು.
ಅನೇಕ ಸಾಮಂತರ ರಾಜ್ಯಸಭೆಗಳಿಗೆ, ಪಂಡಿತ ರಾಜ್ಯಸಭೆಗಳಿಗೆ ಮತ್ತು ಪಂಡಿತ ಮಂಡಲಿಗಳ ಕವಿಗೋಷ್ಠಿಗಳಿಗೆ ಚಾವುಂಡರಾಯನ ಸಹಾಯದಿಂದ ಹೋದ ರನ್ನನು ಅಲ್ಲಿ ತನ್ನ ಪಾಂಡಿತ್ಯವನ್ನೂ ಕವಿತಾ ಶಕ್ತಿಯನ್ನೂ ತೋರಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದನು. ಇದಲ್ಲದೆ ಅನೇಕ ತೀರ್ಥಕ್ಷೇತ್ರಗಳನ್ನುನೋಡುವ ಭಾಗ್ಯವು ಅವನದಾಯಿತು.
ಚಾವುಂಡರಾಯನ ಸಹಾಯದಿಂದ ವಿದ್ಯಾಭ್ಯಾಸ, ದೇಶಸಂಚಾರವನ್ನು ಮುಗಿಸಿದ ರನ್ನನಿಗೆ ತನ್ನ ಹುಟ್ಟೂರನ್ನು ತಲುಪುವ ಹಂಬಲವಾಯಿತು. ಆದ್ದರಿಂದ ತನ್ನ ಗುರುಗಳಾದ ಅಜಿತಸೇನಾಚಾರ್ಯರಿಗೆ ಮತ್ತು ಸಹಾಯ ಮಡಿದ ಚಾವುಂಡರಾಯನಿಗೆ ಬಿಳ್ಕೊಟ್ಟು ರನ್ನನು ತನ್ನ ಹುಟ್ಟೂರಿಗೆ ಮರಳುತ್ತಾನೆ.
ವಿವಾಹ ಮತ್ತು ವೈಯಕ್ತಿಕ ಜೀವನ
ಹುಟ್ಟೂರಿಗೆ ವಾಪಾಸ್ ಬಂದಾಗ ರನ್ನನು ಮದುವೆಯಾಗುತ್ತಾನೆ. ಈ ವೇಳೆಗೆ ತೈಲಪನ ಆಸ್ಥಾನದಲ್ಲಿ ವಿದ್ವಾಂಸನಾಗಿ ರನ್ನನು ನೇಮಕಗೊಂಡಿರುತ್ತಾನೆ. ರನ್ನನಿಗೆ ಜಕ್ಕಿ ಮತ್ತು ಶಾಂತಿ ಎಂಬ ಇಬ್ಬರು ಹೆಂಡತಿಯರಿದ್ದರು. ಆದರೆ ಬಹುಕಾಲದವರೆಗೆ ರನ್ನನಿಗೆ ಮಕ್ಕಳಾಗಿರಲಿಲ್ಲ. ರನ್ನನಿಗೆ 40ನೆ ವಯಸ್ಸು ದಾಟಿದ ಮೇಲೆ ಇಬ್ಬರು ಮಕ್ಕಳಾದರು – ಒಬ್ಬ ಮಗ, ಒಬ್ಬಳು ಮಗಳು. ಮಗನ ಹೆಸರು ರಾಯ ಮತ್ತು ಮಗಳು ಅತ್ತಿಮಬ್ಬೆ.
ರನ್ನನು ತೈಲಪನ ಆಸ್ಥಾನದಲ್ಲಿ ’ಸಾಹಸಭೀಮ ವಿಜಯ’ ಅಥವಾ ’ಗದಾಯುದ್ಧ’ ಎಂಬ ಕಾವ್ಯವನ್ನು ಬರೆದನು. ಇದು ಚಾಲುಕ್ಯ ವಂಶದ ಎರಡನೆಯ ತೈಲಪನ ಹೊಗಳಿಕೆ ಮತ್ತು ಮೆಚ್ಚುಗೆಗೆ ಪಾತ್ರವಾಯಿತು. ಈ ಕಾರಣಕ್ಕೆ ಚಕ್ರವರ್ತಿ ತೈಲಪನು ರನ್ನನಿಗೆ ’ಕವಿಚಕ್ರವರ್ತಿ’ ಎಂಬ ಬಿರುದನ್ನು ಕೊಟ್ಟನು.
ರನ್ನನು ಐದು ಕೃತಿಗಳನ್ನು ರಚಿಸಿದ್ದು ಕೇವಲ ಮೂರು ಕೃತಿಗಳು ಮಾತ್ರ ಲಭ್ಯವಾಗಿವೆ. ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ ಎಂಬ ಮೂರು ಕಾವ್ಯಗಳು ಮಾತ್ರ ಇಲ್ಲಿಯವರೆಗೆ ಲಭ್ಯವಾಗಿವೆ. ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ ಈವರೆಗೆ ಲಭ್ಯವಾಗಿಲ್ಲ.
ಜೈನ ಧರ್ಮದ ಎರಡನೆಯ ತೀರ್ಥಂಕರನಾದ ಅಜಿತನಾಥನನ್ನು ಕುರಿತಾಗಿ ರನ್ನನು ರಚಿಸಿದ ಪುರಾಣಕಾವ್ಯವೇ ಅಜಿತ ಪುರಾಣ. ಸ್ವತಃ ರನ್ನನೇ ಈ ಕೃತಿಯು ಆದಿಕವಿ ಪಂಪನ ಆದಿಪುರಾಣಕ್ಕೂ ಪೊನ್ನನ ಶಾಂತಿಪುರಾಣಕ್ಕೂ ಸರಿಸಮಾನ ಎಂದು ಹೊಗಳಿಕೊಂಡಿದ್ದಾನೆ.
ಜೈನನಾದ ರನ್ನ ವೈದಿಕಮತದ ಚಾಳುಕ್ಯ ದೊರೆಗಳ ಬಳಿ ಆಶ್ರಯವನ್ನು ಪಡೆದಾಗ ’ಸಾಹಸಭೀಮ ವಿಜಯ’ ಅಥವಾ ’ಗದಾಯುದ್ಧ’ ಕಾವ್ಯವು ರಾಚಿಸಿದನು. ಎರಡನೆಯ ತೈಲಪ ಚಕ್ರವರ್ತಿಯಾಗಿದ್ದಾಗ ಯುವರಾಜ ಸತ್ಯಾಶ್ರಯ ಇರಿವಬೆಡಂಗನು ಅನೇಕ ಯುದ್ಧಗಳನ್ನು ಮಾಡಿ ಕನ್ನಡ ರಾಜ್ಯವನ್ನು ಶತ್ರುಗಳ ಆಕ್ರಮಣದಿಂದ ಉಳಿಸಿದನು.
‘ರನ್ನಕಂದ’ ಒಂದು ನಿಘಂಟು ಆಗಿದ್ದು ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದು ಇದರ ವಿಶೇಷವಾಗಿದೆ.
ಮರಣ
ಗದಾಯುದ್ಧ ಕೃತಿಯ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಆದ್ದರಿಂದ ಕವಿ ರನ್ನನು 1020 ರಲ್ಲಿ ನಿಧನನಾಗಿದ್ದಾನೆ ಎನ್ನಲಾಗುತ್ತದೆ.
ರನ್ನನ ಕೃತಿಗಳು
- ಅಜಿತಪುರಾಣ
- ಸಾಹಸಭೀಮ ವಿಜಯಂ (ಗದಾಯುದ್ಧ)
- ಚಕ್ರೇಶ್ವರ ಚರಿತ
- ಪರಶುರಾಮ ಚರಿತ
- ರನ್ನಕಂದ.
ರನ್ನನ ಬಿರುದುಗಳು
- ಕವಿಚಕ್ರವರ್ತಿ
- ಕವಿರತ್ನ
- ಅಭಿನವ ಕವಿಚಕ್ರವರ್ತಿ
- ಕವಿ ರಾಜಶೇಖರ
- ಕವಿಜನ ಚೂಡಾರತ್ನ
- ಕವಿ ತಿಲಕ
- ಉಭಯಕವಿ.
ಸುಪ್ರಸಿದ್ಧ ಕನ್ನಡ ಕವಿ ರನ್ನನು ತನ್ನ ಆಳವಾದ ಸಾಹಿತ್ಯಿಕ ಕೊಡುಗೆಗಳೊಂದಿಗೆ ಓದುಗರು ಮತ್ತು ವಿದ್ವಾಂಸರನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದಾನೆ. ಜೈನ ಕುಟುಂಬದಲ್ಲಿ ಜನಿಸಿ, ಸಾಮಾಜಿಕ ಅಡೆತಡೆಗಳನ್ನು ಮೀರಿ ವಿದ್ಯಾಭ್ಯಾಸ ಮುಗಿಸಿದ ರನ್ನನ ಕೊಡುಗೆ ಜೈನ ಧರ್ಮಕ್ಕೆ ಹಾಗು ಕನ್ನಡ ಸಾಹಿತ್ಯಕ್ಕೆ ಅಪಾರ.
ಶತಶತಮಾನಗಳ ಪರಂಪರೆಯನ್ನು ಹೊಂದಿರುವ ರನ್ನ, ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿ ಕವಿಯಾಗಿ, ಕಾವ್ಯದ ಪ್ರಖರತೆಯ ಬೆಳಕಾಗಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಶಕ್ತಿಗೆ ಸಾಕ್ಷಿಯಾಗಿ ಇಂದಿಗೂ ಉಳಿದಿದ್ದಾನೆ.
ನಮ್ಮ ಈ ರನ್ನನ ಜೀವನಚರಿತ್ರೆ (kannada poet ranna information in kannada) ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇನ್ನೂ ಯಾವುದಾದರೂ ರನ್ನನ ಮಾಹಿತಿ (information about ranna in kannada) ನಿಮಗೆ ಇದ್ದಲ್ಲಿ ಅಥವಾ ನಾವು ಈ ಲೇಖನದಲ್ಲಿ ಮಿಸ್ ಮಾಡಿದ್ದಲ್ಲಿ ಅವುಗಳನ್ನು ಕಾಮೆಂಟ್ ಮಾಡಿ.
ಇದನ್ನೂ ಓದಿ:
- ಪಂಪ ಕವಿ ಪರಿಚಯ | Pampa Information in Kannada
- ಪೊನ್ನ ಕವಿ ಪರಿಚಯ | Information About Ponna in Kannada
- ಜನ್ನ ಕವಿ ಪರಿಚಯ | Kavi Janna Information in Kannada
Frequently Asked Questions (FAQs)
ರನ್ನನು ಎಲ್ಲಿ ಮತ್ತು ಯಾವಾಗ ಜನಿಸಿದನು?
ರನ್ನನು ಮುಧೋಳ ತಾಲೂಕಿನ ಬೆಳಗುಲಿ ಗ್ರಾಮದಲ್ಲಿ ಕ್ರಿ.ಶ. 949 ರಲ್ಲಿ ಜನಿಸಿದನು.
ಕವಿ ರತ್ನತ್ರಯರು ಎಂದು ಯಾರನ್ನು ಕರೆಯುತ್ತಾರೆ?
ಪಂಪ ,ಪೊನ್ನ, ರನ್ನ ಈ ಮೂವರನ್ನು ಕವಿ ರತ್ನತ್ರಯರು ಎಂದು ಕರೆಯಲಾಗುತ್ತದೆ.
ರನ್ನನ ಕೃತಿಗಳು ಯಾವುವು?
ಅಜಿತಪುರಾಣ, ಸಾಹಸಭೀಮ ವಿಜಯಂ (ಗದಾಯುದ್ಧ), ಚಕ್ರೇಶ್ವರ ಚರಿತ, ಪರಶುರಾಮ ಚರಿತ ಮತ್ತು ರನ್ನಕಂದ ಇವು ರನ್ನನ ಕಾವ್ಯ ಮತ್ತು ಕೃತಿಗಳು.
ರನ್ನನ ತಂದೆ ತಾಯಿಯರ ಹೆಸರೇನು?
ರನ್ನನ ತಂದೆಯ ಹೆಸರು ಜಿನವಲ್ಲಭ ಮತ್ತು ತಾಯಿಯ ಹೆಸರು ಅತ್ತಿಮಬ್ಬೆ.
ರನ್ನನ ಹೆಂಡತಿಯರ ಹೆಸರೇನು?
ರನ್ನನಿಗೆ ಇಬ್ಬರು ಹೆಂಡತಿಯರು: ಶಾಂತಿ ಹಾಗೂ ಜಕ್ಕಿ.
ರನ್ನನ ಮಕ್ಕಳ ಹೆಸರೇನು?
ರನ್ನನ ಮಗ ರಾಯ ಮತ್ತು ಮಗಳು ಅತ್ತಿಮಬ್ಬೆ.
ರನ್ನನ ಗುರುಗಳ ಹೆಸರೇನು?
ರನ್ನನ ಗುರುಗಳು ಅಜಿತಸೇನಾಚಾರ್ಯರು.
ರನ್ನನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದವರಾರು?
ರನ್ನನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದವನು ಗಂಗ ದೊರೆಯ ಮಂತ್ರಿ ಚಾವುಂಡರಾಯ.
ರನ್ನನಿಗೆ ಇರುವ ಬಿರುದುಗಳು ಯಾವುವು?
ಕವಿಚಕ್ರವರ್ತಿ, ಕವಿರತ್ನ, ಅಭಿನವ ಕವಿಚಕ್ರವರ್ತಿ, ಕವಿ ರಾಜಶೇಖರ, ಕವಿಜನ ಚೂಡಾರತ್ನ, ಕವಿ ತಿಲಕ, ಉಭಯಕವಿ, ಇವು ಕವಿ ರನ್ನನಿಗೆ (ranna kannada poet) ಇರುವ ಕೆಲವು ಬಿರುದುಗಳು.
ರನ್ನನಿಗೆ ಕವಿಚಕ್ರವರ್ತಿ ಬಿರುದನ್ನು ಕೊಟ್ಟವರಾರು?
ಚಕ್ರವರ್ತಿ ತೈಲಪನು ರನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನೂ ಕೊಟ್ಟನು.
ರನ್ನನ ಅಜಿತ ಪುರಾಣವು ಯಾರ ಕುರಿತಾಗಿದೆ?
ರನ್ನನು ರಚಿಸಿದ ಅಜಿತ ಪುರಾಣವು ಜೈನ ಧರ್ಮದ ಎರಡನೆಯ ತೀರ್ಥಂಕರನಾದ ಅಜಿತನಾಥನನ್ನು ಕುರಿತಾಗಿದೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.