100+ Appa Magalu Quotes in Kannada

ಅಪ್ಪ ಮತ್ತು ಮಗಳ ನಡುವಿನ ಸಂಬಂಧ ಬಹಳ ವಿಶೇಷವಾದುದು. ಅಪ್ಪ ಮಗಳಿಗೆ ಮೊದಲ ಹೀರೋ, ಅವಳ ಜೀವನದ ನಾಯಕ. ಮಗಳು ಅಪ್ಪನ ಕಣ್ಣಿನ ಹಾಗೆ. ಈ ಅನನ್ಯ ಬಾಂಧವ್ಯವನ್ನು ವರ್ಣಿಸಲು ಅನೇಕ ಸುಂದರ ನುಡಿಗಳಿವೆ.

ಅಪ್ಪ-ಮಗಳ ಸಂಬಂಧದ ಬಗ್ಗೆ ಹಲವಾರು ಕವಿಗಳು, ಲೇಖಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ನುಡಿಗಳು ನಮ್ಮ ಹೃದಯವನ್ನು ಮುಟ್ಟುತ್ತವೆ, ನಮ್ಮ ಅಪ್ಪನ ಪ್ರೀತಿಯನ್ನು, ನೆನಪುಗಳನ್ನು ಮೆಲುಕು ಹಾಕಿಸುತ್ತವೆ.

ಈ ಲೇಖನದಲ್ಲಿ ನಾವು ಅಪ್ಪ-ಮಗಳ ಬಗ್ಗೆ ಕೆಲವು ಅತ್ಯುತ್ತಮ ಕನ್ನಡ ನುಡಿಗಳನ್ನು (appa magalu quotes in kannada) ನೋಡೋಣ. ಈ ನುಡಿಗಳು ನಮ್ಮ ಅಪ್ಪನ ಬಗ್ಗೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ಅಪ್ಪನ ದಿನದಂದು ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ಈ father daughter quotes in kannada ಬಳಸಬಹುದು.

Best Appa Magalu Quotes in Kannada – Heartfelt Father-Daughter Bond Sayings

Best Appa Magalu Quotes in Kannada

ಮುಂದೆ ಎಷ್ಟೇ ಕೋಪ

ತೋರಿಸಿದರು, ಮನಸಲ್ಲಿ

ಬೆಟ್ಟದಷ್ಟು ಕನಸು ಪ್ರೀತಿ

ಹೊಂದಿರುವ ಜೀವವೇ….. ಅಪ್ಪ ❤️❤️

 

ಅಪ್ಪ ನೀನೇಕೆ ಹೀಗೆ….?

ಮೆಲ್ಲ ಧ್ವನಿಯಲ್ಲಿ ಅಮ್ಮನಿಗೆ ಏನು ಬೇಕು ಎಂದು ಕೇಳಿದವ! ನನ್ನ ಮೇಲೆ ಪ್ರೀತಿ ಇದ್ದರೂ ನನ್ನ ತಂಗಿಯ ಮೇಲೆ ತೋರಿಸಿದ!ರಾತ್ರಿ ತಡವಾದರೆ ಎಲ್ಲಿ ಎಂದು ಕೇಳಿದವ! 

ಅಮ್ಮನಿಗಿಂತ ನೀನೆ ನನ್ನ ಮೇಲೆ ಪ್ರೀತಿ ಹೊಂದಿದವ 💪🫶

 

ಮಗಳು….. 👩‍🦳

ವರದಕ್ಷಿಣೆ ಕಿರುಕುಳದಿಂದ

ಸುಟ್ಟುಕೊಂಡು ಸತ್ತ ಮಗಳ

ಚಿತೆಗೆ ಅಪ್ಪ ಬೆಂಕಿ ಇಡುವಾಗ

ಮಗಳ ಆತ್ಮ ಹೇಳಿತು…

ಅಪ್ಪ ಮತ್ತೆ ಸುಡಬೇಡ,

ತುಂಬಾ ನೋವಾಗುತ್ತೆ……😭😭

 

ಪ್ರೀತಿ ಪ್ರೇಮ ಅನೋ  ಲೋಕಗಿಂತ

ಅಪ್ಪ ಅಮ್ಮ ಅನೋ ಲೋಕನೆ ಚಂದ

ನಾವು ಬೇರೆ ಅವರ ಜೊತೆ ಇಷ್ಟೇ ಸುರಕ್ಷಿತವಾಗಿದರು

ತಂದೆ ತಾಯಿ ಜೊತೆ ಇರುವ ಹಾಗೆ ಇರೋದಿಲ್ಲಾ…..,

 

ಕ್ಷಣ ಕ್ಷಣಕ್ಕೂ ಬದಲಾಗೋ ಈ ಕಾಲದಲ್ಲಿ

ಬದಲಾಗದೆ ಇರೋದು ಒಂದೇ

ಅದು ಅಪ್ಪ ಅಮ್ಮನ ಪ್ರೀತಿ ಮಾತ್ರ 🌍♥️

 

ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯ, ಕರುಣೆ,

ಇವೆಲ್ಲವುಗಳ ಸಮಾನಾರ್ಥಕ ಪದವೇ “ಅಪ್ಪ”❤️

 

ಮಗಳೆಂದರೆ ಅಪ್ಪನಿಗೆ ಜೀವ

ಅಪ್ಪ ಎಂದರೆ ಮಗಳಿಗೆ ಪ್ರಪಂಚ

ಮಗಳ ಪುಟ್ಟ ಪುಟ್ಟ ಆಸೆಗಳಿಗೋಸ್ಕರ ತನ್ನ ದೊಡ್ಡ ಕನಸುಗಳನ್ನು ದೂರವಿರಿಸಿ

ಅವಳಿಗೇನೂ ಕಮ್ಮಿ ಇಲ್ಲದಂತೆ ಬೆಳೆಸಿ, ಕರುಳಿನ ಜೊತೆ ದೊಡ್ಡ ಸಂಬಂಧ ಬೆಸೆಯುತ್ತಾನೆ.

ಒಂದು ದಿನ ಬಿಟ್ಟು ಹೋಗುವ ಸಮಯ ಬಂದಾಗ ತನ್ನೊಳಗೆ ಎಲ್ಲಾ ನೋವನ್ನು ನುಂಗಿ ಒಳಗೊಳಗೇ ಅತ್ತು ನಗುವಿನಿಂದ ಕಳುಹಿಸುವ ಮಹಾತ್ಮ ಅಪ್ಪ💖🌏

 

ಅಪ್ಪ ಎಂದಾಕ್ಷಣ ಪ್ರೀತಿ, ಮಮತೆ, ದೃಢತೆ, ಸ್ಥಿರತೆ, ನೆಮ್ಮದಿ. ಜಗತ್ತನ್ನು ಗೆಲ್ಲೂತೀನಿ ಎಂಬ ನಂಬಿಕೆ .😍 I love you Appa ❤️

 

ಮಿಸ್ ಯು ಅಪ್ಪ ❤️ನನ್ನ ಉಡುಪು❤️ ಅಪ್ಪನ ಶರ್ಟ್ ಪ್ಯಾಂಟು.

ಅಪ್ಪ ಮಗಳ ಸಂಬಂಧ ತೀರದ ಅನುಬಂಧ 

 

ಬಾಲ್ಯದಲ್ಲಿ ಅಪ್ಪನಂತೆ ಪ್ರೀತಿ ಮಾಡುವ ಜೀವ ಬೇರೆ ಇಲ್ಲ ಎಂದು ತಿಳಿದವಳು,

ಯೌವ್ವನದಲ್ಲಿ ಇನಿಯನ ಪ್ರೀತಿ ಅಪ್ಪನ ಪ್ರೀತಿಗಿಂತ ಹೆಚ್ಚು ಎಂದು ಅವನ ಅರಸಿ ಹೋಗುವಳು,

ಇನಿಯ ತೊರೆದ ಮಾತ್ರಕ್ಕೆ ಅವನ ಸ್ಥಾನ ಯಾರು ತುಂಬಲು ಸಾಧ್ಯವಿಲ್ಲ ಎನ್ನುವಳು

ಹಾಗಿದ್ದರೆ ಅಪ್ಪ ಅಮ್ಮನ ಬಾಲ್ಯದ ಪ್ರೀತಿ ???, ತಂದೇ ತಾಯೀ ಪ್ರೀತಿ ದೊಡ್ಡ ಪ್ರೀತಿ.. ❤👨‍👩‍👧‍👧

 

“ನಮ್ಮ ಅಪ್ಪ ಅಮ್ಮ”

ನಮಗೆ ಅಸ್ತಿ ಮಾಡಿಲ್ಲೆ ಹೋದ್ರೂ

ಹೇಗೆ ಬದುಕೊಕು ಅನ್ನೋದನ್ನ

ಚೆನ್ನಾಗಿ ಕಲಿಸಿದ್ದಾರೆ.

 

ಅಮ್ಮನ ಮಡಿಲಲ್ಲಿ ಬೆಳೀತಾ ಬೆಳೀತಾ…ಅಪ್ಪನ ಪ್ರೀತಿ ಕಾಣಲೇ ಇಲ್ಲ..,

ಕೇಳಿದ್ದನ್ನೆಲ್ಲ ಕೊಡಿಸೋ ಅಮ್ಮನ ಕೈಗಳ ಹಿಂದೆ ಅಪ್ಪನ ದುಡಿಮೆಯ ಬೆವರು ಕಾಣಲೇ ಇಲ್ಲ…

ಅಮ್ಮ ನಮಗಾಗಿ ತನ್ನೆಲ್ಲ ಪ್ರೀತಿ ದಾರೆಯೆರೆದಳು..ಆದರೆ ಅಪ್ಪ ನಮಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದು ಕಾಣಲೇ ಇಲ್ಲ….. ಅಪ್ಪನಿಗೆ ತನ್ನ ಪ್ರೀತಿ ವ್ಯಕ್ತಪಡಿಸೋಕೆ ಬರ್ಲಿಲ್ಲ… ಆದರೂ ನಾವು ಅಪ್ಪನ ಪ್ರೀತಿ ಅರಿಯದೆ ಹೋದೆವು… 

 

ತಾನು ಪಟ್ಟ ಕಷ್ಟ ಮಕ್ಕಳಿಗೆ ಬಾರದಂತೆ ಬೇಡುವ ಏಕೈಕ ವ್ಯಕ್ತಿ. ಅಪ್ಪ !!

ಮುಂದೆ ಎಷ್ಟೇ ಕೋಪ ತೋರಿಸಿದರು. ಮನಸಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವವೇ ತಂದೆ !! NEVER HURTS YOUR FATHER❤️

 

ವಿದ್ಯೆ, ಬುದ್ದಿ, ಛಲದಿಂದ ತಲೆಯೆತ್ತಿ ಬದುಕಲು ಹೇಳಿಕೊಟ್ಟವನು ಅಪ್ಪ,….

ನಂಬಿಕೆ, ಪ್ರೀತಿ, ಮಮತೆ, ಮಮಕಾರವೇ ಜೀವನ ಎನ್ನುವುದ ತಿಳಿಸಿಕೊಟ್ಟವಳು ಅಮ್ಮ….

ಜೊತೆಗಿರದ ಜೀವಗಳು ಎಂದಿಗಿಂತ ಜೀವಂತ…

 

ಪಾಪ ಪುಣ್ಯ ಪುಸ್ತಕದ ಮೇಲೆ ದುಡ್ಡಿದ್ದರೆ ದುನಿಯಾ ಮೇಲೆ ದುಡ್ಡು ಇದ್ರೆ ಯಾರ ಪ್ರೀತಿಬೇಕಾದ್ರು ಸಿಗುತ್ತೆ. ಬ್ರೋ ಆದರೆ ದುಡ್ಡು ಇಲ್ಲದೆ ಸಿಗೋ ಪ್ರೀತಿ ಅಪ್ಪ . ಅಮ್ಮನ ಪ್ರೀತಿ ಮಾತ್ರ…💯

 

 ನಾನು ಬಯಸಿದ್ದು ನಮ್ಮ ಅಪ್ಪ ಅಮ್ಮ ಪ್ರೀತಿ ನಾ ಅದೇ ಸಿಗಲ್ಲ ಇನ್ನೂ  ಬೇರೆ ಅವ್ರು ಪ್ರೀತಿ ಸಿಗೋಕೆ ಹೇಗೆ ಸಾಧ್ಯ, ತಂದೇ ಮಗಳು. 👩🏽‍🦳❤

 

ಪ್ರತಿ ತಂದೆಗೆ ತನ್ನ ಮಗಳೆ ಬಂಗಾರ

ಹಲವಾರು ಸಲ

ತನ್ನ ಪತ್ನಿಯ ಮೇಲೆ ತೋರಿಸುವ ಪ್ರೀತಿಗಿಂತೆ

ಮಗಳ ಮೇಲೆ ಅಪಾರ ಪ್ರೇಮ

ಹಂಚುವುದು ತಂದೆಗೆ ಮಾತ್ರ ಸಾಧ್ಯ….

 

ಮಗಳು ಏನಾದರೂ ಕೇಳಿದರೆ

ಇಲ್ಲ ಎಂದು ಹೇಳದ ಏಕೈಕ ಜೀವಿ ತಂದೆ……

I Love You ಅಪ್ಪ, ……….. ಅಪ್ಪ ಅನ್ನೋ ಅದ್ಬುತ ಸಾಲು 🙏

 

ತಪ್ಪು ಮಾಡಿದಾಗ ತಿದ್ದಿ ನಡೆಸಿದ

ಕಾರುಣ್ಯಮೂರ್ತಿ…… 😊

ನನ್ನ ಕನಸಿಗೆ ಕಾವಲಾಗಿ ನಿಂತಿರುವೆ

ನನಗೆ ನೀನೇ ಸ್ಫೂರ್ತಿ…… 🙏

ನಿರಾಕಾರವಾದದನ್ನು ಕಣ್ಣೆದುರು ತಂದು

ಕೊಡುವ ಸಾಕಾರ ಮೂರ್ತಿ…. 💯

ನಿನ್ನ ಮನದ ಪ್ರೀತಿಯ ಭಾವಕೆ

ನಾ ತಂದು ಕೊಡುವೆ ಸದಾ ಕೀರ್ತಿ….🤗

ಎಷ್ಟು ಬರೆದರೂ ಪದಗಳೇ ಸಾಲುತ್ತಿಲ್ಲ

ಅಪ್ಪ ನಾ ನಿನ್ನ ಪ್ರೀತಿ… 😊

 

ತಂದೆ ಪ್ರೀತಿ ❤

ಅಪ್ಪ ಎಂದರೆ ಭಯ.!

ಅಪ್ಪ ಎಂದರೆ ಹುದುಗಿದ ಪ್ರೀತಿ..!!

ಏನನ್ನಾದರೂ ಕೇಳಲು ಹಿಂಜರಿಕೆ,

ಬೈಯುವರೋ ಎನ್ನುವ ಆತಂಕ…!!!

ಅವರ ಮುಂದೆ ಧ್ವನಿ ಎತ್ತಲು ನಡುಕ….!!!!

ಅವರು ಒಮ್ಮೆ ನಕ್ಕು ಮಾತಾಡಿದಾಗ

ತಿಳಿಯುವುದು ಇದೆಲ್ಲಾ ಭಯವಲ್ಲ

ಅವರ ಮೇಲಿರುವ ಗೌರವ ಎಂದು….!!!!!

Love u Appaa………❤

 

ಆಕಾಶದಷ್ಟು ಪ್ರೀತಿ ಕೊಟ್ಟ ಅಕ್ಕರೆಯ ಅಪ್ಪ

ನನ್ನೆಲ್ಲಾ ಕನಸು ನನಸು ಮಾಡುವದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ ಸ್ಫೂರ್ತಿದಾಯಕ

ಕಷ್ಟ ಸುಖಗಳಲ್ಲಿ ಬೆನ್ನೆಲುಬಾಗಿ ನಿಂತು ದಾರಿ ತೋರಿದ ಗುರು

ನನ್ನೆಲ್ಲಾ  ಸರಿ ತಪ್ಪುಗಳನ್ನು ತಿದ್ದಿ  ಜೀವನ ಪಾಠ ಕಲಿಸಿದ ಸಹನಾಮಯಿ. ನನಗಾಗಿಯೇ ಆ ದೇವರು ಕೊಟ್ಟಿದ್ದ ವರ ನನ್ನ ಮಾದರಿ ವ್ಯಕ್ತಿ ನನ್ನ ತಂದೆ.

 

ಒಂದು ಹೆಣ್ಣು ಮಗು ಹುಟ್ಟಿದಾಗ ಸಮಾಜ ಏನ್ ಹೇಳಿದರು. ಲೆಕ್ಕಿಸದೆ ತನ್ನ ಮಗಳ ಸುಖಕ್ಕೊಸಕರ, ತಾನು ಕಷ್ಟವನ್ನು ಅನುಭವಿಸುತ್ತಾ, ತನ್ನ ಆಸೆ ಆಕಾಂಕ್ಷೆಗಳನ್ನು ಮರೆತು, ತನ್ನ ಮಗಳ ಆಸೆ ಆಕಾಂಕ್ಷೆಗಳನ್ನು ನೆರವೇರಿಸಲು ಮುಂದಾಗುವ ಒಂದೇ ಜೀವ.

ಅಂದರೆ ಅದು “ತಂದೆ”.

 

ನಿನ್ನಂತ ಅಪ್ಪ ಇಲ್ಲ ಆ ಹ ಹ ಒಂದೊಂದು ಮಾತು ಬೆಲ್ಲ ಆ ಹ ಹ ನೀನೆ ನನ್ನ ಜೀವ ನೀನೆ ನನ್ನ ಪ್ರಾಣ ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು..ಅಪ್ಪ ಮಗಳ ಬಾಂಧವ್ಯ ಬೆಸೆಯುವ ಸುಂದರವಾದ ಗೀತೆ 💞💞💞💞💞💞

 

ಅಪ್ಪ ಮಗಳ ಸಂಭಂದನೆ ಒಂದು ದೇವರು ಕೊಡೋ ಅಮೂಲ್ಯ ಪ್ರೀತಿ ಅದು ಆದರೆ ಮಗಳು ಬೆಳೆದ ಮೇಲೆ ಮದುವೆ ಮಾಡಿ ಬೇರೆ ಮನೆಗೆ ಕಳ್ಳಿಸೋದನ್ನ ನೆನೆಸಿಕೊಂಡರೆ ಮಗಳು ಇಷ್ಟು ಬೇಗ ಯಾಕೆ ಬೆಳೀತಾ ಇದಳಪ್ಪ ಅಂತ ಆತಂಕ ಆಗುತ್ತೆ, ವಿದ್ಯೆ ಬುದ್ಧಿ ಛಲದಿಂದ ತಲೆಯೆತ್ತಿ ಬದುಕಲು ಹೇಳಿಕೊಟ್ಟವನು ಅಪ್ಪ…..😍

 

ನಂಬಿಕೆ ಪ್ರೀತಿ ಮಮತೆ ಮಮಕಾರವೇ ಜೀವನ ಎನ್ನುವುದನ್ನು ತುಳಿಸಿಕೊಟ್ಟವಳು ಅಮ್ಮ….

ಬೇಡಿದ್ದಿನ್ನೆಲ್ಲ ಕೊಡುವವನು ದೇವರಾದರೆ….

ಬೇಡದೆ  ಬಯಸಿದ್ದೆಲ್ಲವ ಕೊಡುವವನು ಅಪ್ಪ 😍🌎

 

ಅನಿಸಬಹುದು ಇವರಿಗೆ ಕೋಪ ಎನ್ನುವ ರೀತಿ  ಮನದಲ್ಲಿ ಹೊತ್ತಿರುವರು ಸಮುದ್ರದಷ್ಟು ಪ್ರೀತಿ!!

ಅದರೆ ಪ್ರಪಂಚಕ್ಕೆ ನೀವು ಎಲ್ಲರಂತೆ ಒಬ್ಬ ಅಪ್ಪ

ಅದರೆ ನನಗೇ ನೀವೇ ಪ್ರಪಂಚ🌎 ಅಪ್ಪ 😍

I love you appa ✨✨🙂❤️

 

ಅಪ್ಪನ ರಾಜ ಕುಮಾರಿ ಮಗಳು… ಅಪ್ಪ, ಮಗಳ ಪ್ರೀತಿ ಅಗಸದಷ್ಟು ಅದಕ್ಕೆ ಬೆಲೆಕಟ್ಟಲಾಗುವುದಿಲ್ಲ, 💖💖 ತಂದೆ ಮಗಳ ಪ್ರೀತಿ ಆಕಾಶದ ರೀತಿ! ವರ್ಣಿಸೋಕೆ ಪದಗಳೇ ಸಾಲಲ್ಲ… 

ಮಗಳ‌ ಮೊದಲ ಹೀರೋ ಅಪ್ಪ… 

 

ನನಗೆ ನಮ್ಮ ಅಪ್ಪ ಅವ್ವಗೆ ಸೇವೆ ಮಾಡೋ ಹೆಂಡತಿ ಸಿಗಲಿ ಎಂದು ಎಲ್ಲರೂ ಬಯಸೋದು,ಎಂತಹವಳಾದರು ಸರಿ ಅವಳಿಗೆ ಕಾಳಜಿ ಪ್ರೀತಿ ತೋರಿಸಿ ಅಕ್ಕರೆಯಿಂದ ನೋಡಿಕೊಳ್ಳುವೆ  ಅವಳ ಮನಸ್ಸು ಗೆಲ್ಲುವೆ ಎಂದು ಯಾವ ಗಂಡಸ್ಸು ಬಯಸೋದಿಲ್ಲ ಅದಕ್ಕೆ ಸಂಸಾರ ಹಾಳಾಗೋದು.

 

ಅಪ್ಪ… ಆಕಾಶದಷ್ಟು ಪ್ರೀತಿ ಕೊಡುವ ಅಕ್ಕರೆಯ ಗೆಣೆಕಾರ,

ಕಾಣುವ ಕನಸುಗಳಿಗೆ ಬೆಂಗಾವಲಾಗಿ ನಿಂತು ಬಣ್ಣ ಬಳಿಯುವ ಕಲೆಗಾರ, ಮನೆಯ ಒಳಗೂ, ಹೊರಗೂ ಜವಾಬ್ದಾರಿಯನ್ನ ಹಂಚಿಕೊಳ್ಳುವ ಸಾಹುಕಾರ.

 

ಎತ್ತಿ ಮುದ್ದಾಡಿ ಬೆಳೆಸಿದ ಅಪ್ಪ

ಅವನೊಬ್ಬ ಅದ್ಬುತ..

 

ನನ್ನ ಪುಟ್ಟ ಪ್ರಪಂಚದ

ಹೊಂಬೆಳಕು ಅಪ್ಪ.

ಅವನೊಬ್ಬ ಅದ್ಬುತ.

 

ಸರಿ ಸಾಟಿ ಯಾರ ಪ್ರೀತಿ ಜಗದಲ್ಲಿ

ಅವನ ಪ್ರೀತಿಯ ಮುಂದೆ…

 

ಎಡವಿದಾಗ ಸರಿಯಾಗಿ

ನಡೆಯುವುದು ಕಲಿಸಿದ.

ಅಕ್ಷರವ ತಿದ್ದಿ ತಿದ್ದುತ್ತಲೆ

ಜೀವನ ಪಾಠವ ಬೋಧಿಸಿದ…

 

ಸಮಾಜದಲ್ಲಿ ಹೆಮ್ಮೆಯಿಂದ

ಬಾಳುವುದ ತಿಳಿಸಿದ

ಪ್ರತಿ ಯಶಸ್ಸಲ್ಲು ತನ್ನ ಖುಷಿಯ ಸಂಭ್ರಮಿಸಿದ..!!

 

ಅಪ್ಪನ_ಪ್ರೀತಿ ❤️

ಮಗಳು ಹುಟ್ಟೋದೆ ನಿಸ್ವಾರ್ಥ ಪ್ರೀತಿ ಹಾಗೂ ಕಾಳಜಿ ಮಾಡೋಕೆ, 

ಮಗಳು ಎಲ್ಲರ ಹಣೆಬರಹದಲ್ಲಿ ಇರುವುದಿಲ್ಲ. 

ದೇವರು ಇಷ್ಟವಾದ ಮನೆಯಲ್ಲಿ ಮಾತ್ರ ಮಗಳ ಹುಟ್ಟೋದು.

 

ಅಪ್ಪ ಅಮ್ಮನ ಹೆಗಲೇರಿದ ಮೇಲೇ

ಮುಗಿಯದ ಮುಗಿಲೇನು ನಿಲುಕದೆ?

ಪಾರವಿಲ್ಲದ ಪ್ರೀತಿ, ಬೇಧವರಿಯದ ಮಮತೆ

ಬದುಕು ಅಂಗೈಯಲ್ಲಿಟ್ಟು ಸಲುಹದೆ?, ಮಗಳ ಪ್ರಪಂಚದಲ್ಲಿ ಅಪ್ಪನೇ *ಆಗಸ*…

ಅಪ್ಪನೆಂಬ ಈ ಆಗಸಕ್ಕೆ ಮಗಳೇ *ನಕ್ಷತ್ರ*…

ಆಗಸಕ್ಕೆ ಮಿನುಗು ತಾರೆ ತಾನೇ ಚೆಂದ?

ಆಗಷ್ಟೇ ಅಪ್ಪ ಹೊಳೆವನು,

ತನ್ನೆಲ್ಲ ನೋವ ಕಳೆವನು.

 

ಸ್ನೇಹಜೀವಿ ಅಪ್ಪ… 

ಆಕಾಶದಷ್ಟು ಪ್ರೀತಿ ಕೊಡುವ ಅಕ್ಕರೆಯ ಗೆಣೆಕಾರ,

ಕಾಣುವ ಕನಸುಗಳಿಗೆ ಬೆಂಗಾವಲಾಗಿ ನಿಂತು ಬಣ್ಣ ಬಳಿಯುವ ಕಲೆಗಾರ, 

ಮನೆಯ ಒಳಗೂ, ಹೊರಗೂ ಜವಾಬ್ದಾರಿಯನ್ನ ಹಂಚಿಕೊಳ್ಳುವ ಸಾಹುಕಾರ….

ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು!!

 

ಅಪ್ಪ ಅಂದರೆ ನನ್ನ ಹೃದಯದಲಿ ಸದಾ ಬೆಳಗುವ ಜ್ಞಾನದ ಬೆಳಕು

“ಅಪ್ಪ” ಈ ಶಬ್ದದಲ್ಲೇ ಅದೆಂಥದೋ  ಗತ್ತು, ಗಾಂಭೀರ್ಯ…… 

ತಾನು ಎಲ್ಲಾ ಕಡೆ ಇರುದಕ್ಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವರು. 

ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ಎನ್ನಿಸುವ ಶಿಸ್ತು. ಅಪ್ಪನ ಬಗ್ಗೆ ಅದೆಂಥದ್ದೋ ಭಯ.

 

ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದು ಅಲ್ಲ. ಆದರೆ ತಾಯಿಯ ಹಾಗೆ ಅದನ್ನು ತೋರಿಸುದಿಲ್ಲ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ  ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಈಡೆರಿಸುತಾರೆ. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ಈ ಡೇರಿಸುತಾರೆ.

 

ಅಪ್ಪ ❤️💚🌎💫❤️‍🩹

ಅಮ್ಮ ❤️💚🌎💫❤️‍🩹

ನನ್ನ ದೇವರು 💐🙏

ನನ್ನ ಪ್ರಪಂಚ ನನ್ನ ಅಪ್ಪ ಅಮ್ಮ ❤️💚🌎💫❤️‍🩹💐🙏

ನನ್ನ ಮೊದಲ ಪ್ರೀತಿ ನನ್ನ ಅಮ್ಮ ❤️💚🌎💫❤️‍🩹💐🙏

ನನ್ನ ಜೀವನದ ಸೂಪರ್ ಹೀರೋ ನನ್ನ ಅಪ್ಪ ❤️💚🌎💫❤️‍🩹💐🙏

 

ಅಪ್ಪ ಅಂದರೆ ನನ್ನ ಹೃದಯದಲಿ ಸದಾ ಬೆಳಗುವ ಜ್ಞಾನದ ಬೆಳಕು

“ಅಪ್ಪ” ಈ ಶಬ್ದದಲ್ಲೇ ಅದೆಂಥದೋ  ಗತ್ತು, ಗಾಂಭೀರ್ಯ…… 

ತಾನು ಎಲ್ಲಾ ಕಡೆ ಇರುದಕ್ಕೆ ಸಾಧ್ಯವಿಲ್ಲ ಅಂತಾ ಗೊತ್ತಾಗಿ ತಾಯೀನ ಸೃಷ್ಟಿ ಮಾಡಿದ ದೇವರು. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ಎನ್ನಿಸುವ ಶಿಸ್ತು. ಅಪ್ಪನ ಬಗ್ಗೆ ಅದೆಂಥದ್ದೋ ಭಯ.

 

ಹಾಗಂತ ಆತನಲ್ಲಿ ಪ್ರೀತಿ ಇಲ್ಲ ಎಂದು ಅಲ್ಲ. ಆದರೆ ತಾಯಿಯ ಹಾಗೆ ಅದನ್ನು ತೋರಿಸುದಿಲ್ಲ. ಅಪ್ಪನ ಪ್ರೀತಿ ಅರ್ಥ ಆಗೋದು ಬಹಳ  ಕಷ್ಟ. ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಈಡೆರಿಸುತಾರೆ. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ಈದೇರಿಸುತಾರೆ.,

 

ಹೆತ್ತದ್ದು ಅಮ್ಮನಾದರೂ

ಒಳಗೊಳಗೆ ಅತ್ತದ್ದು ಅಪ್ಪ!

 

ಹುಟ್ಟಿದಾಗ ಕೂಗಿದ್ದು ಅಮ್ಮನಾದರೂ

ಬಿಗಿದಿಟ್ಟ ಉಸಿರು ಬಿಟ್ಟದ್ದು ಅಪ್ಪ!

 

ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ

ಹೊಟ್ಟೆ ಕಟ್ಟಿ ದುಡಿದು ತಂದಿದ್ದು ಅಪ್ಪ!

 

ಕೇಳಿ ಕೇಳಿದ್ದನ್ನ ಕೊಡಿಸಿದ್ದು ಅಮ್ಮನಾದರೂ

ಕೊಡಿಸಲು ಕಾಸು ಗಳಿಸಿದವನೆ ಅಪ್ಪ!

 

ಹರಸಿ ಹಾರೈಸಿ ಮುದ್ದಿಸಿದ್ದು ಅಮ್ಮನಾದರೂ

ಪ್ರೀತಿ ವ್ಯಕ್ತಪಡಿಸಲಾಗದೆ ಮೂಕನಾಗಿದ್ದು ಅಪ್ಪ!

 

ನಾನು ಕಂಡ ದೇವರು ಅಮ್ಮನಾಗಿದ್ದರು

ಆ ದೇವರಿಗೂ ದೇವರಾಗಿದ್ದವನು ಅಪ್ಪ!

 

ಚಿಕ್ಕ ಚಿಕ್ಕ ವಿಷಯಕ್ಕೆ breakup ಮಾಡ್ಕೊಳೋ ಈ ಕಾಲದಲ್ಲಿ

ಎಷ್ಟೇ ವರ್ಷಗಳು ಕಳೆದ್ರು ನಿನಗೆ ನಾನು ನನ್ಗ ನೀನು ಅಂತ

ಜೀವಕ್ಕೆ ಜೀವಾ ಆಗಿರೋ ನಮ್ ಅಪ್ಪ ಅಮ್ಮನ ಪ್ರೀತಿ

ನೋಡ್ತಿದ್ರೆ ಇಷ್ಟೇ ಸಾಕು ಈ ಜನ್ಮಕ್ಕೆ ಅನ್ಸುತ್ತೆ..!🥺🫀🌏

 

ಎಲ್ಲ ಸಂಬಂಧಗಳು ನಿನ್ನ ಪ್ರೀತಿಯಷ್ಟೇ ಪವಿತ್ರವಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಪ್ಪ

ನಿಸ್ವಾರ್ಥ ಪ್ರೀತಿ ನಿನ್ನ ಬಿಟ್ಟು ಬೇರೆ ಯಾರಿಂದಾನು ಸಿಗಲ್ಲ ಅನ್ನೋ ಸತ್ಯ ತಿಳಿಬೇಕಾದ್ರೆ ನಾನು ನಿನ್ನೆ ಕಳ್ಕೋಬೇಕಾಯ್ತು

ನಿನ್ನ ಕಳ್ಕೊಂಡಿರೊ ನೋವು ಎಷ್ಟಿದಿಯೋ ನೀನು ಮತ್ತೆ ನನ್ ಹೊಟ್ಟೆಲೆ ಹುಟ್ಟಿ  ಬಂದಿದಿಯ  ಅನ್ನೊ ಖುಷಿನೂ ಅಷ್ಟೆಇದೆ,

Miss you appa💔🌍

 

ಪ್ರೀತಿ, ವಾತ್ಸಲ್ಯದ ಸ್ಥಾನ ಅಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿರೂಪ ಅಪ್ಪ.

ಬದುಕು ರೂಪಿಸಿ, ಜೀವನ ಪಾಠ ಕಲಿಸಿ, ಕಿರು ಬೆರಳ ಹಿಡಿದು ಮುನ್ನಡೆಸಿ ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ ತಂದೆಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

 

ಅಪ್ಪ – ಮಗಳು❤️😍🧿

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. 

ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ❤️😍🧿

 

ಮಗಳ ಮೊದಲ ಪ್ರೀತಿ 

ಮಗನ ಮೊದಲ ನಾಯಕ

❣️ ಅಪ್ಪ❣️

 

❣️ ಅಪ್ಪ❣️

ಕಷ್ಟ ಎಂದರೇನು……?

ಎಂಬ ನನ್ನ ಪ್ರಶ್ನೆಗೆ

ಅವರ ಬೆವರು ಉತ್ತರವಾಗಿತ್ತು …….

 

ನನ್ನ ಮೇಲೆ ಕೋಟಿಗಟ್ಟಲೆ

ಪ್ರೀತಿ ಇದ್ರು,

ತನ್ನೊಳಗೇ  ಬಚ್ಚಿಟ್ಟು

ಬಯ್ಯುವ ರೀತಿ ಬುದ್ದಿ ಹೇಳ್ತಿದ್ದ

ನನ್ನ ಮೊದಲನೆಯ ಗುರು ..! 

🥰ಅಪ್ಪ🥰

💖I Love You ಅಪ್ಪ💖

 

ಆ ದೇವರು ಎಲ್ಲಾ ಕಡೆ ಇರೋಕಾಗಲ್ಲ ಅಂತ ಅದ್ಬುತವಾದ ಶಕ್ತಿಯಂತ ಅಪ್ಪನನ್ನು ಸೃಷ್ಟಿ ಮಾಡಿದಾನೆ, ಅಪ್ಪನ ಕರುಣೆ, ತ್ಯಾಗ, ಪ್ರೀತಿ, ಕಾಣಿಸೋದೆ ಇಲ್ಲ. ಅಪ್ಪ ಅಂದ್ರೆ ಬರಿ ಕೋಪಿಷ್ಟ, ಅಂತ ಅಂದ್ಕೊತೀವಿ,‌ಅಮ್ಮ‌ನ ಪರದೆಯ ಹಿಂದೆ ಇರುವ ಅಪ್ಪನ ಬೆಲೆ ಗೊತ್ತಾಗುವುದೆ ಇಲ್ಲ. 

ಅಪ್ಪ ಅದ್ಬುತ ಶಕ್ತಿ, ಧೈರ್ಯ, ತ್ಯಾಗಮಯೀ‌. ಐ ಲವ್ ಯುವ್ ಅಪ್ಪಾ ಅಪ್ಪ ದೀಪಕ್ಕೆ ಎಣ್ಣೆ ಬತ್ತಿ ಇದ್ದಂತೆ ಅಪ್ಪಾನೆ ಬೆಳಕಿಗೆ ಕಾರಣ ಅಂಥ ಗೊತ್ತೆ ಆಗಲ್ಲ……….

 

ಮಕ್ಕಳು ಎಷ್ಟೇ ದೊಡ್ಡವರಾದರು ಎಷ್ಟೇ ಸಂಪಾದನೆ ಮಾಡಿದರು ತಂದೆ ತಾಯಿಯರಿಗೆ ಪುಟಾಣಿಗಳಂತೆ ಕಾಣಿಸುತ್ತಾರೆ….. ನಿಮ್ಮ ಈ ಪ್ರೀತಿಗೆ ನಾನು ಸದಾ ಚಿರಋಣಿ🙏

 

ತಾಯಿ ಕೋಡೊ ಕೈತುತ್ತಲ್ಲಿ ಪ್ರೀತಿ ಇದೆ

ಅಪ್ಪ ಕೋಡೊ ಕೈ ತುತ್ತಲ್ಲಿ ಜೀವನದ ಪಾಠ ಇದೇ…., ಒಬ್ಬ ತಂದೆಯಾಗಿ ಮಗಳ ಬೇಕು ಬೇಡಗಳನ್ನು ಈಡೇರಿಸಬೇಕಾದದ್ದು ಜನ್ಮದಾತರ ಆದ್ಯ ಕರ್ತವ್ಯ.

ವಿಶ್ವದಲ್ಲಿ ಪ್ರೀತಿಗೆ ಅಜರಾಮರ ಸ್ಥಾನವಿದೆ.

ಅಲ್ಲಿ ಬಡವ ಬಲ್ಲಿದ, ವರ್ಣಭೇದ, ಧರ್ಮವನ್ನು ಮೀರಿದ ಎಲ್ಲೆ ಇದೆ.

ಪ್ರೀತಿ ಅಮರವಾಗಿತ್ತು.

ಅಮರವಾಗಿದೆ

ಅಮರವಾಗಿಯೂ ಇರುತ್ತದೆ.

ಪ್ರೀತಿಯ ನೆಲೆ ಮತ್ತು ಸೆಲೆ ಪುಟ್ ಪಾತ್ ನನ್ಮಕ್ಳಿಗೆ ಗೊತ್ತಾಗುವುದಿಲ್ಲ.

ಪ್ರೀತಿಗೆ ಜಯವಾಗಲಿ.

ಇದನ್ನೂ ಓದಿ:

  1. 100+ Appa Quotes in Kannada
  2. Appa Amma Quotes in Kannada (ಅಪ್ಪ ಅಮ್ಮ Quotes)
  3. 100+ Happy Birthday Wishes for Father in Kannada

Father Daughter Quotes in Kannada

ಪ್ರತಿಯೊಬ್ಬರ ಬದುಕಿನ ಮೊದಲ ಹೀರೋ ಅದು ತಂದೆ. ತಮ್ಮ ಸುಂದರ ಕುಟುಂಬಕ್ಕಾಗಿ ತಂದೆ ಸಾಕಷ್ಟು ಶ್ರಮಿಸುತ್ತಾರೆ. ಜತೆಗೆ, ಮಕ್ಕಳಿಗೆ ಅಷ್ಟೇ ಪ್ರೀತಿಯನ್ನು ತೋರಿಸುತ್ತಾರೆ. ತಂದೆಯ ಪ್ರೀತಿಯ ಮಾತು, ಅವರು ತೋರುವ ಧೈರ್ಯ, ಅವರ ಸ್ಫೂರ್ತಿ ಎಲ್ಲವೂ ಸುಂದರ. ತಂದೆ ಪಕ್ಕದಲ್ಲಿದ್ದಾರೆ ಎಂದರೆ ಆ ಖುಷಿ, ಧೈರ್ಯವೇ ಬೇರೆ. ಮಕ್ಕಳನ್ನು ತಿದ್ದಿ ತೀಡಿ ಬೆಳೆಸುವಾಗ ತಂದೆ ಒಂದೊಂದು ಸಲ ಹೊರನೋಟಕ್ಕೆ ಕಠೋರವಾಗಿ ಕಾಣಬಹುದು. ಆದರೆ, ಮಕ್ಕಳ ಬಗ್ಗೆ ಆಂತರ್ಯದಲ್ಲಿರುವ ಅವರ ಪ್ರೀತಿ, ಮಗುವಿನ ಮನಸ್ಸು ಮಾತ್ರ ಸದಾ ನಿರ್ಮಲ ಮತ್ತು ಸುಂದರ…

 

ಅಪ್ಪನ ಹೆಗಲು,

ವಿಶಾಲ ಮುಗಿಲು!!

 

ನನ್ನ ಬಾಳ ಸಾರಥಿ,

ನನ್ನಪ್ಪ ಸಹನಾಮೂರ್ತಿ!!

 

ಅನಿಸಬಹುದು ಇವರಿಗೆ ಕೋಪ ಎನ್ನುವ ರೀತಿ,

ಮನದಲ್ಲಿ ಹೊತ್ತಿರುವರು ಸಮುದ್ರದಷ್ಟು ಪ್ರೀತಿ!!

 

ಎಷ್ಟೇ ಕಷ್ಟ ಇದ್ದರೂ ತೋರಿಸಲ ನಮ್ಮ ಮುಂದೆ,

ತನವರೆಲ್ಲಾ ಚೆನಾಗಿರಲ್ಲಿ ಅನ್ನೋ ಆಸೆ ಒಂದೇ!!

 

ಪ್ರಪಂಚಕ್ಕೆ ನೀವು ಎಲ್ಲರಂತೆ ಒಬ್ಬ ಅಪ್ಪ,

ನಮ್ಮ ಪ್ರಪಚನೆ ನೀನಪ್ಪ!!

 

ತ್ಯಾಗಮಯಿ ತಂದೆ..

 

ನನ್ನ ಪ್ರೀತಿಯ ತಂದೆ ಅಂದ ತಕ್ಷಣವೇ ನೆನಪಾಗುವ ಮೊದಲ ಪದವೇ ತ್ಯಾಗಮಯಿ. ತಮ್ಮ ಜೀವನವನ್ನೆಲ್ಲ ನಮಗೋಸ್ಕರ ಬಿಸಿಲು, ಮಳೆ, ಚಳಿ ಯಾವುದಕ್ಕೂ ಬಗ್ಗದೇ ಹಗಲು-ಇರುಳು ಎನ್ನದೆ ದುಡಿದ ಅಪ್ಪ ನನ್ನ ಪಾಲಿಗೆ ಸರ್ವಸ್ವ. ತನಗೇನು ಬೇಕು ಎನ್ನುವುದಕ್ಕಿಂತ ತನ್ನ ಮಗಳಿಗೆ ಏನು ಬೇಕು ಅಂತ ಯೋಚಿಸುತ್ತ, ಅಮ್ಮನಿಗಿಂತ ಜಾಸ್ತಿ ಪ್ರೀತಿ ಕೊಡುವ ಶ್ರಮಜೀವಿ. ತನ್ನ ಜೀವನದಲ್ಲಿ ಕಲ್ಲು-ಮುಳ್ಳು ಏನೇ ಬಂದರೂ ಅದನ್ನು ಸಹಿಸಿಕೊಂಡು ನನ್ನ ಭವಿಷ್ಯವನ್ನು ಚಿನ್ನದಂತೆ ನಿರ್ಮಿಸಲು ಹೊರಟಿರುವ ತಂದೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು… ❤️

 

ನನ್ನ ಎಲ್ಲಾ ಕಷ್ಟ, ಸುಖ, ದುಃಖಗಳಲ್ಲಿ ಜೊತೆಯಾಗಿ ಇದ್ದು, ಸದಾ ಬೆಂಬಲದ ಧೈರ್ಯ ತುಂಬುತ್ತಿದ್ದ ಅಪ್ಪ, ನಿಮ್ಮ ಪ್ರೀತಿ, ಕಾಳಜಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಕಷ್ಟಗಳ ಎದುರು ಬಂಡೆಯಂತೆ ನಿಂತು ನಮ್ಮನ್ನೆಲ್ಲಾ ಸಲಹಿದಿರಿ. ನಿಮ್ಮ ತ್ಯಾಗ, ಪ್ರೀತಿಯೇ ನಮಗೆ ದಾರಿ ದೀಪ. ನನ್ನ ಬದುಕನ್ನು ರೂಪಿಸಿದ ನಿಮಗೆ ತಂದೆಯ ದಿನದ ಶುಭಾಶಯಗಳು.💐🙏

 

ಅಪ್ಪ ಎಂದರೆ ಆಕಾಶದಷ್ಟು ಪ್ರೀತಿ ಕೊಡುವ ಅಕ್ಕರೆಯ ಗೆಳೆಯ, ಕಾಣುವ ಕನಸುಗಳಿಗೆ ನೀರೆರೆವ ಮುಚ್ಚಟೆಗಳ ಗಣಿ, ಕುಟುಂಬದ ಒಳಗೂ, ಹೊರಗೂ ಜವಾಬ್ದಾರಿಯನ್ನು ಹಂಚಿಕೊಳ್ಳುವ ಅಪ್ಪ, ಎಲ್ಲರ ಜೀವನದಲ್ಲಿ ಒಬ್ಬ ರೋಲ್ ಮಾಡೆಲ್ ಇರ್ತರೆ.. ಇವ್ರ ತರನೆ ಇರಬೇಕು ಅಂತ ಅಥವಾ ಇವರ ತರ ಇರಬಾರದು ಅಂತ..

ನಮಗಾಗಿ ಅವ್ರು ಮಾಡೋದು ತ್ಯಾಗಗಳೆ…. ಯಾರ್ ಏನೇ ಮಾಡ್ಲಿ ನಾನು ನನ್ ಕುಟುಂಬಕ್ಕೋಸ್ಕರನೆ ದುಡಿಯೋದು ಅಂತ ಪ್ರತಿಫಲನೆ ಬಯಸದೆ ದುಡಿಯೋ ಒಬ್ಬನೆ ಒಬ್ಬ ವ್ಯಕ್ತಿ ಅಂದ್ರೆ ಅದು ಅಪ್ಪ ಮಾತ್ರ…… ತಮ್ಮ ಕಷ್ಟಗಳನ್ನ ಬಚ್ಚಿಟ್ಟು ಮಕ್ಕಳ ಮುಂದೆ ಸದಾ ನಗ್ತಿರ್ತರೆ. ತಾವು ಹರಿದಿರೊ ಬನಿಯನ್ ಹಾಕಿದ್ರು ಮಕ್ಕಳಿಗೆ ಬ್ರಾಂಡೆಡ್ ಬಟ್ಟೆನೆ ಕೊಡ್ಸ್ತರೆ… ಮಕ್ಕಳ ನಗುನಲ್ಲಿ ತಮ್ಮ ನೋವನ್ನ ಮರಿತರೆ… ಅದ್ರಲ್ಲು ನಿಜ ಅಪ್ಪ ಅಂದ್ರೆ ಅಪಾರ ಪ್ರೀತಿ ತೋರ್ಸೊ ಮಿತಿನೆ ಇಲ್ಲದಿರೊ ಆಕಾಶ…… 

 

ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಅಪ್ಪ ಜತೆಗಿದ್ದರೆ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಮಕ್ಕಳಲ್ಲಿರುತ್ತದೆ.

ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿರೂಪ ಅಪ್ಪ. ಆದರ್ಶವಾಗಿ, ಮಾರ್ಗದರ್ಶಕರಾಗಿ ಸದಾ ನಮ್ಮ ಬೆನ್ನ ಹಿಂದೆ ನಿಲ್ಲುವ ಕೋಟ್ಯಂತರ ತಂದೆಯರಿಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.

 

ನನ್ನಲ್ಲಿನ ಎಲ್ಲಾಕ್ರೋದ ಕೋಪ ತಾಪ ಅಹಂ ಅಸೂಯೆ ಆಶೇ ಎಲ್ಲವನ್ನೂ ತನ್ನೊಟ್ಟಿಗೆ ಕೊಂಡೊಯ್ದ ಅಪ್ಪ ಪ್ರೀತಿ ಮಾತ್ರ ಶಾಶ್ವತ ಎಂದು ತಿಳಿ ಹೇಳಿ ಪ್ರೀತಿಯೊಂದೇ ನನ್ನಲ್ಲರಡಿಹೋದ ನಿಜ ಜೀವನದ ವಾಸ್ತವ ಏನೆಂದು ತಿಳಿಸಿ ಹೋದ ನನ್ನಪ್ಪ

 

ಅಪ್ಪ ಅಗಲಿದ ಆ ಕ್ಷಣದಿಂದ ಜಗವೆಲ್ಲ

ಖಾಲಿ  ಖಾಲಿ ಜೀವನನೆ ಮುಗಿದೊದಂತೆ

ಅರಿತೆ ನಾ ಆಗ ನಾ ನೀ ಎಂದು ಬಡಿದಾಡಿಕೊಳ್ಳುವ ಈ ಜೀವನದಲ್ಲಿ ಎನೂ ಇಲ್ಲವಲ್ಲ ಅಂತ ಈ ಬದುಕು ಎಂಬುವುದು ಬರಿ  ಭ್ರಮೆ ಅಷ್ಟೇ ಅಂತ

 

ಅತಿಯಾಗಿ ಅಲೋಚಿಸಿದಾಗ ನಾನು ನಿಜವಾಗಲೂ ಬದುಕಿದ್ದೇನೆಯೇ ಇಲ್ಲವೇ ಅನ್ನೋ ಭ್ರಮೆ ಶುರುವಾಗುವುದು ನನ್ನೇ ನಾ ಮರೆತಂತೆ ಇದ್ದೂ ಇಲ್ದಂತೆ ಭಾಸವೇನಗೆ, ಆದ್ರೆ ಎಲ್ಲವೂ ನಶ್ವರ ನಿಷಾಚರ, ನಮ್ಮ ಪ್ರೀತಿ, ಕೋಪ, ಕಷ್ಟ-ಸುಖಗಳಿಗೆ ಮೊದಲು ಮಿಡಿಯುವ ಜೀವಗಳೇ ಅಪ್ಪ ಅಮ್ಮ 🥰🥰

 

ತಂದೆ ಎಂದರೆ ಹೆಬ್ಬೆರಳು ಇದ್ದ ಹಾಗೆ, 

ಆ ಹೆಬ್ಬೆರಳು ಇಲ್ಲದೆ ಉಳಿದ ನಾಲ್ಕು ಬೆರಳುಗಳಿಂದ ಯಾವುದೇ ಕೆಲಸ ಮಾಡೋದು ಆಗುಸುದಿಲ್ಲ ಮಾಡುವುದು ತುಂಬ ಕಷ್ಟ.

 

ಅಪ್ಪ ಅಂದರೆ ವಿಶ್ವಾಸ, 

ಪ್ರತಿಯೊಬ್ಬ ಅಪ್ಪನ ಮುಗುಳುನಗೆಯ ಹಿಂದೆ ಪುಣ್ಯವಂತಿಯಾದ ಮಗಳ ನಗು ಕೂಡ ಅಡಗಿರುತ್ತದೆ.

 

ನೀನೆ ನಮ್ಮ ಪ್ರಪಂಚ, ನೀನೆ ನಮ್ಮ ಉಸಿರು,

ಜಗತ್ತಿನಲ್ಲಿ ನಿನಗಿಂತ ಮಿಗಿಲಾದದ್ದು ನಮಗೆ ಮತ್ತೊಂದಿಲ್ಲ,

ಆ ಭಗವಂತ ನಿನಗೆ ಸದಾಕಾಲವೂ ನಗು, ನೆಮ್ಮದಿ, ಸುಖ, ಶಾಂತಿ, ದೀರ್ಘಾಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ,

ನಮ್ಮ ಜೀವನದಲ್ಲಿ ಆ ಭಗವಂತ ಕೊಟ್ಟ ಮತ್ತೇಂದು ಸಿಗದ ಅತಿ ದೊಡ್ಡ ಉಡುಗೊರೆ,

ನಮಗೆ ಸದಾಕಾಲವೂ ನಿನ್ನ ಪ್ರೀತಿ ಹೀಗೆ ಇರಲಿ,

ನಿನ್ನ ಜೀವನದುದ್ದಕ್ಕೂ ಸದಾಕಾಲವೂ ನಮ್ಮ ಪ್ರೀತಿ, ಹಾರೈಕೆ, ಆಶೀರ್ವಾದದೊಂದಿಗೆ ಇರುತ್ತದೆ ಮಗಳೆ..

 

ನಿನ್ನ ಅಪ್ಪ ಹಾಗೂ ಅಮ್ಮ

ಹೆಗಲ ಮೇಲೆ ಕುತ್ಕೊಂಡ್ರೆ ನೋವಾಗುತ್ತಾ ಅಪ್ಪ?

“ಇಲ್ಲ ಮಗಳೆ,ನೀನು ಮಲ್ಲಿಗೆ ಹೂವಿನ ತೂಕದವಳು,ಅದ್ಯಾವ ವಜ್ಜಿ ಕೂಸೇ ನನಗೇ,ಬಾ ಹೆಗಲ ಮೇಲೆ ಕುಳಿತುಕೋ

ವಿಶ್ವವನೇ ತೋರಿಸುವೆ”

ನನ್ ಕಂಡ್ರೆ ಅಷ್ಟ್ಯಾಕೆ ಪ್ರೀತಿ ಅಪ್ಪ?

*ನೀ ಕೇವಲ ಮಗಳು

ಅಲ್ಲ ನೀ ನನ್ ಕರಳು “

ಲವ್ ಯು ಪಪ್ಪಾ

 

ಅಪ್ಪನ ರಾಜ ಕುಮಾರಿ ಮಗಳು

ಅಮ್ಮನ ಜವಾಬ್ದಾರಿಯ ಭಾರ ಹೊರುವವಳೂ ಮಗಳು

ಅಪ್ಪ ಮಗಳನ್ನು ರಾಣಿಯಂತೆ ಮರೆಸಿದರೆ,

ಅಮ್ಮ ಮಗಳನ್ನು ತನ್ನ ಅದೃಷ್ಟವೆಂಬಂತೆ ಕಂಡರೆ

ಮಗಳು ಅಪ್ಪ-ಅಮ್ಮನ ರಾಜ-ರಾಣಿಯಂತೆ ಪ್ರತಿಕ್ಷಣ ಮೆರೆಸಬೇಕೆಂದು ಬಯಸುತ್ತಾಳೆ.. ಅದುವೇ ಮಗಳ ಪ್ರೀತಿ

ಗುಣದಲ್ಲಿ, ನಡತೆಯಲ್ಲಿ ನಮ್ಮ ಹೆಸರು, ಮನೆತನದ ಗೌರವವನ್ನು ಕಾಪಾಡುತ್ತಿರುವ ನಿನ್ನಂಥ ಮಗಳು ನಮಗಿರುವುದೇ ನಮ್ಮ ಹೆಮ್ಮೆ 💙💙💙🌐🌐🌐🌐

 

ಅಪ್ಪ, ಮಗಳ ಪ್ರೀತಿ ಅಗಸದಷ್ಟು ಅದಕ್ಕೆ ಬೆಲೆಕಟ್ಟಲಾಗುವುದಿಲ್ಲ, 🤚👏✌️🙏💖💖💖💖

 

ಅಪ್ಪ ಮಗಳ ಪ್ರೀತಿ ಸಂಬಂಧ ..

ಮಗಳು ಯಾವಾಗಲೂ ಅಪ್ಪನಿಗೆ ಮುದ್ದಿನ ರಾಜಕುಮಾರಿನೇ ಆಗಿರುತ್ತಾಳೆ ♥️♥️♥️♥️♥️♥️♥️♥️

 

ಮಗಳನ್ನು ಧಾರೆ ಎರೆದು ಅಳಿಯನ ಕೈಗಿರಿಸುತ್ತಾ ಗದ್ಗದಿತನಾದ ಅಪ್ಪ ಹೇಳುತ್ತಾನೆ, ಯಾವತ್ತೊ ಒಂದಿನ ನಿನಗೆ ನನ್ನ ಮಗಳ ಮೇಲೆ ಪ್ರೀತಿ ಕಡಿಮೆ ಆಗಬಹುದು.

ಅಂದು ದಯವಿಟ್ಟು ನನ್ನ ಮಗಳನ್ನು ನೋಯಿಸಬೇಡ, ಹಿಂಸಿಸಬೇಡ.

ನನ್ನ ಮಗಳನ್ನು ನನ್ನ ಬಳಿ ಕಳಿಸಿಬಿಡು

ನನ್ನ ಮಗಳನ್ನು ನನಗೇ ಕೊಟ್ಟು ಬಿಡು.

ಅಷ್ಟೇ..!

 

ಅಪ್ಪ, ಮಗಳ ಪ್ರೀತಿ ಅಗಸದಷ್ಟು ಅದಕ್ಕೆ ಬೆಲೆಕಟ್ಟಲಾಗುವುದಿಲ್ಲ💖💖

ತಂದೆ ಮಗಳ ಪ್ರೀತಿ ಆಕಾಶದ ರೀತಿ!

ವರ್ಣಿಸೋಕೆ ಪದಗಳೇ ಸಾಲಲ್ಲ…

ಮಗಳ‌ ಮೊದಲ ಹೀರೋ ಅಪ್ಪ… 

 

❤️❤️ಪ್ರತಿಯೊಬ್ಬ ತಂದೆಯ ಪ್ರೀತಿ ಮಿಸಲೀಡುವದು ತನ್ನ ಮಕ್ಕಳಿಗೆ ಮಾತ್ರ ಎಷ್ಟು ಚೆಂದ ಅಲ್ವಾ ಅಪ್ಪ ಮಗಳ ಪ್ರೀತಿ ಅಂದ್ರೆ ❤️❤️

 

“ಅಪ್ಪ ಮಗಳ ಭಾಂದವ್ಯದೊಳಗಿನ ಮೌನ ಮಾತು ಸುಳಿಯೊಳಗೆ ಅಪ್ಪನಿಗೆ ಮಗಳ ಮೇಲಿದ್ದಷ್ಟು ಪ್ರೀತಿ ಅಮ್ಮನಿಗೆ ಇರಲ್ಲಾ ಅಂತಾರೆ ಹೌದಾ…

ಹೌದು ಎಲ್ಲಾ ಅಪ್ಪಂದಿರಿಗೂ ಮಗಳು ಅಂದ್ರೆ ತುಂಬಾನೆ ಪ್ರೀತಿ, ಕಾಳಜಿ.

ಯಾಕೋ ಗೊತ್ತಿಲ್ಲ ಹೆಣ್ಣು ಮಕ್ಕಳು ಅಪ್ಪನಾ ತುಂಬಾನೇ ಹಚ್ಕೊಂಡು ಬಿಡ್ತಾರೆ.

ನಿಜವಾಗಿಯೂ ಅಪ್ಪಾ ಗ್ರೇಟ್ ಅಲ್ವಾ… 

 

ಅಪ್ಪನ ಸರ್ವಸ್ವ ಮಗಳು, 

ಮಗಳ ಉಸಿರು ಅಪ್ಪ, 

ಬದುಕಿನ ಬೊಗಸೆಯಲಿ ಎಂದೂ ತೀರದ ಪ್ರೀತಿ

 

ಅಪ್ಪನ ರಾಜಕುಮಾರಿ ಮಗಳು

ಅಮ್ಮನ ಜವಾಬ್ದಾರಿಯ ಭಾರ ಹೊರುವವಳೂ ಮಗಳು

ಅಪ್ಪ ಮಗಳನ್ನು ರಾಣಿಯಂತೆ ಮರೆಸಿದರೆ,  ಅಮ್ಮ ಮಗಳನ್ನು ತನ್ನ ಅದೃಷ್ಟವೆಂಬಂತೆ ಕಂಡರೆ ಮಗಳು ಅಪ್ಪ-ಅಮ್ಮನ ರಾಜ-ರಾಣಿಯಂತೆ ಪ್ರತಿಕ್ಷಣ ಮೆರೆಸಬೇಕೆಂದು ಬಯಸುತ್ತಾಳೆ.. 

ಅದುವೇ ಮಗಳ ಪ್ರೀತಿ ಗುಣದಲ್ಲಿ, ನಡತೆಯಲ್ಲಿ ನಮ್ಮ ಹೆಸರು, ಮನೆತನದ ಗೌರವವನ್ನು ಕಾಪಾಡುತ್ತಿರುವ ನಿನ್ನಂಥ ಮಗಳು ನಮಗಿರುವುದೇ ನಮ್ಮ ಹೆಮ್ಮೆ .

 

ಮಗಳ ಮೊದಲ ಪ್ರೀತಿ “ಅಪ್ಪ”.

ಸೌಮ್ಯತೆಯ ಸಾಗರ ಅಪ್ಪ,

ಆಗಾಧ ಪ್ರೀತಿಯ ಆಗರ ಅಪ್ಪ,

 

ಮಗಳು ನಮ್ಮ ಬಾಳಿನ ಮುಗುಳು

ತಂದೆಗೇಕೆ ಮಗಳು ಇಷ್ಟ

ಹೇಳುವುದು ಬಹಳ ಕಷ್ಟ

 

ಬಹಳ ಜಾಸ್ತಿ ಅವಳ

ಅಭೀಷ್ಟಗಳ ಯಾದಿ

ಅಪ್ಪ ಅದನ್ನು ಪೂರೈಸಿ

ಕೊಡಬೇಕು ಅದು

ಅವಳದೇ ಹಾದಿ

 

ಪ್ರೀತಿ,ಪ್ರೇಮ,ಅನುಕಂಪ

ಅನುನಯ ಎಲ್ಲಾ ಶಬ್ದಗಳೂ

ಗೌಣ ಅಪ್ಪ ಮಗಳ ಪ್ರೀತಿಯಲ್ಲಿ

ಎಂತದೋ ಭಾವಾಂಕುರ

 

ನಿತ್ಯ ನಿರ್ಮಲ ನಿರ್ವಾಜ್ಯ

ಅಶುದ್ಧ ರಹಿತ ಸಂಬಂಧ

ಅವರದು ಇಲ್ಲ ಮೇಲರಿಮೆ

ಕೀಳರಿಮೆ ಅಹಂಕಾರ

 

ನಾಳೆ ನನ್ನ ಪ್ರೀತಿಯ ಮಗಳ

ಜನ್ಮದಿನ ಅವಳು ಸಮುದ್ರದಾಳದ

ಅನರ್ಘ್ಯ ಮುತ್ತು

 

ಅವಳ ಬಾಳು ಹಸನು ಆಗಬೇಕು

ಎಂಬುದೊಂದೇ ಕೋರಿಕೆ

ಕಾವ ದೇವನಲ್ಲಿ ನಾನು ಹೋದರೂ

ಸತ್ತು

 

ಮಗಳ ಬೆನ್ನೆಲುಬಾಗಿ ಯಾವಾಗಲೂ ಜೊತೇಲಿ ಇರುವ ಅದ್ಬುತ ಶಕ್ತಿ . ಮನೆಗೆ ಕಣ್ಣಾಗಿ ಸಂಸಾರಕ್ಕಾಗಿ ಸದಾ ದುಡಿಯುವ ತ್ಯಾಗ ಜೀವಿ . ಆಕಾಶಕ್ಕೆ ಚಂದ್ರ ಇದ್ರೆ ಅಂದ , ಮಕ್ಕಳಿಗೆ ತಂದೆ ಇದ್ರೆ ಚೆಂದ . ಯಾರ್ ಇದ್ರೂ ಇಲ್ದೆ ಇದ್ರೂ ನನ್ನ ಜೀವನದಲ್ಲಿ ನಿನ್ ಇದ್ದೀಯ ಅಪ್ಪ ಅಷ್ಟೇ ಸಾಕು . ಮಗಳಿಗೆ ನಿಸ್ವಾರ್ಥ ಪ್ರೀತಿ ಸಿಗೋದು ತಂದೆಯಿಂದ ಮಾತ್ರನೇ. ನನ್ನ ಹೃದಯದಲ್ಲಿ ಯಾವಾಗ್ಲು ನಿನ್ನ ಮೇಲೆ ಪ್ರೀತಿ ಇರುತ್ತೆ  ಅಪ್ಪಾ 

 

ಮಗಳನ್ನು ಮದುವೆ ಮಾಡಿ ಅಳಿಯ ನ ಮನೆಗೆ ಕಲಿಸುವ ಅಪ್ಪನ ರೋಧನೆ…

ಅಪ್ಪ ಮತ್ತು ಮಗಳ ಪ್ರೀತಿ ಅಂತಹದ್ದು❤..

ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಪ್ರೀತಿ❤..

 

ಅಪ್ಪ ಎನ್ನುವ ಹೆಸರು ಎರಡಕ್ಷರದಲ್ಲಿದೆ, ಆದರೆ ಆ ಎರಡಕ್ಷರದಲ್ಲಿ ಮಗಳ ಇಡೀ ಪ್ರಪಂಚವೇ ಇದೆ.

 

ನನ್ನ ಪ್ರೀತಿ ನನ್ನ ಶಕ್ತಿ

ನನ್ನಪ್ಪ ❤️

ಅಪ್ಪ ಎನ್ನೊ ಹೆಸರಲಿ ನೀವು ಅಪಾರ ಪ್ರೀತಿ

ಉಣಿಸಿದೆ,

ಜಗದ ಜನರ ನಡುವಲಿ ನಿಮ್ಮ ಸಂಬಂಧ ಮಿಗಿಲಿದೆ,

ನಮ್ಮ ಹೊಲದ ಮಣ್ಣಲಿ ನಿಮ್ಮ ಬೆವರು ಬೆರೆತಿದೆ,

ನಮ್ಮ ಮಗಳ ಮೊಗದಲಿ ನಿಮ್ಮ ನಗುವು ಅಡಗಿದೆ,

ನಮ್ಮ ಉಸಿರ ಉಸಿರಲಿ ನಿಮ್ಮ ಹೆಸರು ಬೆರೆತಿದೆ…, #ಅಪ್ಪ ಎಷ್ಟೇ ಬಡವನು ಆದುರು ಆ ಅಪ್ಪನಕಣ್ಣಿಗೆ ಮಗಳು  ಯಾವತ್ತು #ಮಹಾರಾಣಿ ನೆ. ತಂದೆ-ಮಗಳ ಪ್ರೀತಿ ಯಾಂತಹ ಅದ್ಭುತ., ಕನ್ಯಾದಾನದ ಕಣ್ಣೀರಲ್ಲಿ…❣

 

ಮನೆಯ ಬಂಗಾರ

ಕನ್ಯಾದಾನದ ಕಣ್ಣೀರಲ್ಲಿ…

 

ಹುಟ್ಟಿದ ಮನೆಯ ಭಾಗ್ಯ

ದುಃಖಕ್ಕೆ ಶರಣಾಯಿತು…

 

ಅಪ್ಪ- ಅಮ್ಮನ ಕೈ ಕಂಪಿಸಿತು

ಮಗಳ‌ ಕಣ್ಣೀರ ಸ್ಪರ್ಶಕ್ಕೆ…

 

ಅಣ್ಣ-ತಮ್ಮಂದಿರ ತುಟಿಗಳು

ಜಗಳವಾಡುವುದ ಮರೆಯಿತು…

 

ಹೆತ್ತವರದು ಅಪ್ಪುಗೆಯ ಪ್ರೀತಿ

ಸಹೋದರರದು ತಮಾಷೆಯ ಕಾಳಜಿ…

 

ಎಲ್ಲಾ ತೊರೆದು ಬಂದವಳ

ಆಸೆ ಕನಸು ಗಂಡನದಾಗಲಿ…

 

ಧಾರೆ ಎರೆದದ್ದು ಬರಿ ಮಗಳನ್ನಲ್ಲ

ಮನೆಯ ಬೆಳಕನ್ನು ನಮ್ಮ ನಗುವನ್ನು…❣

 

 ಅಪ್ಪ ಮತ್ತು ಮಗಳ ನಡೆಯುವ ವಿಷಯ..

ಕರಗದಷ್ಟು ಪ್ರೀತಿ ಕೊಟ್ಟ ಸಹುಕಾರ

ಮಕ್ಕಳ ಮನಸ್ಸನ್ನು ಗೆದ್ದ ಮನೆಯ ವಾರಸುದಾರ

ಸಂಬಂಧಗಳಿಗೆ ಕಷ್ಟ ಬಂದಾಗ ಪಾಲುದಾರ

ಸುಖ ದುಃಖದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಛಲಗಾರ

ತಪ್ಪು ತಿದ್ದಿ ತಿಳಿಸುವವ ಸಲಹೆಗಾರ..

ಇವರೆ ಪ್ರೀತಿಯ ಅಪ್ಪ ಅಪ್ಪ…, ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ.. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ… ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನ ಹಚ್ಕೊಳ್ಳೋದೇ ಜಾಸ್ತಿ…, “ತಂದೆಯ ಕಳೆದುಕೊಂಡ  ಹೆಣ್ಣು ಮಗಳ ಮನದಾಳ”

 

ಅಪ್ಪ ನೀ ಇದ್ದರೆ ಎಲ್ಲರೂ ತೆಪ್ಪಗಿರುವರು , ನೀ ಇಲ್ಲದೇ ಸಪ್ಪಗಿರುವರು

ಎಲ್ಲಿಗೋದೆ  ಕಾಣದೂರಿಗೆ ನನ್ನನ್ನ ಒಂಟಿಯಾಗಿ ಬಿಟ್ಟು

ಕೂಗುತಿರುವೆ ನಿನ್ನನು ಕೇಳಿಸಿಕೋ ಓಗೊಟ್ಟು,

 

ನಿ  ನನ್ನ ಜೊತೆ ಇರಲು ನನಗದುವೇ ಬೆಲ್ಲ,

ನಿನ್ನ ಪ್ರೀತಿ ಮುಂದೆ ಏನೂ  ಇಲ್ಲ,,

 

ಕ್ಷಣ ಕ್ಷಣವೂ  ನಿನ್ನದೇ ಧ್ಯಾನ,

ಆವರಿಸಿದೆ ಮನದಲ್ಲಿ ಮೌನ,

ಬಂದು ಬಿಡು ಮರಳಿ ಹಾಡೋಣ ಅಪ್ಪ ಮಗಳ ಗಾನ,

 

ಒಮ್ಮೆಯೂ ಹೇಳಲಿಲ್ಲ ನೀನು ನನ್ನ ಬಿಟ್ಟು ಹೋಗುವೆನೆಂದು,,

ಯಾಕೆ ಹೀಗೆ  ಮಾಡಿದೆ ಅಪ್ಪ ನಿ  ಇಂದು,,

ಬಾ ಅಪ್ಪ ಬಾ  ಮುತ್ತನೀಡು  ಒಂದು,,

 

ಆಡುವವಳು ಅಳುತಲಿರುವೆ,

ನಿನ್ನ ನೆನೆದು  ಕೊರಗುತಲಿರುವೆ,

ಬಾ ಅಪ್ಪಾಜಿ ಬಾ ನಿನ್ನ ತೊಡೆಯ ಮೇಲೆ ನಾ ಮಲಗುವೆ,,

 

ಕಣ್ ಮುಚ್ಚಿದರೆ ನೀನೆ ಕಾಣುವೆ,,

ನಿ ಬಂದೆ ಎಂದು  ಎದ್ದು ಓಡುವೆ,

ನಿಜವಾಗಿಯೂ  ಬಂದು ಬಿಡು ಅಪ್ಪ ಬಂದು ಬಿಡು,,

 

ನಿ  ನನಗೆ ಸೈನಿಕ,,

ನಿ ಇರದ ಕ್ಷಣ ಕ್ಷಣವೂ  ಚಿಂತಾಜನಕ,,

ನಿ ಇರಬೇಕಿತ್ತು  ನನ್ನ ಜೀವ ಇರೋತನಕ,,

 

ಅಪ್ಪ ಅಪ್ಪ ನನ್ನಪ್ಪ

ನಿ ಹೊಳೆಯುವ ಚಂದ್ರಪ್ಪ,,

ಮತ್ತೆ ಬಾ ಅಪ್ಪ ಬೇಗ ಬಾ ನಾ ಕಾಯುತಿರುವೆ,,,,,,,,,

ಅಪ್ಪನ ಬೆರಳ ತುದಿಯಲ್ಲಿ ಮಗಳ ಭರವಸೆ ಅಡಗಿರುತ್ತದೆ ಈ ಮಾತು ಅಕ್ಷರಶಃ ಸತ್ಯ. ಒಬ್ಬ ಮಾದರಿ ಹಾಗೂ ಉತ್ತಮ ಆದರ್ಶ ಇರುವ ಅಪ್ಪ ಎಂದಿಗೂ ಮಕ್ಕಳ ಭರವಸೆಯಾಗಿರುತ್ತಾರೆ. ಆದರೆ ಮಗಳಿಗೆ ಮಾತ್ರ ಅಪ್ಪ ಎಂದರೆ ಅದೇನೋ ವಿಶೇಷ ಕಾಳಜಿ, ಪ್ರೀತಿ, ಮಮತೆ ಎಲ್ಲವೂ. ಮಗಳಿಗೆ ತನ್ನ ಅಪ್ಪನ ಮೇಲಿರುವ ಈ ಪ್ರೀತಿಗೆ ಕಾರಣ ಗೊತ್ತಿಲ್ಲ, ಈ ಪ್ರೀತಿಯನ್ನು ವರ್ಣಿಸಲು ಸಹ ಅಸಾಧ್ಯ. ಈ ಬಾಂಧವ್ಯ ಅಪ್ಪ ಮತ್ತು ಮಗಳ ನಡುವಿಗೆ ಮಾತ್ರ ಸೀಮಿತವಾಗಿರುತ್ತದೆ.😍😍

 

“ಪ್ರೀತಿ” ಯ ಜನ್ಮದಾತೆ “ಅಮ್ಮ”

“ತ್ಯಾಗ” ಕ್ಕೆ ಸಾಹುಕಾರ “ಅಪ್ಪ”

ತ್ಯಾಗದ ಪ್ರೀತಿಯೆ ಮಗಳು

“ಹರ್ಷ” ದ ಗುಟ್ಟು, ಅಪ್ಪ ಮಗಳ ಪ್ರೀತಿ 

 

Top Appa Magalu Quotes in Kannada Images

ಅಪ್ಪ-ಮಗಳ ಸಂಬಂಧದ ಬಗ್ಗೆ ಅನೇಕ ಸುಂದರ ನುಡಿಗಳನ್ನು (Father Daughter Quotes in Kannada) ಈ ಮೇಲೆ ನೀವು ನೋಡಿ ಇಷ್ಟ ಪಟ್ಟಿರಿ ಎಂದು ನಾವು ಭಾವಿಸುತ್ತೇವೆ. ಈ ನುಡಿಗಳು ನಮ್ಮ ಅಪ್ಪನ ಬಗ್ಗೆ ನಮಗಿರುವ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತವೆ. ಪ್ರತಿಯೊಂದು ನುಡಿಯೂ ಅಪ್ಪ-ಮಗಳ ಬಾಂಧವ್ಯದ ವಿಶಿಷ್ಟ ಅಂಶವನ್ನು ತೋರಿಸುತ್ತದೆ.

ನಿಮ್ಮ ಅಪ್ಪನಿಗೆ ಈ ನುಡಿಗಳನ್ನು ಹಂಚಿಕೊಳ್ಳಲು ಮರೆಯಬೇಡಿ. ಅವರಿಗೆ ನಿಮ್ಮ ಪ್ರೀತಿಯನ್ನು ತೋರಿಸಲು ಇದು ಒಂದು ಸುಂದರ ಮಾರ್ಗವಾಗಿದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ನುಡಿಗಳನ್ನು ಹಂಚಿಕೊಳ್ಳಿ.

ಇನ್ನೂ ಹೆಚ್ಚಿನ ಅದ್ಭುತ ನುಡಿಗಳು, ಕವನಗಳು ಮತ್ತು ಲೇಖನಗಳಿಗಾಗಿ ನಮ್ಮ ಬ್ಲಾಗ್ ಅನ್ನು ಭೇಟಿ ಮಾಡುತ್ತಿರಿ. ನಾವು ನಿಯಮಿತವಾಗಿ ಹೊಸ ವಿಷಯಗಳನ್ನು ಪ್ರಕಟಿಸುತ್ತಿರುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು!


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted, and copying is not allowed without permission from the author.