150+ Success Quotes in Kannada

ಯಶಸ್ಸು ಒಂದು ಪ್ರಯಾಣ, ಗುರಿ ಅಲ್ಲ. ಈ ಪ್ರಯಾಣದಲ್ಲಿ ನಾವು ಸವಾಲುಗಳು, ವಿಫಲತೆಗಳು ಮತ್ತು ಆತ್ಮವಿಶ್ವಾಸದ ಕ್ಷೀಣತೆಗಳನ್ನು ಎದುರಿಸುತ್ತೇವೆ. ಇಂತಹ ಕ್ಷಣಗಳಲ್ಲಿ ಪ್ರೇರಣೆ ನಮ್ಮನ್ನು ಮುಂದುವರಿಸಲು ಅಗತ್ಯವಾದ ಇಂಧನವಾಗುತ್ತದೆ. ವೈಯಕ್ತಿಕ ಗುರಿಗಳನ್ನು ಸಾಧಿಸಲು, ವೃತ್ತಿಜೀವನದಲ್ಲಿ ಮೆಲುಕು ಹಾಕಲು ಅಥವಾ ಅಡಚಣೆಗಳನ್ನು ದಾಟಲು ನೀವು ಪ್ರಯತ್ನಿಸುತ್ತಿದ್ದರೆ, ಕೆಲವು ಪ್ರಭಾವಶಾಲಿ ಮಾತುಗಳು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು.

ಈ ಲೇಖನದಲ್ಲಿ ಕನ್ನಡದಲ್ಲಿ ಕೆಲವು ಉತ್ತಮ ಯಶಸ್ಸಿನ ಉಲ್ಲೇಖಗಳನ್ನು (success quotes in kannada) ಸಂಗ್ರಹಿಸಲಾಗಿದೆ, ಇದು ನಿಮಗೆ ಪ್ರೇರಣೆ ನೀಡಲು ಮತ್ತು ನಿಮ್ಮ ಮನೋಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಈ ಲೇಖನವು ಕನ್ನಡದಲ್ಲಿ ಕೆಲವು ಅತ್ಯುತ್ತಮ ಜೀವನದ ಯಶಸ್ಸಿನ ಸಂದೇಶಗಳನ್ನು(life success quotes in kannada)  ಪರಿಚಯಿಸುತ್ತದೆ, ಇದು ನಿಮ್ಮ ಪ್ರಯಾಣವನ್ನು ಹೊಸ ದೃಷ್ಟಿಕೋನದಿಂದ ನೋಡಲು ಮತ್ತು ನವೀನ ಉತ್ಸಾಹವನ್ನು ಹೊಂದಲು ಸಹಾಯ ಮಾಡುತ್ತದೆ. ಈ ಉಲ್ಲೇಖಗಳು ನಿಮ್ಮ ಗೆಲುವುಗಳನ್ನು ಆಚರಿಸಲು, ಸಂಕಷ್ಟಗಳಲ್ಲಿ ನಿಮ್ಮನ್ನು ಪ್ರೇರೇಪಿಸಲು ಮತ್ತು ದೊಡ್ಡ ಕನಸು ಕಾಣಲು ಪ್ರೇರಣೆಯಾಗುತ್ತದೆ. ಯಶಸ್ಸು ಗುರಿ ತಲುಪುವುದರ ಬಗ್ಗೆ ಮಾತ್ರವಲ್ಲ; ಅದು ಪ್ರತಿ ಹೆಜ್ಜೆಯಲ್ಲಿಯೂ ಸಂತೋಷವನ್ನು ಕಂಡುಕೊಳ್ಳುವ ಕಲೆಯಾಗಿದೆ.

Success Quotes in Kannada

Best Success Quotes in Kannada Collection

ಸಾಧನೆ ಪೂರ್ಣವಾಗುವ ಮುನ್ನವೇ ಆಕ್ರೋಶ ಹೊರಹಾಕಿದರೆ ಅದು ವ್ಯರ್ಥವಾಗುತ್ತದೆ; ಸಾಧಿಸಿ ಆಮೇಲೆ ಮಾತನಾಡಿದರೆ ಗೌರವ ಹೆಚ್ಚುತ್ತದೆ.

 

ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ!

ಜ್ಞಾನವು ನಮ್ಮ ಬದುಕಿನ ಶಕ್ತಿ ಮತ್ತು ಬೆಳಕಾಗುತ್ತದೆ. 

 

ನಮ್ಮಿಂದ ಕಲಿತ ವಿದ್ಯೆ ಯಾವಾಗಲೂ ಹೊಸ ಅವಕಾಶಗಳನ್ನು ತಂದುಕೊಡುತ್ತದೆ! 

 

ಅವಮಾನ ಮಾಡಿದವರನ್ನೆಲ್ಲಾ ಅವ-ಮಾನವ ಎಂದು ತಿಳಿದು ಮುಂದೆ ಸಾಗಿರಿ,

 

ತಲೆ ಬಾಗಬೇಕು

ತಿಳಿದವರ ಮುಂದೆ

ತುಳಿದವರ ಮುಂದೆ ಅಲ್ಲ

 

ಸಾವಿರ ಟೀಕೆಗಳಿಗೆ ನಿಮ್ಮ ನಗುವೊಂದೇ ಉತ್ತರ.

 

ಸಾಧನೆ ಮಾಡಿದವರ ವ್ಯಕ್ತಿತ್ವ, ಚಾರಿತ್ರ್ಯ, ಆದರ್ಶಗಳನ್ನು ಪ್ರಪಂಚವೇ ಕೊಂಡಾಡುತ್ತದೆ.

 

ನಿನ್ನ ಸಾಧನೆ ಹೇಗಿರಬೇಕಂದ್ರೆ, ನೀ ಸಾಧಿಸಿ ಸತ್ತ ಮೇಲೂ ನಿನ್ನ ಹೆಸರು ಅಮರವಾಗಿರಬೇಕು

 

ಅವಕಾಶವಿದ್ದರೆ ಬಿಡಬೇಡಿ! 

ಏನಾದರೂ ಸಾಧ್ಯವಿದೆ ಎಂಬ ನಿರೀಕ್ಷೆ ಉಳಿಸಿಕೊಂಡರೆ, ಯಾವ ಸ್ಥಿತಿಯನ್ನೂ ಕೈಬಿಡಬೇಡಿ. 

ಯಶಸ್ಸು ಸಾಮಾನ್ಯ ಸಂದರ್ಭಗಳಲ್ಲಿಯೇ ಅಡಗಿದಿರಬಹುದು! 

 

ಸಾಧನೆ ಮಾಡುವ ಮನಸಿದ್ದರೆ ಯಾರಾದರೂ ಸಾಧನೆ ಮಾಡಬಹುದು 

 

ತಲೆ ಹೋಗುವ ಸಂದರ್ಭ ಬಂದಾಗಲೂ ಶಾಂತತೆ ಕಾಯ್ದುಕೊಳ್ಳುವ ಸಾಮರ್ಥ್ಯವುದೆಯೆಂದರೆ ನಿಮ್ಮ ಗೆಲುವು ನಿಶ್ಚಿತ.

 

ಇಟ್ಟ ಗುರಿ ಮುತ್ತುವವರೆಗೂ ಕೆಣಕುವವರನ್ನು ಇಣುಕಿ ಸಹ ನೋಡಬಾರದು.

 

ಸೋಮಾರಿತನ ಬಿಟ್ಟಾಗ್ಲೆ ಸಿರಿತನದ ಕನಸು ನಿಜ ಆಗೋದು.

 

ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ.

ಆದರೆ ಪ್ರಯತ್ನವನ್ನೇ ಮಾಡದಿರುವುದು ಜೀವನದ ಅತಿ ದೊಡ್ಡ ಸೋಲು.

ನಡೆದಷ್ಟೂ ದಾರಿ ಇದೆ. ಪಡೆದಷ್ಟೂ ಭಾಗ್ಯವಿದೆ.

 

ಮುಟ್ಟೋ ಗುರಿ ತಡವಾದರೂ ಇಡೋ ಹೆಜ್ಜೆ ನೀಯತ್ತಾಗಿರಬೇಕು.

 

ಸೋತ್ರೆ ಗೆಲ್ಲಬೇಕು ಅನ್ನೋ ಮನಸ್ಸು ಬರುತ್ತೆ

ಅವಮಾನ ಆದರೆ ಗೆಲ್ಲಲೇ ಬೇಕು ಅನ್ನೋ ಛಲ ಬರತ್ತೆ.

 

ನೀವು ಯಾರ ವಿರುದ್ಧವಾದರೂ ಮುಯ್ಯಿ ತೀರಿಸಿಕೊಳ್ಳಬೇಕು ಅಂತ ನಿಧ೯ರಿಸಿದರೆ, ಧ್ವೇಷ ಸಾಧನೆಗೆ ಇಳಿಯಬೇಕಿಲ್ಲ. ನಿಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಯಶಸ್ಸು ಸಾಧಿಸಿದರೂ ಆದಿತು. ಪ್ರತೀಕಾರದಲ್ಲೂ ಸಕಾರಾತ್ಮಕ ಭಾವವನ್ನು ಮೆರೆಯಬಹುದು.

 

ಒಬ್ಬನೇ ಇರೋದು ಅದೇನ್ ಸಾಧನೆ? 

ಎಲ್ಲರ ಜೊತೆಗೆ ಇದ್ದು ಎಲ್ಲರಿಗೂ ಬೇಕಾದವನಾಗಿ ಬದುಕೋದು ನಿಜ ಸಾಹಸ.

 

ಸಾಧನೆ ಮಾಡಬೇಕು ಎನ್ನುವುದು  ಏನು ಇಲ್ಲ. 

ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ..

 

ಜೀವನದಲ್ಲಿ ಸಾಧನೆ ಎಂಬ ಶಿಲೆಯನ್ನು ಕೆತ್ತಲು ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವು ಒಂದೊಂದು ಉಳಿಪೆಟ್ಟು ತಿಂದಂತೆ… 

 

ಭಯದಲ್ಲೇ ಸಾಯುವುದಕ್ಕಿಂತ,

ಪ್ರಯತ್ನ ಪಟ್ಟು ಸೋಲುವುದೇ ಮೇಲು.

ನಿಂತೆನೆಂದು ನಿದ್ರೆ ಮಾಣುವುದಕ್ಕಿಂತ,

ಗುರುತು ಉಳಿಸಿ ಪತನವಾಗುವುದೇ ಮೇಲು.

 

ಹಿಂಜರಿದು ಹಾದಿ ತಪ್ಪುವುದಕ್ಕಿಂತ,

ದುಡಿದು ಗುರಿ ತಲುಪುವುದೇ ಮೇಲು.

ಬಾಲಕ್ಕಿಂತಲೂ ಬಿರುಸಿನ ಹೆಜ್ಜೆಯು ಶ್ರೇಯಸ್ಸು,

ನಂಬಿಕೆಯಿಂದ ನಡೆಯುವುದೇ ಸಾಧನೆ.

 

ಜೀವನ ಅರ್ಥಹೀನವಲ್ಲ, ಪ್ರಯತ್ನವೇ ಅದು,

ಅಸಾಧ್ಯವೆಂದು ಕೈಕೊಡಬೇಡ.

ನಿಂತ ನೀರು ಹಾಳಾದರೆ, ಹರಿದು ಹೋಗೋ ನದಿಯು ಜೀವನ!

ಸಾಧನೆ ನಿನ್ನದಾಗಲಿ, ಬೆಳಕು ನೀನೆ ಆಗಲಿ!, ಸಾಧನೆ ಎಂದರೇನು…!!

 

ಜೀವನದಲ್ಲಿ ಬೇರೇನೂ ಬೇಡ 

ನಿನ್ನ ಹೆತ್ತವರ ಬಾಯಲ್ಲಿ ನಿನ್ನ ಹೆತ್ತಿದಕ್ಕೆ ‘ಸಾರ್ಥಕವಾಯಿತು ಎಂದೆನಿಸಿಕೋ ಸಾಕು 

ಅದೇ ನಿನ್ನ ಅದ್ಭುತ ಸಾಧನೆ..!

 

ಕೆಲವೊಮ್ಮೆ ಬದುಕು ಸಾಕೆನಿಸಬಹುದು. 

ಆ ಕ್ಷಣ ಸಹಿಸಿ ಬಿಟ್ಟರೆ ಸಿಹಿಯಾದ ಸಮಯವೂ ಬರಬಹುದು.

ತಾಳ್ಮೆಯೇ ನಿಜವಾದ ಸಾಧನೆ 

 

ಜೀವನದಲ್ಲಿ ಸಾಧನೆ ಎಂಬ ಶಿಲೆಯ ಕೆತ್ತಲು, ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವು ಒಂದೊಂದು ಉಳಿಪೆಟ್ಟು ಇದ್ದಂತೆ….. ಸಾಧಿಸುವ ತನಕ ಇದೆಲ್ಲದಕ್ಕೂ ಒಂದೇ ಉತ್ತರ ನಗು 

 

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ

ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ …..

 

ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ

ತಪ್ಪುಸರಿಯೇ ಹೆಜ್ಜೆ ಹಾಕಿ ನೋಡು….

“ಗೆದ್ದರೆ” ಮುಂದಕ್ಕೆ ನಡೆಸುತ್ತದೆ

“ಸೋತರೆ” ಮುಂದೆ ನೀನು

 ‌ಏನು ಮಾಡಬೇಕೆಂದು ಕಲಿಸುತ್ತದೆ…

 

Success Chanakya Quotes in Kannada

ಭಯಪಟ್ಟು ಕುಳಿತುಕೊಂಡರೆ

ಬದುಕುವುದು ಅಸಾಧ್ಯ ತಪ್ಪು 

ಸರಿಯೇ ಹೆಜ್ಜೆ ಹಾಕಿ ನೋಡು….

“ಗೆದ್ದರೆ ಮುಂದಕ್ಕೆ ನಡೆಸುತ್ತದೆ

“ಸೋತರೆ” ಮುಂದೆ ನೀನು ‌ಏನು ಮಾಡಬೇಕೆಂದು ಕಲಿಸುತ್ತದೆ…..

 

ಗಾಳಿಗೆ ಪರ್ವತವನ್ನು ಅಲುಗಾಡಿಸಲು ಸಾಧ್ಯವಿಲ್ಲ. 

ಹಾಗೆಯೇ ಹೊಗಳಿಕೆ ಅಥವಾ ತೆಗಳಿಕೆಗೆ ವಿವೇಕವುಳ್ಳ ವ್ಯಕ್ತಿಯನ್ನು ವಿಚಲಿತಗೊಳಿಸುವುದು ಅಸಾಧ್ಯ.

 

ಬದುಕಿನಲ್ಲಿ ಹೆಜ್ಜೆ ಗುರುತನ್ನು ಉಳಿಸಿ ಹೋಗುವುದು ನಾಡಿಗೆಯಿಂದಲ್ಲ.

ನಡತೆಯಿಂದ!

 

ಮಳೆಯ  ಹನಿ  ಸಣ್ಣದಿರಬಹುದು  ಅದು  ಬಿಡದೆ  ಸುರಿದರೆ  ದೊಡ್ಡ  ದೊಡ್ಡ  ನದಿಗಳೇ  ಉಕ್ಕಿ  ಹರಿಯುತ್ತದೆ. ಪ್ರಯತ್ನ  ಸಣ್ಣದಾದರೂ  ಪರವಾಗಿಲ್ಲ  ನಿರಂತರವಾಗಿದ್ದರೆ ದೊಡ್ಡ  ಸಾಧನೆ  ಮಾಡಲು  ಸಾಧ್ಯವಿದೆ.

 

ನನ್ನ ಬರಹ ಭಾವನೆಗೆ ಹತ್ತಿರ 

ನನ್ನ ಸ್ನೇಹ ಮನಸಿಗೆ ಹತ್ತಿರ 

ನನ್ನ ಪ್ರೀತಿ ಕನಸಿಗೆ ಹತ್ತಿರ 

ನನ್ನ ಮಾತು ಬದುಕಿಗೆ ಹತ್ತಿರ 

ನನ್ನ ಸಾಧನೆ ದೇವರ ಸಾನಿಧ್ಯಕೆ ಹತ್ತಿರ….. 

 

ನಾಳೆ ಎಂಬುವುದು ಸಾವು 

ಇವತ್ತು ಎಂಬುವುದು ಬದುಕು 

ಈಗ ಎನ್ನುವುದೇ ಸಾಧನೆ ಇಷ್ಟೇ ಜೀವನ..!

 

ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದರೆ ಸಾಲದು 

ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಗುರಿ ಮುಟ್ಟುವುದರಲ್ಲಿ ಸಾಧನೆ ಇದೆ. 

 

ಈ ಜಗತ್ತಿನಲ್ಲಿ ನಾವೂ ಏನು ಅನ್ನೋದು ಗೊತ್ತಾಗಬೇಕು ಅಂದ್ರೆ ಏನಾದ್ರೂ ಒಂದು ಸಾಧನೆ ಮಾಡ್ಬೇಕು. ಆವಾಗಲೇ ಈ ಭೂಮಿ ಮೇಲೆ ಹುಟ್ಟಿದಕ್ಕೆ ಸಾರ್ಥಕ ವಾಗುವುದು ನಮ್ಮ ಜೀವನ 

 

ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ.

ತಾನೇ ಉರಿಯದ ದೀಪ ಇನ್ನೊಂದು ದೀಪವನ್ನು ಬೆಳಗಿಸಲಾರದು.

 

ಸ್ವಚ್ಛ ಮನಸ್ಸಿನ ಸಂಸ್ಕಾರ 

ಸಾಧನೆ ಬದುಕಿಗೆ ಅಲಂಕಾರ 

 ನೀಚ ಮನಸ್ಸಿನ ಸಂಸ್ಕಾರ 

ಯೋಗ್ಯ ಬದುಕಿಗೆ ಅಹಂಕಾರ

 

ಭಯದಲ್ಲೇ ಸಾಯುವುದಕ್ಕಿಂತ,

ಪ್ರಯತ್ನ ಪಟ್ಟು ಸೋಲುವುದೇ ಮೇಲು.

ನಿಂತೆನೆಂದು ನಿದ್ರೆ ಮಾಣುವುದಕ್ಕಿಂತ,

ಗುರುತು ಉಳಿಸಿ ಪತನವಾಗುವುದೇ ಮೇಲು.

 

ಕಷ್ಟಗಳು ಬಂದಿವೆ ಎಂದು ಇಷ್ಟಪಟ್ಟಿದ್ದನ್ನು ಬಿಡಬೇಡಿ. 

ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಿರಬಹುದು.

ಆದರೆ ಮುಂದೊಂದು ದಿನ ಎಲ್ಲವೂ ಸಂತೋಷಕರವಾಗಿರುತ್ತದೆ.

 

ಸೋಲು ಬರೋದಕ್ಕೆ ನೂರು ದಾರಿ ಇದ್ರೆ ಗೆಲುವು ಬರೋದಕ್ಕೆ ಒಂದೇ ದಾರಿ.

ಅದು ನಂಬಿಕೆಯ ದಾರಿ.

 

ಹಿಂಜರಿದು ಹಾದಿ ತಪ್ಪುವುದಕ್ಕಿಂತ,

ದುಡಿದು ಗುರಿ ತಲುಪುವುದೇ ಮೇಲು.

ಬಾಲಕ್ಕಿಂತಲೂ ಬಿರುಸಿನ ಹೆಜ್ಜೆಯು ಶ್ರೇಯಸ್ಸು,

ನಂಬಿಕೆಯಿಂದ ನಡೆಯುವುದೇ ಸಾಧನೆ.

 

ಮೊದಲು ಆಳಾಗುವುದನ್ನು ಕಲಿಯಿರಿ.

ಅರಸನ ಅರ್ಹತೆ ತಾನಾಗಿಯೇ ಬರುತ್ತದೆ.

 

ಸಾಧನೆ ಮಾಡುವವರು ಚರ್ಚೆ ಮಾಡುವುದಿಲ್ಲ.

ಚರ್ಚೆ ಮಾಡುತ್ತಾ ಕೂರುವವರು ಸಾಧನೆ ಮಾಡುವುದಿಲ್ಲ.

 

ಜೀವನ ಅರ್ಥಹೀನವಲ್ಲ, ಪ್ರಯತ್ನವೇ ಅದು,

ಅಸಾಧ್ಯವೆಂದು ಕೈಕೊಡಬೇಡ.

ನಿಂತ ನೀರು ಹಾಳಾದರೆ, ಹರಿದು ಹೋಗೋ ನದಿಯು ಜೀವನ!

ಸಾಧನೆ ನಿನ್ನದಾಗಲಿ, ಬೆಳಕು ನೀನೆ ಆಗಲಿ!

 

ಅಸಾಧ್ಯ ಎಂಬುದು ಒಂದು ಪದವಲ್ಲ. ಪ್ರಯತ್ನ ಮಾಡದೇ ಇರುವುದಕ್ಕೆ ಕೈಲಾಗದವರು ಕೊಡುವ ಒಂದು ಕಾರಣ.

 

ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, 

ಎಂಥ ಸಂಕಷ್ಟಗಳು ಬರಲಿ, 

ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. 

ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ.

ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು, ಗೆಲ್ಲಬಹುದು.

 

ಜೀವನದಲ್ಲಿ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ಗುರಿ ಮುಟ್ಟುವ ತನಕ ನಿಲ್ಲಬಾರದು. ನಮ್ಮ ಮೇಲಿನ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳಬಾರದು. 

ನಾವು ಏನು ಅಂದುಕೊಂಡಿರುತ್ತೇವೋ, ಅದು ನಿಶ್ಚಿತವಾಗಿಯೂ ಈಡೇರುತ್ತದೆ

 

ಸಾಧನೆ ಅಂದ್ರೆ ಇವ್ನ್ ಯಾರೋ ಅಂದೊರೇಲ್ಲ ನಮ್ ಹೀರೋ ಅನ್ನೊಥರ ಬೆಳೆದು ನಿಲ್ಲೊದು 

 

ಕಲಿಯೋದನ್ನ ಯಾವತ್ತೂ ನಿಲ್ಲಿಸಬೇಡ.

ಯಾಕಂದ್ರೆ ಜೀವನ ಕಳಿಸೋದನ್ನ ನಿಲ್ಲಿಸೋದಿಲ್ಲ.

 

ಮನೆಗೆ ಬಂದ್ರೆ ನೆಮ್ಮದಿಯಾಗಿ ನಿದ್ದೆ ಬರಬೇಕು.. 

ಸಂಸಾರದಲ್ಲಿ ಸುಖವಿರಬೇಕು… 

ನಿನ್ನ ಮಕ್ಕಳಿಂದ ನಿನಗೆ ಗೌರವ ಸಿಗಬೇಕು… 

ನಿನ್ನೂರಲ್ಲಿ ನಿನಗೆ ಮರ್ಯಾದೆ ಇರಬೇಕು…

ಕೊನೆಗಾಲದಲ್ಲಿ ಆರೋಗ್ಯ ಚೆನ್ನಾಗಿರಬೇಕು… 

ಇದ್ಯಾವುದೂ ಇಲ್ಲಾ ಅಂದ್ರೆ …

ನೀನು ಮಾಡಿದ ಸಾಧನೆಗಳೆಲ್ಲವು ವ್ಯರ್ಥ…

ಹಾಗು ನಿನ್ನ ಜೀವನವೂ ಕೂಡ ವ್ಯರ್ಥ…

 

ಅವಕಾಶಗಳು ಸಿಗೋದಿಲ್ಲ.

ನಾವೇ ಸೃಷ್ಟಿಸಿಕೊಳ್ಳಬೇಕು.

 

ನಿಮ್ಮ ಸಾಧನೆ ಹೇಗಿರಬೇಕು ಅಂದರೆ

ನಿಮ್ಮ ಯೋಗ್ಯತೆ ಬಗ್ಗೆ ಅನುಮಾನ ಪಟ್ಟವರೆಲ್ಲಾ ..

ನಿಮ್ಮನ್ನು ಮಾತನಾಡಿಸುವ ಮೊದಲು ಅವರ ಯೋಗ್ಯತೆ ಬಗ್ಗೆ ಯೋಚಿಸುವಂತಿರಬೇಕು…

 

ಜೀವ ಇರುವುದು ಸಾಧನೆ ಮಾಡಲು

ಆದರೆ ಸಾಧನೆ ಜೀವ ಆಗಬಾರದು

 

Life Success Quotes in Kannada

ಮಾಡಬೇಡ ರೋಧನೆ, ಜೀವನದಲ್ಲಿ ಏನಾದರೂ ಮಾಡು ಸಾಧನೆ.

 

ನಿಜವಾದ ಸಾಧನೆ ಅಂದ್ರೆ 

ಬದುಕನ್ನು ಮನಸಾರೆ 

ಅನುಭವಿಸುವುದು..

ನೆಮ್ಮದಿಯಾಗಿ ಬದುಕಿ 

ಸಾರ್ಥಕ ಪಡಿಸಿಕೊಳ್ಳುವುದು…!

 

ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ.

 

ಯಶಸ್ಸು ಸಣ್ಣ ಗೆಲುವುಗಳ ಸರಣಿ

 

ಮರಳಿನ ಮೇಲೆ ಮರಳು ಅಂತ ಬರಿಯಬಹುದು 

ಆದರೇ, ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ?

ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ,

 ಕೆಲವು ಅಸಾಧ್ಯ..

 

ಬದವನಾಗಿ ಹುಟ್ಟೋದು ತಪ್ಪಲ್ಲ

ಬದವನಾಗಿ ಸಾಯೋದು ದೊಡ್ಡ ತಪ್ಪು.

 

ಸಾಧನೆ ಮಾಡಲು ನಿಂತರೆ ಕಷ್ಟಕ್ಕೆ ಹೆದರಬಾರದು….

ಪ್ರೀತಿ ಮಾಡಲು ನಿಂತರೆ ಜಗತ್ತಿಗೆ ಹೆದರಬಾರದು….

ದ್ವೇಷ ಮಾಡಲು ನಿಂತರೆ ಎದುರಾಳಿಗೆ ಹೆದರಬಾರದು….

ಲೋಕಾನೆ ಗೆಲ್ಬೇಕು ಅನ್ಕೊಂಡಾಗ ಸುತ್ತಾ ಇರೋ ನರಿಗಳಿಗೆ ಹೆದರಬಾರದು…

 

ಬದಲಾವಣೆಯಿಲ್ಲದೆ ಪ್ರಗತಿ ಅಸಾಧ್ಯ & ತಮ್ಮ ಮನಸ್ಸನ್ನು ಬದಲಾಯಿಸಲಾಗದವರು ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ..!

 

ಸಾಧನೆ ಶಿಖರವಾಗಿರಬೇಕು…..

ಛಲ ನಿಮ್ಮೊಂದಿಗಿದ್ದರೆ, ಸೋಲಿಗೂ ಭಯವಾಗಬೇಕು ನಿಮ್ಮೊಂದಿಗೆ ಸೆಣಸಲು……..

 

ತಪ್ಪುಗಳನ್ನು ಮರೆತುಬಿಡು

ಅದರಿಂದ ಕಲಿತ ಪಾಠಗಳನ್ನಷ್ಟೇ ನೆನಪಿಟ್ಟುಕೋ.

 

ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರು ಸಹಾಯ ಮಾಡುವುದಿಲ್ಲಾ ನಂತರ ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ….. ಇದೇ ಪ್ರಪಂಚ..

 

ಜೀವನದ ಮುಂದಿನ ದಿನಗಳು ಉತ್ತಮವಾಗಿರಬೇಕೆಂದರೆ ಈಗಿನ ಕಷ್ಟದ ದಿನಗಳ ಜೊತೆಗೆ ಹೋರಾಟ ಅತ್ಯವಶ್ಯ.

 

ಅರಿತು ಅರ್ಥವಾಗದ ಜೀವನ…

ಬದುಕು ಅನ್ನೋ ಮೂರು ಅಕ್ಷರದಿಂದ 

ಜೀವನ ಅನ್ನೋ ಮೂರು ಅಕ್ಷರ ನಡೆಸುತ್ತಾ,

ಪ್ರಯತ್ನ ಅನ್ನೋ ಮೂರು ಅಕ್ಷರದಿಂದ 

ಸಾಧನೆ ಅನ್ನೋ ಮೂರು ಅಕ್ಷರ ಮಾಡುತ್ತಾ, 

ಜನನ ಅನ್ನೋ ಮೂರು ಅಕ್ಷರದಿಂದ 

ಮರಣ ಅನ್ನೋ ಮೂರು ಅಕ್ಷರ ಮುಗಿದುಬಿಡುತ್ತೆ,

 

ಧೈರ್ಯ ಇದ್ದರೆ ಸಾಧನೆ

ಧೈರ್ಯ ಸೋತರೆ ವೇದನೆ

ಗೆದ್ದರೆ ನಿನಗೆ ಸನ್ಮಾನ

ಸೋತರೆ ನಿನಗೇ ಅವಮಾನ 

 

ಗೆದ್ದಾಗ ಹೊರಗಿನವರು

ಕೂಡ ನಮ್ಮ ಹುಡುಗ ಅಂತಾರೆ

ಸೋತಾಗ  ಸಂಬಂಧಿಕರು

ಕೂಡ ಪರಿಚಯಸ್ಥ ಅಂತಾರೆ

 

ತಿಳಿದುಕೊಂಡರೆ ಸಾಲದು

ಚಿಂತಿಸಿ ಸುತ್ತಾಡಿದರು ಸಾಲದು

ಕೈಲಾದಷ್ಟು ನೀ ದುಡಿದು

ಹಿಡಿಯಷ್ಟು ಸುಖ ಬರುವುದು 

 

ಬರುವವರಿಗೆ ಸ್ವಾಗತ ಮಾಡು

ಹೊಗುವ ವರಿಗೆ ಟಾಟಾ ಮಾಡು

ಬಂದರೆ  ನಮ್ಮವರು

ಹೊದರೆ  ಕಂಡವರು 

 

ದಾರಿಯಲ್ಲಿ ಮುಳ್ಳು ಇರುತ್ತೆ

ಮುಳ್ಳಿನಲ್ಲಿ ದಾರಿ ಇರುವುದಿಲ್ಲ

ನೋವಿನಿಂದ ಅನುಭವ ಬರುತ್ತದೆ

ಅನುಭವದಿಂದ ನೋವು ಬರುವುದಿಲ್ಲ….!!

 

ಆಡಿಕೊಳ್ಳುವ ಜಗತ್ತೇ ಹಾಗೆ  ಏನು ಮಾಡಿದರೂ ಆಡಿಕೊಳ್ಳುತ್ತೆ..

ಆಡಿಕೊಳ್ಳುವವರೇ ಮುಂದೆ  ಹೊಗಳುವಂತೆ ಮಾಡುವುದೇ ನಮ್ಮ ಸಾಧನೆ.

 

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಗೊತ್ತಿದ್ದರೆ ಸಾಕು ಬದುಕು ಸಾರ್ಥಕ 

 

ಏನೋ ಗೆದ್ದು ಭೀಗಿ ಒಂದಷ್ಟು ದುಡ್ಡು 

ಸಂಪಾದಿಸಿ ದೌಲತ್ತಲ್ಲಿ ಓಡಾಡಿ 

ಸಿರಿ ಸಂಪತ್ತಲ್ಲಿ ನಾವೇನ್ ಕಮ್ಮೆ ಇಲ್ಲ ಅಂತ ಇನ್ನೊಬ್ಬರಿಗೆ ತೋರಿಸೋದೇ 

ಸಾಧನೆ ಅನ್ಕೊಂಡಿದ್ದೆ… ಆದರೆ 

ಈಗ ಅನ್ನಿಸ್ತಿದೆ ನಿಯತ್ತಾಗಿ ಬದುಕಿ 

ನೆಮ್ಮದಿಯಾಗಿದ್ದು ಈ ಅದ್ಭುತವಾದ 

ಬದುಕನ್ನು ಸಂಪೂರ್ಣವಾಗಿ ಅನುಭವಿಸಿ ಒಳ್ಳೆಯತನವನ್ನು ಉಳಿಸಿ

ಹೋಗುವುದೇ ನಿಜವಾದ ಸಾಧನೆ ಅಂತ..!!

 

ನಿಜವಾದ ಬಣ್ಣ ನಮ್ಮ ನಂಬಿಕೆ ನಮ್ಮ ಜೀವನದ ಸಾಧನೆ ಆಗಿರಬೇಕು

ಯಾರ ಮಾತಿಗೂ ಕಿವಿಗೋಡಬಾರದು ನಮ್ಮ ಜೀವನ ನಮ್ಮ ಪಾಠ 

ಬದುಕಿಗೊಂದು ದಾರಿ 

ಅದೇ ನಮ್ಮ ಸಿರಿ

 

ನಿನ್ನ ಕೆಟ್ಟ ದಿನಗಳೇ ನಿನ್ನನ್ನು ಕಟ್ಟುವ ದಿನಗಳು.

 

ಒಂದೆ ದಿನ ಏನು ಆಗಲ್ಲ.

ಒಂದು ದಿನ ಆಗುತ್ತೆ.

ಒಂದು ದಿನಕ್ಕೆ ಏನು ಆಗಿ ಬಿಡಲ್ಲ.

ಆ ಒಂದು ದಿನಕೊಸ್ಕರ ಕಾಯಬೇಕು.

ಒಂದು ದಿನ ವೇದನೆ.

ಅದು ಆದ ಮೇಲೆ ರೋದನೆ.

ಇದೆಲ್ಲಾ ಆ ನಂತರ ಸಾಧನೆ.

 

ನಿನ್ನ ಶ್ರಮವೇ ನಿನಗೆ ಆದಾಯ,,,ಆ ಆದಾಯವೇ ನಿನ್ನ ಸಾಧನೆ “, ಸಾಗುವ ಪಾಯಣದಿಂದ ಸಾಧನೆ ಬೇಡ 

ಸಾರ್ಥಕತೆ ಸಾಕು,,,,,,, 

 

ಜ್ಯೋತಿಯಿಂದ ಬೆಳಕು

ಸಮಯದಿಂದ ಮೆಲುಕು!

ಏಕಾಗ್ರತೆಗಾಗಿ ಸ್ಮರಣೆ

ಶ್ರಮಪಟ್ಟರೆ ಸಾಧನೆ!

ಅಕ್ಷರದಿಂದ ಸಾಕ್ಷರ

ಅನುಭವದಿಂದ ಸಾಕ್ಷಾತ್ಕಾರ!

 

ವಯಸ್ಸಲ್ಲಿದ್ದಾಗ ಕಷ್ಟ ಪಡೋಕೆ ನಾಚಿಕೆ ಪಟ್ಕೋಂಡ್ರೆ ವಯಸ್ಸಾದ ಮೇಲೆ ಜೀವನ ಮಾಡೋಕೆ ನಾಚಿಕೆ ಪಟ್ಕೋಬೇಕಾಗುತ್ತದೆ.

 

ಯಾವುದು ಸರಿ ಇರತ್ತೋ ಅದನ್ನು ಆಯ್ಕೆ ಮಾಡಿಕೊ.

Easy ಇರೋದನಲ್ಲ.

 

ಕಷ್ಟಗಳು ನಿನಗೆ ಪಾಠ ಕಲಿಸಿದ ಮೇಲೆ ಬಿಟ್ಟೋಗುತ್ತವೆ.

Short Success Quotes in Kannada Images

ನೀವು ಈ ಯಶಸ್ಸಿನ ಉಲ್ಲೇಖಗಳ ಸಂಗ್ರಹವನ್ನು ಇಷ್ಟಪಡುತ್ತೀರಿ ಎಂದು ನಾವು ಆಶಿಸುತ್ತೇವೆ. ಈ ಉಲ್ಲೇಖಗಳು ನಿಮ್ಮ ಜೀವನದಲ್ಲಿ ಪ್ರೇರಣೆ ಮತ್ತು ಹೊಸ ದೃಷ್ಟಿಕೋನವನ್ನು ತಂದುಕೊಟ್ಟಿದ್ದರೆ, ಅದರಿಂದ ನಮಗೆ ಸಂತೋಷವಾಗುತ್ತದೆ. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ, ಅವರು ಕೂಡಾ ಇದರಿಂದ ಪ್ರೇರಣೆಯನ್ನು ಪಡೆಯಬಹುದು.

ಹೆಚ್ಚಿನ ಪ್ರೇರಣಾದಾಯಕ ವಿಷಯಗಳು ಮತ್ತು ಉಲ್ಲೇಖಗಳಿಗಾಗಿ ನಮ್ಮ ಬ್ಲಾಗ್ ಅನ್ನು ನಿರಂತರವಾಗಿ ಭೇಟಿಕೊಡಿ. ನಿಮ್ಮ ಬೆಂಬಲವೇ ನಮ್ಮನ್ನು ಇನ್ನಷ್ಟು ಉತ್ತಮ ವಿಷಯಗಳನ್ನು ತಲುಪಿಸಲು ಪ್ರೇರೇಪಿಸುತ್ತದೆ. ಮತ್ತೊಮ್ಮೆ ಭೇಟಿಯಾಗುವವರೆಗೆ, ನಿಮ್ಮ ಪ್ರಯಾಣದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಕಂಡುಕೊಳ್ಳಿ!


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.