ನಗು – ಅದು ಜೀವನವನ್ನು ಮತ್ತಷ್ಟು ಸುಂದರವಾಗಿಸುವ ಒಂದು ಶಕ್ತಿ. ಒಂದು ನಗು ಮಾನವ ಸಂಬಂಧಗಳನ್ನು ಗಟ್ಟಿಯಾಗಿಸುವುದರ ಜೊತೆಗೆ ಪ್ರತಿದಿನದ ತೊಂದರೆಗಳನ್ನು ಮರೆಮಾಚುವ ಸಾಮರ್ಥ್ಯ ಹೊಂದಿದೆ..
ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಕ್ಷಣವೂ ಸಮಾಧಾನದ ಮುಸುಕಿನ ಒಂದು ನಗು ಕೊಡುವ ಸಾದರದಂತೆ ಇರಬೇಕು. ಅದು ಸಣ್ಣದಾದರೂ ದೊಡ್ಡದಾದರೂ, ಹೃದಯದಿಂದ ಹೊಮ್ಮಿದ ನಗು ಜೀವನಕ್ಕೆ ಹೊಸ ಬಣ್ಣ ತುಂಬುತ್ತದೆ. ಪ್ರತಿಯೊಬ್ಬರ ನಗುವಿನ ಹಿಂದೆ ಒಂದು ಕಥೆ ಇರುತ್ತದೆ.
ಈ ಲೇಖನದಲ್ಲಿ ನೀವು ಕನ್ನಡದಲ್ಲಿ ನಗು ಕುರಿತಾದ ಸುಂದರ ಮತ್ತು ಪ್ರೇರಣಾದಾಯಕ ಉಕ್ತಿಗಳ (Kannada meaningful quotes on smile) ಸಂಗ್ರಹವನ್ನು ನೀವು ನೋಡಲಿದ್ದೀರಿ.
ಈ ನಗುವಿನ ಕುರಿತ ಸಂದೇಶಗಳ (smile quotes in kannada language) ಮೂಲಕ ನಿಮ್ಮ ದಿನವನ್ನು ಬೆಳೆಗಿಸಿಕೊಳ್ಳಿ. ಕಠಿಣ ದಿನಗಳಲ್ಲಿಯೂ ಒಂದು ನಗುವು ನಿಮ್ಮ ಮತ್ತು ನಿಮ್ಮ ಸುತ್ತಮುತ್ತಲ ಜನರ ಜೀವನವನ್ನು ಪರಿವರ್ತನೆ ಮಾಡಬಹುದು.
Table of Contents
Smile Quotes in Kannada
ನಗು ಮುಖ ಸಾವಿಗೆ ತುಂಬಾ ದೂರ ಅಳು ಮುಖ ನೋವಿಗೆ ತುಂಬಾ ಹತ್ತಿರ ಮುಖದ ಮೇಲೆ ಮುಗುಳು ನಗೆ ಇದ್ರೆ ಹರಿವ ನೀರು ಕೂಡ ನಾಚಿಕೆ ಪಡುತ್ತೆ. So ಯಾವಾಗಲೂ ನಗ್ತಾ ಇರಿ.
ಸಮಸ್ಯೆ ಸಾವಿರದಷ್ಟು ಇದ್ದರೂ ನಗು ಮುಖ ಧರಿಸಲೇಬೇಕು
ನಮಗಾಗಿ ಅಲ್ಲದಿದ್ದರೂ, ನಮ್ಮವರಿಗಾಗಿ.
ನಗು ಮುಖ ಎಲ್ಲವನ್ನೂ ಮರೆತು ಬಿಡುತ್ತದೆ
ಎಲ್ಲಾ ಸಮಯದಲ್ಲೂ ನಗು ನಮ್ಮ ಜೊತೆಗಿರಲ್ಲ,
ಆದ್ರೆ ನಗಿಸಿದವರ ಮುಖ ಎಂದೆದಿಗೂ ಶಾಶ್ವತ…
ಮುಖ ಸುಂದರವೋ…
ನೀ ಹಾಕಿದ ಮೂಗುತಿ ಸುಂದರವೋ…
ಮೂಗುತಿ ಮಿಣುಗುವ ಆ ನಗು ಸುಂದರವೋ…
ಮೂಗು ಮೂಗುತಿ ಎರಡಕ್ಕೂ ನಾಚಿಕೆ ತರಿಸಿದ ನಿನ್ನ ಮೊಗ ನಿನ್ನ ನಗು ಎಲ್ಲದಕೂ ಸುಂದರವೋ…
ಮನಸ್ಸಿನಲ್ಲಿ ನೂರು ಆಲೋಚನೆ ದುಃಖ ಇದ್ದರೂ,
ನಗುವ ಮುಖ ನೋಡಿ ಮನನುಡಿಯಿತು,
ಏಕೆ ಈ ನೋವಿನಲ್ಲು ನಗು?
ಆಗ ನಗು ನುಡಿಯಿತು, ನನಗಾಗಿ ಅಲ್ಲ ನನ್ನವರಿಗಾಗಿ.
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ॥
ಮನಸ್ಸಿನಲ್ಲಿ ಪ್ರೀತಿ,
ಮಾತಿನಲ್ಲಿ ಮಾಧುರ್ಯ ಮತ್ತು ಮುಖದಲ್ಲಿ ನಗು,
ಇವು ಜೀವನದ ಎಲ್ಲಾ ಕಷ್ಟಗಳನ್ನು ನಿಭಾಯಿಸುವ ಸೂತ್ರವಾಗಿವೆ.
ನಗು ನಗು.
ನಾವು ನಗುವನ್ನ ಹಂಚೋಣ…
ಜೀವನದಲ್ಲಿ ಯಾವುದು ಶಾಶ್ವತ ಅಲ್ಲ.
ಹಾಗಿದ್ದಾಗ ದ್ವೇಷ ಅಸೂಯೆ ಯಾಕೆ.
ನಗುವನ್ನ ಪ್ರೀತಿಯನ್ನ ಹಂಚಿ ಬದುಕಿ ಬಾಳೋಣ.
ನೆನೆಯುತ್ತ ನಿನ್ನ ಕಳೆಯುತ್ತೀರುತೆ ದಿನಗಳನ್ನ.
ನಿನ್ನ ಮುಖ ನೋಡಿದರೆ ಸಾಕೆನ್ನ ಮರೆಯುವೆ ನನ್ನ ನೋವೆಲ್ಲವನ್ನ.
ನೀನು ಖುಷಿಯಾಗಿರು
ನನ್ನ ಮುಖದ ಮೇಲೆ ನಗು ತಾನಾಗೆ ಅರಳುತ್ತೆ
ನೆನಪುಗಳೆಂದರೆ ನೆನ್ನೆಗಳ ಋಣದ ನಗು, ನಾಳೆಗಳ ನಿಟ್ಟುಸಿರ ಬಡ್ಡಿ..
ಜೀವನದಲ್ಲಿ ನಗು ಒಂದೇ ಉಚಿತ
ಒಂದು ನಗು ಸಾವಿರ ಹೃದಯಗಳನ್ನು ಗಳಿಸಬಹುದು..
ಸೋಲು ಕನಸಲ್ಲಿ ಇರಲಿ,
ಗೆಲುವು ಮನಸಲ್ಲಿ ಇರಲಿ,
ನಗು ಜೀವನದಲ್ಲಿ ಇರಲಿ..
ನಾನು ಸೋತಿದ್ದು ನಿನ್ನ ಆ ನಗುವಿನಿಂದ
ಆ ನಗು ನನ್ನ ಜೊತೆ ಬರಲಿ..
ಬಳಸಿದಂತೆಲ್ಲಾ ಬೆಳೆಯುವ ಅಕ್ಷಯ ಪಾತ್ರೆ “ನಗು”!
ಚಿಂತೆ ಬಿಡಿ ನಗು ನಗುತ್ತಾ ಇರಿ.
ನಗು
ಅಂತರಂಗದ ದ್ವೇಷಾಗ್ನಿ ಸುಟ್ಟು ಚಿತೆಯಾಗುವವರೆಗೂ .
ಈ ನಮ್ಮ್ ಸಣ್ಣ ನಗು ಮರೆಯಲಾರದ ನೋವನ್ನು ಮರೆಸುತ್ತೆ
ಮೌನವೇ ಅತ್ಯುತ್ತಮ ಉತ್ತರವಾದಾಗ,
ನಗು ಅತ್ಯುತ್ತಮ ಪ್ರತೀಕಾರವಾಗುತ್ತದೆ…!
ಮನದಲ್ಲಿ ನೋವು
ಮುಖದಲ್ಲಿ ನಗು
ಇಷ್ಟೇ ನನ್ನ ಜೀವನ
ಕೋಪ ಅನ್ನೋದು ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ ಮನಸ್ಸನ್ನ ಗೆಲ್ಲುತ್ತೆ…..
ಓ ಜೀವವೇ ನಗು ನಗುತ್ತಾ ಇರು ನೀನು ಎಂದೆಂದಿಗೂ..
ನಿಮ್ಮ ನಗು ನಿಮ್ಮ ಸಂತೋಷವನ್ನು ಎಂದಿಗೂ ಕಳೆದುಕೊಳ್ಳಬೇಡಿ
ನಗು
ಇದೊಂದು ಸರಳವಾದ ಉಚಿತ ಚಿಕಿತ್ಸೆ. . . . .
ನಗು ಒಂದೇ ನಮ್ಮ ಆಸ್ತಿ
ಯಾವಾಗಲು ನಗುತಿರು ಜಾಸ್ತಿ
ಎಲ್ಲ ನೋವನ್ನು ಮುಚ್ಚಿಡುವ ಅತ್ತ್ಯುತ್ತಮ ವಿಧಾನವೇ ನಗು
ಇನ್ನೊಬ್ಬರನ್ನು ನಗಿಸಿ ನಗು…
ನೋಯಿಸಿ ಎಂದಿಗೂ ನಗಬೇಡ.
ಕೋಟಿ ದುಃಖಕ್ಕೂ “ನಗು” ಒಂದೇ Perfect solution.
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದರು ಅದರಲ್ಲಿ ಹೂವು ಅರಳ ಬೆಕು ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವುಗಳು ತುಂಬಿದರು ಮುಖದಲ್ಲಿ ನಗು ತುಂಬಿರಲೆ ಬೆಕು
ಯಶಸ್ವಿ ವ್ಯಕ್ತಿಗಳು ಯಾವಾಗಲೂ ತಮ್ಮ ಮುಖದ ಮೇಲೆ ಈ ಎರಡು ವಿಷಯಗಳನ್ನು ಹೊಂದಿರುತ್ತಾರೆ. ನಗು ಮತ್ತು ಮೌನ, ನಗು ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಮೌನ ಸಮಸ್ಯೆಗಳನ್ನು ತಪ್ಪಿಸುತ್ತದೆ….
Cute Smile Quotes in Kannada
ನಗು ನೀ ಏನಾದರು, ನಗಲೇ ಬೇಕು ನೀ ಯಾರೇ ಆದರೂ.
ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ.
ಒಂದು ಸೌಂದರ್ಯ ಇನ್ನೊಂದು ಹಣ.
ನಮ್ ಪುಣ್ಯ ಅವೆರಡು ನಮ್ ಹತ್ರ ಇಲ್ಲ.
ಇರೋದೊಂದೇ ಈ ಬಿಕನಾಸಿ ನಗು.
ಖುಷಿಯಾಗಿ ಇರ್ತೀನಿ ಅಂದಮಾತ್ರಕ್ಕೆ ನನಗೆ ನೋವುಗಳೆ ಇಲ್ಲ ಅಂತ ಅಲ್ಲ
ನನ್ನ ನೋವುಗಳನ್ನು ಮೀರಿ ಜೀವಿಸಬಲ್ಲೆ ಎಂಬ ಆತ್ಮವಿಶ್ವಾಸದ ಪ್ರತೀಕವೇ ನನ್ನ “ನಗು”…!
ನಗು ಸುಮ್ಮನೆ…
ಅದುವೇ ನಮ್ಮ ಅರಮನೆ….
ಖುಷಿ ಸ್ವಾಭಾವಿಕ…
ಸಮಯ ತಾತ್ಕಾಲಿಕ….
ಎಲ್ಲರಿಗೂ ಅರ್ಥವಾಗುವ ಭಾಷೆ
ಅಮೂಲ್ಯವಾದ ನಗು
ಸಮಯ’ ಮತ್ತು ‘ನಗು’ ಇವೆರಡೂ ಜೀವನದ ವಿಚಿತ್ರಗಳು. ಕೆಲವೊಮ್ಮೆ ‘ಸಮಯ’ವೂ ನಮಗೆ ನಗುವುದನ್ನೇ ಮರೆಸಿಬಿಡುತ್ತದೆ. ಮತ್ತೆ ಕೆಲವೊಮ್ಮೆ ‘ನಗು’ವು ನಮಗೆ ಸಮಯವನ್ನೇ ಮರೆಸಿಬಿಡುತ್ತದೆ.
ನಗು ಎಲ್ಲರಿಗಾಗಿ
ಪ್ರೀತಿ ಒಬ್ಬರಿಗಾಗಿ
ನಗುತಿರು ಮನವೇ
ಮನದ ನೋವು ಮರೆಯಾಗುವವರೆಗೂ
ನಗದಿದ್ದರೇ ನಿನ್ನನ್ನು ನೀನೆ ಮರೆತು ಹೋಗುವೆ…..
“ಮಣ್ಣಿಗೆ ಸೇರುವ ಜೀವವಿದು ಇದಕ್ಕೇಕೆ ಇಷ್ಟು ಮೋಹ,,,,
ಲೋಭ ತುಂಬಿದ ಮನಸ್ಸಿಗೇಕೆ ಇಷ್ಟು ದುರಾಸೆ,,,
ನಗು – ನಗುತ ಬದುಕನ್ನು ಸ್ವಾಗತಿಸು ಸಹಜ ಹಾಗೂ ಸರಳ ಜೀವನವನ್ನು ನೀ ನಡೆಸು…..
ಎಲ್ಲಿಯೂ ಹುಡುಕಿದರೂ ಸಿಗದ ನೆಮ್ಮದಿ ನಿನ್ನೊಡನೆ ಮಾತಾಡುವಾಗ,
ನಿನ್ನ ನಗು ಕಂಡಾಗ ನಿನ್ನ ಮೊಗವ ಕಂಡಾಗ ಸಿಗುವುದು…
ಬದುಕಲ್ಲಿ ಸಮಯ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ನಮ್ಮ ನಡುವೆ ಇರುವ ಜನರ ಮನಸ್ಸು ಮಾತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತೆ. ಮಾಡಿದ ತಪ್ಪಿಗೆ ದೇವರ ಹುಂಡಿಗೆ ಹಣ ಹಾಕುವ ಬದಲು ನೀವು ನೋಯಿಸಿದವರ ಮನಸಲ್ಲಿ ಒಮ್ಮೆ ನಗು ತರಿಸಿ ನೋಡಿ ಹಾ.. ಭಗವಂತ ಕೂಡ ಮೆಚ್ಚುತ್ತಾನೆ..
ನಗು ಸಾವನ್ನು ಮುಂದೂಡುತ್ತದೆ.
ಆದ್ದರಿಂದ ನಕ್ಕು ನಲಿಯುವುದನ್ನು ಕಲಿಯಬೇಕು
ನಗು ನನ್ನ ಆಸ್ತಿ
ನಾನು ನಗುವೇ ಸ್ವಲ್ಪ ಜಾಸ್ತಿ
ಒಣಗಿರುವ ಹೂವನ್ನು ನೋಡಿ ಅರಲಿರುವ ಹೂ ನಗಬಹುದು ಆದರೆ ಅದು ಶಾಶ್ವತ ಅಲ್ಲ ಅದಕ್ಕೂ ಬಾಡೋ ಸಮಯ ಬಂದೆ ಬರುತ್ತದೆ. ಅಹಂಕಾರದ ನಗು ತಾತ್ಕಾಲಿಕ ಅಷ್ಟೇ.
ಕಣ್ಣಲ್ಲಿ ಎಷ್ಟೇ ಕಣ್ಣೀರು ಇದ್ದರೂ,
ತುಟಿ ಮೇಲಿನ ಆ ಮೌನದ ನಗು ಸಾವಿರ ಪ್ರಶ್ನೆಗೆ ಉತ್ತರವಾಗಿರುತ್ತದೆ…
“ಸೋತಾಗ ನಮ್ಮನು ಮೇಲಕ್ಕೆತ್ತುವ ಆಯುಧವೆ ನಮ್ಮ ನಗು”
ಯಾರಿಗಾಗಿ ನಗು, ನೋವು ಎಂಬುದು ಯಾವಾಗಲೂ ಕಣ್ಣೀರಿನಲ್ಲೆ ತೋರಿಸಲು ಆಗುವುದಿಲ್ಲ, ಕೆಲವೊಮ್ಮೆ ನಮ್ಮ ನಗುವಿನಿಂದ ಮರೆಮಾಚಬೇಕಾಗುತ್ತದೆ.
ನಗು ನೀ ಹಾಗೆ ಸುಮ್ಮನೆ ಎಲ್ಲರೂ ಬಿದ್ದೋಗ್ತಾರೆ ನಿನ್ ಮೇಲೆ.
ನಮ್ಮ್ ಬಗ್ಗೆ ಆಡ್ಕೊಂಡು ನಗೋರು ನೂರೆಂಟು ಜನಾ!” ಅದ್ರ್ ಅವರಿಗೆಲ್ಲ ಕೊಡೊ ನನ್ನ ಉತ್ರ ನನ್ನ ನಗು!!
ನಿಜವಾದ ಶ್ರೀಮಂತಿಕೆ ಅಂದ್ರೆ “ಬುದ್ಧಿವಂತಿಕೆ” ಬಲಶಾಲಿ ಆಯುಧ ಅಂದ್ರೆ “ತಾಳ್ಮೆ” ಉತ್ತಮ ಭದ್ರತೆ ಅಂದ್ರೆ “ನಂಬಿಕೆ” ಅತ್ಯುತ್ತಮ ಔಷದಿ ಅಂದ್ರೆ “ನಗು” ವಿಶೇಷ ಏನಂದ್ರೆ ಇವೆಲ್ಲವೂ “ಉಚಿತ”..!!
ಮನಸಲ್ಲಿ ಎಷ್ಟೇ ನೋವು ಇದ್ರೂ ನಮ್ಮ ಮುಖದಲ್ಲಿ ಯಾವಾಗ್ಲೂ ನಗು ಇರಬೇಕು ಯಾಕೆ ಅಂದ್ರೆ ನಮ್ ನಗು ನೋಡಿ ಖುಷಿ ಪಡೋ ಎಷ್ಟೋ ಜೀವಗಳು ನಮ್ ಜೊತೆ ಇರುತ್ತೆ….
ಮುಖದಲ್ಲೊಂದು ನಗು ಹಾಗೂ ಯಾರ್ ಮಾತಿಗೂ ತಲೆಕೆಡಿಸಿಕೊಳ್ಳದೆ ನಮ್ಮ ಇಚ್ಛೆಯೆಂತೆ ಬದುಕುವುದರಲ್ಲಿ ಜೀವನದ ನೆಮ್ಮದಿ ಅಡಗಿದೆ….
ನಗು ದುಬಾರಿಯಲ್ಲದಿರಬಹುದು…
ಆದರದು ಬೆಲೆ ಕಟ್ಟಲಾಗದ ಅಮೂಲ್ಯವಾದ ಭಾವ.
ಅದು ಪ್ರತಿಯೊಬ್ಬರೂ ಧರಿಸಬಹುದಾದ ಒಡವೆ..!!
ಕತ್ತಲಲ್ಲಿ ಬೆಳಕು ಚೆಂದ…
ಕವಿಗಳಿಗೆ ಕವನ ಚೆಂದ…
ಹಾಡಿಗೆ ಸಂಗೀತ ಚೆಂದ…
ನನಗೆ ನಿನ್ನ ಆ ನಗು ಚೆಂದ….
ಸೀರಿಯಸ್ಸಾಗಿ ಯೋಚಿಸಿ ದಬಾಕೋದ್ ಏನಿದೆ..!
ನಗು ಬಂದಾಗ ಮನಸ್ಪೂರ್ತಿಯಾಗಿ ನಕ್ಟಿಡಿ,
ಮನುಷ್ಯ ಅಂದ್ಮಲೆ ಕಷ್ಟಗಳು ಇದ್ದೆ ಇರ್ತದೆ…!!
ನಿನ್ನ ನಗು ನಾಲ್ಕು ಜನಗಳ ಮುಂದೆ ಇರಲಿ
ಆದರೆ ನಿನ್ನ ನೋವು, ಕಣ್ಣೀರು.ನಾಲ್ಕು ಗೋಡೆಗಳ ಮದ್ಯೆ ಇರಲಿ.
ನಗು ಮಂದಹಾಸದ ನಗುವಿನಲಿ ತೇಲಿದೆ ಈ ನನ್ನ ಮನ
ಸದಾ ನಗು ನಗುತ್ತಲೇ ಇರು ಉಸಿರ ನಿಲ್ಲುವವರೆಗೂ…….
ಕವಿತೆ ಬರೆಯುವಷ್ಟು ಸಾಲು ನೀನಲ್ಲ,
ಪದಗಳಿಗೆ ಸಿಗದ ಹೋಲಿಕೆ ನೀನು.
ಕಣ್ಮುಂದೆ ತಂಗಾಳಿಯಂತೆ ಬಂದ ನಿನ್ನನ್ನು ನೋಡಿ ಒಮ್ಮೆ ಮೌನಳಾಗಿಬಿಟ್ಟೆ,
ನಿನ್ನ ಆ ನಗು ಮುಖವ ನೋಡಿ
ನಗು ಆ ದೇವರು ಕೊಟ್ಟ ಆಭರಣ ಯಾವಾಗಲು ಅದನ್ನು ಧರಿಸಿ..
ಮುಖದ ಮೇಲಿನ ಸುಕ್ಕು ಕಾಣಿಸದಿದ್ದರು ಪರವಾಗಿಲ್ಲ
ತಮ್ಮವರ ಮನಸ್ಸಿನ ನೆಮ್ಮದಿಗಾದರು ತುಟಿಯಲ್ಲಿ ಕಿರು ಗೆರೆ ಇರಲಿ..
ಕಷ್ಟಪಡೋರಿಗೆ ನಗು ಬರಲ್ಲ,
ನಗುವವರಿಗೆ ಕಷ್ಟ ಗೊತ್ತಿರಲ್ಲ,
ಆದರೆ ಕಷ್ಟದಲ್ಲೂ ನಗುವವರಿಗೆ ಎಂದೂ ಸೋಲಿಲ್ಲ.
ನಗು ನೀ ಹಾಗೆ ಸುಮ್ಮನೆ ನಗುವ ಬೆಳಕಾಗಲಿ ನಿಮ್ಮ ಮನೆ.
ಸುಮ್ಮನೇ ಪ್ರಯೋಗಕ್ಕಾಗಿ ನಾವು ನಮ್ಮ ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ಪ್ರೀತಿಯಿಂದ ನಕ್ಕು ನೋಡೋಣ !
ಮತ್ತೊಮ್ಮೆ ದ್ವೇಷಾರೋಷದಿಂದ ಕುದಿದು ನೋಡೋಣ ನಮ್ಮ ನಗು ಮೊಗ ಅದೆಷ್ಟು ಸುಂದರ !
ನಮ್ಮ ಸಿಟ್ಟಿನ ಮುಖ ಅದೆಷ್ಟು ಭಯಂಕರ !
ನಮ್ಮ ಸಿಟ್ಟಿನ ಮುಖ ನಮಗೇ ಸೇರುವುದಿಲ್ಲವೆಂದಾಗ ಮತ್ತೊಬ್ಬರಿಗೆ ಹೇಗೆ ಸೇರುತ್ತದೆ ?
ಪ್ರಪಂಚವೆಂದರೆ ಏರು ಪೇರು, ನೋವು ನಲಿವು ಇರುವುದೇ. ಅದನೆಂದೂ ಸರಿಪಡಿಸಲಾಗದು.
ಈ ವಿಷಮ ಸಂಸಾರದಲ್ಲಿ ನಾವು ಸುಮ್ಮನೇ ಅನ್ಯರಿಗಾಗಿ ಚಿಂತಿಸದೆ ಸದಾ ಪ್ರಶಾಂತಿಯಿಂದ ಪ್ರಸನ್ನತೆಯಿಂದ ಬದುಕಬೇಕು.
ಇದುವೇ ಆದರ್ಶ ಆನಂದಮಯ ಜೀವನ !
ಇದನ್ನೂ ಓದಿ:
Smile Quotes in Kannada Images
ನಗುವು ಜೀವನದ ಒಡವೆ. ಕನ್ನಡದಲ್ಲಿ ನಗು ಕುರಿತ ಉಕ್ತಿಗಳ ಈ ಸಂಗ್ರಹವನ್ನು (smile quotes in kannada collection) ಓದಿ, ನಿಮ್ಮ ಮನಸ್ಸು ಸಂತಸಗೊಂಡಿದ್ದರೆ, ನಮ್ಮ ಉದ್ದೇಶ ಸಾರ್ಥಕವಾಗಿದೆ ಎಂದರ್ಥ. ನಗು ಕೇವಲ ಹೃದಯದ ಮಾತು ಅಲ್ಲ, ಅದು ಸಂಬಂಧಗಳ ಸೇತುವೆ, ಬದುಕಿಗೆ ಉತ್ಸಾಹದ ಹೊಸ ಹಾದಿ.
ನೀವು ಈ ನಗುವಿನ ಕುರಿತ ಸಂದೇಶಗಳನ್ನು (quotes on smile in kannada) ಓದಿ ನಿಮ್ಮ ಪ್ರೀತಿಯವರ ಜೊತೆ ಹಂಚಿಕೊಂಡರೆ ಅವರ ದಿನವೂ ಸುಂದರವಾಗಿರುತ್ತದೆ. ನಮ್ಮ ಜೀವನದ ಪ್ರತಿಯೊಂದು ಕ್ಷಣಕ್ಕೂ ನಗುವು ಪ್ರೇರಣೆಯಾಗಲಿ ಎಂಬ ಆಶಯ ನಮ್ಮದು.
ನಮ್ಮ ಸಂಗ್ರಹ ನಿಮ್ಮಿಗೆ ಇಷ್ಟವಾಗಿದೆಯೆಂದು ಆಶಿಸುತ್ತೇವೆ. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿ ಮತ್ತು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಹೀಗೆ ಪ್ರೇರಣಾದಾಯಕ ವಿಷಯಗಳಿಗೆ, ಕನ್ನಡದ ಸಾಹಿತ್ಯದ ಚೆಲುವಿಗೆ ನಮ್ಮ ಬ್ಲಾಗ್ ಗೆ ಭೇಟಿ ನೀಡುತ್ತಿರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.