150+ Time Quotes in Kannada

ಸಮಯವು ಜೀವನದಲ್ಲಿ ಅತ್ಯಂತ ಅಮೂಲ್ಯವಾದ ಸಂಪತ್ತುಗಳಲ್ಲಿ ಒಂದಾಗಿದೆ. ಇದು ನಮ್ಮ ಅನುಭವಗಳು, ಸಂಬಂಧಗಳು ಮತ್ತು ಸಾಧನೆಗಳನ್ನು ರೂಪಿಸುತ್ತದೆ. ಸಂಬಂಧಗಳಲ್ಲಿ ಸಮಯದ ಮಹತ್ವ, ಮತ್ತು ಕಷ್ಟದ ಸಮಯದಲ್ಲಿ ಕಲಿತ ಪಾಠಗಳನ್ನು ಒಳಗೊಂಡಿದೆ. ಈ ಉಲ್ಲೇಖಗಳು ಪ್ರತಿಯೊಂದು ಕ್ಷಣವನ್ನು ಅನುಭವಿಸಲು ಮತ್ತು ಅದರಿಂದ ಪಾಠ ಕಲಿತು ಮುಂದಿನ ಜೀವಂದಲ್ಲಿ ಬುದ್ಧಿವಂತಿಯಾಗಿ ಬಳಸಲು ನೆನಪಿಸುತ್ತವೆ. ಕಳೆದುಕೊಂಡ ಕಾಲವನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

ಈ ಸಮಯದ ಕುರಿತ ಉಲ್ಲೇಖಗಳನ್ನು (time quotes in kannada) ನೀವು ವಾಟ್ಸಾಪ್ ಮೂಲಕ ಹಂಚಿಕೊಳ್ಳಬಹುದು ಅಥವಾ ಇನ್ಸ್ಟಾಗ್ರಾಮ್ ಕ್ಯಾಪ್ಷನ್‌ಗಳಾಗಿ ಬಳಸಬಹುದು. ಪ್ರೇರಣಾತ್ಮಕ ಚಿಂತನೆಗಳು ಮತ್ತು ಜೀವನದ ಪಾಠಗಳನ್ನು ಒಳಗೊಂಡಿರುವ ಈ ಕನ್ನಡ ಸಮಯದ ಉಲ್ಲೇಖಗಳು ಪ್ರತಿಯೊಬ್ಬರಿಗೂ ಉಪಯುಕ್ತವಾಗುತ್ತವೆ. ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂಬುದನ್ನು ನೆನಪಿಸುವ ಈ ಉಲ್ಲೇಖಗಳು ನಿಮ್ಮ ದಿನನಿತ್ಯದ ಜೀವನಕ್ಕೆ ಹೊಸ ಬೆಳಕು ನೀಡುತ್ತವೆ.

ಪ್ರೀತಿಯಲ್ಲಿ ಮುಳುಗಿರುವವರು, ಕಷ್ಟದ ಸಮಯವನ್ನು ಎದುರಿಸುತ್ತಿರುವವರು ಅಥವಾ ತಮ್ಮ ಜೀವನಕ್ಕೆ ಹೊಸ ದಿಕ್ಕು ಬೇಕಾದವರು, ಈ ಕಾಲದ ಕುರಿತ ಸಂದೇಶಗಳನ್ನು ಓದಿ. ಇವು ನಿಮ್ಮ ಹೃದಯವನ್ನು ಸ್ಪರ್ಶಿಸಬಹುದು ಮತ್ತು ನಿಮ್ಮನ್ನು ಮುಂದೆ ಸಾಗಲು ಪ್ರೇರೇಪಿಸಬಹುದು.

Time Quotes in Kannada Collection

Time Quotes in Kannada

ಜಗದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವುದು ಗಡಿಯಾರ ಮಾತ್ರ. ಬಡವನಿಗೂ ಒಂದೇ, ಶ್ರೀಮಂತನಿಗೂ ಒಂದೇ. ಯಾರಿಗೂ ನಿಲ್ಲುವುದಿಲ್ಲ.

 

ಸಮಯ ಬಂದಾಗ ಸೇರುವರು

ಸಮಯ ನೋಡಿ ಸರಿಯುವರು

ಸ್ನೇಹಿತರಾಗಲಿ ಸಂಬಧಿಕರಾಗಲಿ

ಸಿಹಿ ಇರುವ ತನಕ ಇರುವೆಗಳ ಹಿಂಡು

ಎಲ್ಲವೂ ಸರಿ ಇರುವ ತನಕ ಸ್ನೇಹಿತರು

ಸಂಬಂದಿಕರ ದಂಡು..

 

ಪ್ರತಿಯೊಂದು ಸಂಬಂಧದ ಮೂಲವು ಸ್ವಾರ್ಥವೇ…

ಸಮಯ ಬಂದಾಗ ಅವರ ಉದ್ದೇಶ ತಿಳಿಯುತ್ತದೆ ಅಷ್ಟೇ

 

ಸಮಯ ಬಂದಾಗ ಮಾತನಾಡೋರಿಗಿಂತ ಸಮಯ ಕೊಟ್ಟು ಮಾತನಾಡುವವರನ್ನು ನಂಬಿ.

“ಯಾಕೆಂದರೆ ” ಅವರು ಎಂಥ ಸಮಯದಲ್ಲೂ ನಿಮ್ಮಿಂದ ದೂರ ಹೋಗಲ್ಲ.

 

ಕೇಳುವ ಸಮಯ ಬಂದಾಗ ಎಲ್ಲವನ್ನೂ ಕೇಳಿಸಿಕೊಳ್ಳಲೇಬೇಕಾಗುತ್ತದೆ.. 

ಅದು ಸತ್ಯವೋ ಸುಳ್ಳೋ, ಸರಿಯೋ ತಪ್ಪೋ, ಒಳಿತೋ ಕೆಡುಕೋ…!!

 

ಯಾರಿಂದಲಾದರೂ ನಮ್ಮ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ ಎನಿಸಿದರೆ ಅವರೊಂದಿಗೆ ಜಗಳವಾಡಬೇಡಿ….!! ಸುಮ್ಮನೆ ದೂರ  ಇದ್ದುಬಿಡಿ. ಸಮಯ ಬಂದಾಗ ನಿಮ್ಮ ಮಹತ್ವ ಅರಿವಾಗುತ್ತದೆ….!!!

 

ಇಲ್ಲಿ ನಾವು ಏನು ಹೇಳಬೇಕಾಗಿಲ್ಲ,

ಸಮಯ ಬಂದಾಗ ಅದೇ ಅವರ ಮುಖವಾಡ ಕಳಚಿ ಬಿಳತ್ತೆ,

ನಾವು ಅದನ್ನ ನೋಡೋಕ್ಕೆ, ತಾಳ್ಮೆಯಿಂದ ಇರಬೇಕು ಅಷ್ಟೇ. 

 

ನಕಲಿ ಜನರನ್ನು ಗುರುತಿಸ ಬೇಕಾಗಿಲ್ಲ. 

ಸಮಯ ಬಂದಾಗ ಅವರು ತಮ್ಮನ್ನ ತಾವೇ ಗುರುತಿಸಿಕೊಳ್ಳುತಾರೆ. 

 

ಒಳ್ಳೆ ಸಮಯ ಬಂದಾಗ ಬದುಕಲ್ಲಿ ಎಲ್ಲಾ ಒಳ್ಳೇದೇ ನಡೆಯುತ್ತದೆ.

ಬದುಕು ಹೊಸದಾಗಿ ಕಾಣಿಸುತ್ತದೆ…!!

 

ಸಂಬಂಧದಲ್ಲಿ ‘ಸಂ’ಪೂರ್ಣ ಭಾಂದವ್ಯ ಬೆಳೆದಾಗ

‘ಸಂ’ಹಾರ ಮಾಡುವುದು ಸಮಯ,

ಪುನಃ ಭಾಂದವ್ಯ ಬೆಸುಗೆ ಕೂಡುವ ಸಮಯ ಬಂದಾಗ

ಇರುವದಿಲ್ಲ ಅವರ ನಡುವೆ ಕೂಡಿಸಿಕೊಳ್ಳುವ ಪ್ರಮಯ,

ಇದಕ್ಕೆಲ್ಲ ಮೂಲಕಾರಣವಲ್ಲವೇ ಈ ಸಮಯ..?

 

ಹೊಡೆತದ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡುವ ಭಗವಂತ ಸಮಯ ಬಂದಾಗ ತಿರುಗಿಸಿ ಹೊಡೆಯೋ ತಾಕತ್ತನ್ನು ನೀಡಿರುತ್ತಾನೆ.

 

ದುಡುಕಬೇಡ ದುಗುಡ ಬೇಡ..

ಸಮಯ ಬಂದಾಗ ಎಲ್ಲವೂ ಸಾಧ್ಯವಾಗುತ್ತದೆ..!!

 

ಯಾವುದು ಶಾಶ್ವತ ಅಲ್ಲಾ ವಸ್ತು ಆಗಲಿ ಸಂಬಂಧ ಆಗಲಿ ಸಮಯ ಬಂದಾಗ ಮುಗಿದು ಹೋಗುತ್ತೆ…

ಏನಂತೀರಾ..?

 

ಒಬ್ಬ ಮನುಷ್ಯನ ಬದುಕಲ್ಲಿ ಒಳ್ಳೆಯ ಸಮಯ ಅಂತ ಒಂದು ಬಂದಾಗ ಅವನ ಗೆಲುವನ್ನು

ತಡೆಯಲು ಯಾರಿಂದಲೂ ಸಾಧ್ಯವಿಲ್ಲ.. 

ಆತನ ಏಳಿಗೆಯನ್ನು ಸಹಿಸದೆ ಕೆಡಿಸಲು ಮಾಡುವ ಯಾರ ಯಾವ ತಂತ್ರ, ಕುತಂತ್ರಗಳು ಕೆಲಸ ಮಾಡೋದಿಲ್ಲ..!!

 

ನಾವು ನಮ್ಮ ಜೀವನದಲ್ಲಿ ತುಂಬಾ ಸ್ಪಷಲ್ ಅಂತ ಯಾರನ್ನಾ ಅಂದುಕೊಂಡಿರುತ್ತೀವೋ ಅವರು ಸಮಯ ಬಂದಾಗ ಅವರ ಸ್ಪೆಷಲ್ ಬುದ್ದಿನಾ‌ ತೋರಿಸಿ ಬಿಡ್ತಾರೆ., ಸಮಯ ಎಂದಿಗೂ ನಿನ್ನದಲ್ಲ, ನೆನಪಿರಲಿ. ಹಾಗಂತ ಸಮಯ ಬಂದಾಗ ನೋಡುತ್ತಾ ಕುರಬೇಡ…

 

ಸಮಯ ಬಂದಾಗ ನಮ್ಮವರು ಯಾರು ನಮ್ಮವರಂತೆ ನಟಿಸುವವರು ಯಾರು ಎಂದು ದೇವರೆ ನಮಗೆ ಗೊತ್ತು ಮಾಡಿಸುತ್ತಾನೆ…

 

ಹೆತ್ತವರ ಋಣ ಬಿಟ್ಟು ಬೇರೆ ಯಾರೊಬ್ಬರ ಋಣ ಉಳಿಸಿಕೊಳ್ಳಬಾರದು

ಸಮಯ ಬಂದಾಗ ಎಲ್ಲರೂ ಹೀಯಾಳಿಸುವವರೆ.

 

ಕೆಟ್ಟ ಸಮಯ ಬಂದಾಗ ನಮ್ಮ ಸ್ವಂತ ಜನರು ಕೂಡ ನಮ್ಮನ್ನು ಗುರುತಿಸುವುದನ್ನು ಮರೆಯುತ್ತಾರೆ., ನಮ್ ಸಮಯ ಕೆಟ್ಟದಾಗಿದೆ ಅಂತ ನಾವು ಕೆಟ್ಟರೆ ಆಗಬಾರದು ಅಲ್ವ,,, ಯಾಕಂದ್ರೆ ? ಒಳ್ಳೇದ್ ಮಾಡಿದ್ರೆ ಮಾತ್ರ ಒಳ್ಳೇದಾಗುತ್ತೆ ಕೆಟ್ಟದ್ ಮಾಡಿದ್ರೆ ಕೆಟ್ಟದ್ದೆ ಆಗುತ್ತೆ ತಲೆಲಿಟ್ಕೊಳ್ಳಿ ನಾವು ಒಳ್ಳೆಯದನ್ ಮಾತ್ರ ಮಾಡಬೇಕು. ಒಳ್ಳೆ ಸಮಯ ಬಂದೇ ಬರುತ್ತದೆ ಅಲ್ವಾ.

 

ಬರುತೇ ಸಮಯ

ಅಷ್ಟರಲ್ಲಿ ಜೀವನ ಆಯೋಮಯ

ಒಳ್ಳೆ ಸಮಯ ಬಂದಾಗ ಅದನ್ನು ಅನುಭವಿಸೋ ಮನವೇ ಇಲ್ಲದಾಗಿರುತ್ತೇ

 

ಜೊತೆಲ್ಲಿ ಇರ್ತೀನಿ ಅಂದವರೆ ಮೊದಲು ಬಿಟ್ಟು ಹೋಗುವರು..

ಯಾರೇ ಆಗಲಿ ಅವರ ಸಮಯ ಬಂದಾಗ ಬದಲಾಗುತ್ತಾರೆ.

ಈ ಕಾಲದಲ್ಲಿ ಯಾರು ನಮ್ಮ ನಂಬಿಕೆಗೆ ಯೋಗ್ಯರು ಎಂದು ತಿಳಿಯುವುದೆ ಕಷ್ಟ

 

ಸಮಯ ಬಂದಾಗ ಸ್ವಾರ್ಥದ ವಾಸನೆಯನ್ನು ತೋರಿಸುವ ಸಂಬಂಧಗಳನ್ನು ಎತ್ತಿಕೊಂಡು ಆಳವಾದ ಸಾಗರದಲ್ಲಿ ಎಸೆಯಿರಿ, ಇವುಗಳನ್ನು ನಿಭಾಯಿಸುವುದರಿಂದ ಯಾವುದೇ ಉಪಯೋಗವಿಲ್ಲ…

 

ವಾದ ಮಾಡುವ ಸಮಯ ಬಂದಾಗ ಮಾಡಲೇ ಬೇಕು, ಸುಮ್ಮನೆ ಮೌನವಾಗಿ ಉಳಿದರೆ ಕಳೆದುಕೊಳ್ಳೋದು ಮಾನ ಅಲ್ಲ, ಆತ್ಮ ಗೌರವವನ್ನ.

 

ತಮ್ಮ ಮಕ್ಕಳನ್ನು ಇತರರ ಮಕ್ಕಳೊಂದಿಗೆ ಹೊಲೀಸಬೇಡಿ,

ಸೂರ್ಯ ಚಂದ್ರರೂ ತಮ್ಮ ಸಮಯ ಬಂದಾಗ ಬೆಳಕನ್ನೇ ಚೆಲ್ಲುತ್ತಾರೆ…!

 

ಸಮಯ ಬಂದಾಗ ಮಾತಾಡು ಅಂತಾ…

ಹೇಳೋರ ತುಂಬಾ ಜನ ಇದಾರೆ

ಇದು ನಿನ್ನ ಸಮಯ ಅಂತಾ ಹೇಳೋಕೆ

ಯಾರು ಎಲ್ಲಾ ಜೊತೆಗೇ……….

 

Kannada Quotes About Time

ಸಮಯ ಎನ್ನುವುದು ಯಾವುದನ್ನೂ ವಾಸಿ ಮಾಡುವುದಿಲ್ಲ,

ಆದುದರಿಂದ ಸಮಯ ಬಂದಾಗ ಸರಿಯಾಗುತ್ತೆ ಎಂದು ಕಾಯುತ್ತಿರಬೇಡಿ,

ಬದಲಿಗೆ ನೋವು ಚಿಂತೆಗಳನ್ನು ಎದುರಿಸಿ, 

ಅದು ಯಾವ ರೀತಿ ಜೀವಿಸಬೇಕು ಎಂಬುದನ್ನು ಕಲಿಸುತ್ತದೆ…. 

 

ಕೇಳುವ ಸಮಯ ಬಂದಾಗ ಎಲ್ಲವನ್ನೂ ಕೇಳಿಸಿಕೊಳ್ಳಲೇಬೇಕಾಗುತ್ತದೆ..

ಅದು ಸತ್ಯವೋ ಸುಳ್ಳೋ, ಸರಿಯೋ ತಪ್ಪೋ, ಒಳಿತೋ ಕೆಡುಕೋ…!!

 

ಕರ್ಮದ ಹತ್ತಿರ

ಪುಸ್ತಕವೂ ಇಲ್ಲ

ಕಾಗದವೂ ಇಲ್ಲ

ಪೆನ್ನು ಸಹ ಇಲ್ಲ ಆದರೂ ಎಲ್ಲರ ಪಾಪ ಪುಣ್ಯದ ಲೆಕ್ಕಾಚಾರ ಚಾಚು ತಪ್ಪದೆ ಇರುತ್ತದೆ. 

ಸಮಯ ಬಂದಾಗ ಅದರ ಕೆಲಸ ಮುಗಿಸದೇ ಬಿಡುವುದೆ ಇಲ್ಲ.

 

ಸಂತಸದ ಕ್ಷಣಗಳು ಬಂದಾಗ ಆನಂದಿಸಿ.

ಸಮಸ್ಯೆಗಳು ಬಂದಾಗ ಸ್ವಲ್ಪ ತಾಳ್ಮೆ ವಹಿಸಿ.

ಸಮಯ ಯಾವಾಗಲೂ ಒಂದೇ ರೀತಿ ಇರದು.

ಜೀವನದಲ್ಲಿ ಹೊಸ ಬದಲಾವಣೆ ಬಂದಾಗ

ಸ್ವಲ್ಪ ತಾಳ್ಮೆ, ಮತ್ತು ಸ್ವಲ್ಪ ತಿಳುವಳಿಕೆಯಿಂದ ಮುನ್ನಡೆಯೋಣ.

 

ಯಾರು ನಿನ್ನವರು… ಯಾವುದು ನಿನ್ನದು …. ಎಂಬುದು ಅರ್ಥವಾಗುವುದು ಸಮಯ ಬಂದಾಗ  ಮಾತ್ರ.

 

ಮನುಷ್ಯ ಸಹಜ ಗುಣ, ಸಮಯ ಸಂದರ್ಭ ಬಂದಾಗ ತಮ್ಮಲ್ಲಿರುವ ವಿಶೇಷತೆಯನ್ನು ಪ್ರದರ್ಶನ ಮಾಡಲು ಬಯಸುತ್ತಾರೆ. ಕೆಲವರು ತಮ್ಮಲ್ಲಿರುವ ಹಣ, ಆಸ್ತಿ, ಅಂತಸ್ತು, ಸೌಂದರ್ಯ, ಜ್ಞಾನ ಹೀಗೆ. ಇನ್ನು ತಮ್ಮ ಅಹಂಕಾರ ಅಜ್ಞಾನ ಅಲ್ಪಜ್ಞಾನ ಅಲ್ಲದೇ ಇನ್ನೊಬ್ಬರ ಬಗೆಗಿನ ಇರ್ಷ್ಯೆ ಮತ್ಸರವನ್ನೂ ಪ್ರದರ್ಶಿಸದೆ ತಡೆಯಲಾರರು. ಕೆಲವೇ ಕೆಲ ಜನ ಮಾತ್ರ ಎಲೆಮರೆ ಕಾಯಿಯಂತೆ ಇದ್ದರೂ ಅವರ ವ್ಯಕ್ತಿತ್ವ ಸೂರ್ಯಪ್ರಕಾಶದಂತೆ ಸದಾ ಪ್ರಕಾಶಿಸುತಿರುತ್ತದೆ.

 

ನಮ್ಮ ಶಕ್ತಿ ಏನು ಅಂತ

ಸರಿಯಾದ ಜಾಗದಲ್ಲಿ,

ಸರಿಯಾದ ಸಮಯ ಬಂದಾಗ

ಪ್ರದರ್ಶಸಿಸ ಬೇಕು…..

 

ಅತೀ ಬುದ್ಧಿವಂತಿಕೆಯಿಂದ ಮೋಸ ಮಾಡಿದವರು ಸಮಯ ಬಂದಾಗ ಅತೀ ದಡ್ಡತನದಿಂದಲೇ ಮೋಸ ಹೋಗುತ್ತಾರೆ.

 

ಕೆಟ್ಟ ಸಮಯ ಬಂದಾಗ ಭಯಪಡಬೇಡ…

ಒಳ್ಳೆ ಸಮಯ ಬಂದಾಗ ದಾರಿ ತಪ್ಪಬೇಡ..  

 

ಸಮಯ ಬಂದಾಗ ಬೆಂಬಲ ಮತ್ತು ಪ್ರೀತಿಯನ್ನು ತೋರಿಸುವವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಿ, ತಮ್ಮ ಸ್ಥಾನಮಾನವನ್ನು ತೋರಿಸುವವರೊಂದಿಗೆ ಅಲ್ಲ….

 

ಯಾರೋ ಸಹಾಯ ಮಾಡುತ್ತಾರೆ ಎಂದು ಅವರನ್ನೇ ನಂಬಿ ಕಾಯುತ್ತಾ ಕುಳಿತುಕೊಳ್ಳಬಾರದು..

ಯಾರಿಂದ ಏನನ್ನು ಬಯಸಲೂಬಾರದು..

ನಾವು ನಂಬಿಕೆಯಿಡಬೇಕಾಗಿದ್ದು ಪರಮಾತ್ಮನಲ್ಲಿ 

ಯಾಕೆಂದರೆ ಸಮಯ ಬಂದಾಗ ಸಹಾಯವೂ ಕೂಡ ಎಲ್ಲರಿಂದ ಸಿಗುತ್ತದೆ

ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ..!!

 

ಮನುಷ್ಯನಾಗಲಿ., ಮನುಷ್ಯನ ಬದುಕಾಗಲಿ ಬದಲಾಗಬೇಕು ಅಂತ ಅಂದುಕೊಂಡ ತಕ್ಷಣ ಯಾವುದೂ ಬದಲಾಗೋದಿಲ್ಲ.

ಪ್ರತೀ ಬದಲಾವಣೆಗೆ ಅದರದ್ದೇ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಬದಲಾವಣೆಯ ಸಮಯ ಬಂದಾಗ ಸದ್ದಿಲ್ಲದೇ ತನ್ನಷ್ಟಕ್ಕೆ ಗೊತ್ತೇ ಆಗದಂತೆ ಎಲ್ಲವೂ ಬದಲಾಗುತ್ತದೆ…!!

 

ನಿನ್ನ  ತಪ್ಪಿಲ್ಲದೇ  ಇರುವಾಗ

ಅಪವಾದ  ಹೋರಿಸಿದರೂ ಸುಮ್ಮನಿದ್ದುಬಿಡು…

ಸಮಯ  ಬಂದಾಗ  ನಿನ್ನ ತಪ್ಪಿಲ್ಲವೆಂದು  ಅರಿವಾಗಿ

ಅಪವಾದ  ಹೋರಿಸಿದವರೇ ಪಶ್ಚತ್ತಾಪ  ಪಡುವರು

ನಿನ್ನ  ಮುಂದೆ  ಬರಲು  ನಾಚುವರು.

ಅದೇ  ನಿನ್ನ  ಒಳ್ಳೆಯತನದ  ಗೆಲುವು..

 

ಒಬ್ಬ ಮನುಷ್ಯನ ಬದುಕಲ್ಲಿ

ಒಳ್ಳೆಯ ಸಮಯ ಅಂತ ಒಂದು

ಬಂದಾಗ ಅವನ ಗೆಲುವನ್ನು

ತಡೆಯಲು ಯಾರಿಂದಲೂ ಸಾಧ್ಯವಿಲ್ಲ,

ಆತನ ಏಳಿಗೆಯನ್ನು  ಸಹಿಸದೆ, ಅದನ್ನು ಕೆಡಿಸಲು ಮಾಡುವ

ಯಾರ ಯಾವ ತಂತ್ರ, ಕುತಂತ್ರಗಳು ಕೆಲಸ ಮಾಡೋದಿಲ್ಲ..!!

 

ಸಮಯ ಬಂದಾಗ ಪ್ರತಿಯೊಂದೂ

ನಮ್ಮನ್ನು ಹುಡುಕಿಕೊಂಡು ಬರುತ್ತದೆ..!

ಲೆಕ್ಕಾಚಾರವಿದೆ ಎಲ್ಲದಕ್ಕೂ..

ಋಣವಿದೆ ಅನುಭವಿಸುವ

ನೋವು ನಲಿವು ಪ್ರತಿಯೊಂದಕ್ಕೂ

ತಿನ್ನುವ ಅನ್ನ, ಆಡುವ ಮಾತು,

ಯೋಚಿಸುವ ವಿಚಾರ, ವ್ಯಕ್ತಿತ್ವ, ಗುಣಾವಗುಣಗಳೆಲ್ಲದಕ್ಕೂ

ಒಂದು ಹಿನ್ನೆಲೆಯಿದೆ..

ಯಾವುದನ್ನೂ ಬಯಸಿ ಸಿಗದಾಗ

ಮರುಗದೆ.. ದೊರೆತಿದ್ದು

ಕಳೆದುಕೊಂಡಾಗ ಕೊರಗದೆ..

ಸಿದ್ಧವಾಗಿರಬೇಕು ಎದುರಿಸಲು

ಬದುಕು ಬಂದಹಾಗೆ ಬದುಕಿದರೆ

ಬದುಕು ಬಂಗಾರವಾಗದೆ..??!

 

ಜಗತ್ತಿನಲ್ಲಿ ಯಾರನ್ನೂ ಕೂಡ ಕೇವಲವಾಗಿ ಕಾಣಬೇಡಿ, 

ಸಮಯ ಬಂದಾಗ ಎಲ್ಲವೂ ಅನಿವಾರ್ಯವಾಗುತ್ತೆ. 

ಉಸಿರಿರುವಾಗ ಹೊಡೆದು ಓಡಿಸಿದ ಕಾಗೆಯನ್ನ ಕೂಡ, ಉಸಿರು ನಿಂತ ಮೇಲೆ ಕಾಯಬೇಕಾಗುತ್ತೆ.

 

ಸಮಯ ಬಂದಾಗ ಆ ದೀಪ ನಿಮಗೆ ಬೆಳಕಾಗಿ ಪ್ರಜ್ವಲಿಸುತ್ತದೆ ಸಮಯ ಕೆಟ್ಟಾಗ ಮಾತ್ರ ಅದೆ ದೀಪ ಬೆಂಕಿಯಾಗಿ ಎಲ್ಲವನ್ನು ಸುಡುತ್ತದೆ  ಆದರೆ ಅದನ್ನ ಸಮಯ ಸಂಧರ್ಭಕ್ಕೆ ತಕ್ಕಂತೆ ಉಪಯೋಗಿಸಬೇಕು ಅಷ್ಟೇ.

 

Relationship Time Quotes in Kannada

 

ಅತಿಯಾಗಿ ಪ್ರೀತಿಸಿದವರು ಅವರ ಸಮಯ ಬಂದಾಗ ಹೇಳದೇ ಕೇಳದೇ ಹೊರಟು ಬಿಡುತ್ತಾರೆ..

ಹಾಗೇ ನಮ್ಮನ್ನು ಪ್ರೀತಿಸಿದವರನ್ನ ನಾವೂ ಬಿಟ್ಟು ಹೊರಟು ಬಿಡುತ್ತೇವೆ…..

ವಿಧಿ ನಿಯಮ…. ಬದಲಾಯಿಸುವ ತಾಕತ್ತು ಯಾರಿಗಿದೆ ಹೇಳಿ?

ಆದರೆ ಬಂದು ಹೋಗುವ ಮಧ್ಯದಲ್ಲಿ ಒಂದು ಅಮೂಲ್ಯವಾದ ಅವಕಾಶವಿದೆ, 

 

ಬದುಕನ್ನು ಪ್ರೀತಿಸುವುದು. ವಿಶ್ವಾಸವನ್ನ ಗಳಿಸುವುದು, ನಂಬಿಕೆಯನ್ನು ಪಡೆಯುವುದು…

ಅತ್ಯಮೂಲ್ಯವಾಗಿ ಬದುಕಿ..

 

ಈ ದೇಹ, ಈ ಮುಖ, ಈ ಸೌಂದರ್ಯ, ಎಲ್ಲವೂ ನಾವು ಸಾಲದಲ್ಲಿ ಪಡೆದಿದ್ದೇವೆ. ಸಮಯ ಬಂದಾಗ ಇವುಗಳ ಮಾಲಿಕನಿಗೆ ನಾವು ಎಲ್ಲವನ್ನು ಹಿಂತುರುಗಿಸಬೇಕು.

 

ನಾವು ಯಾವ ದೀಪವು ಆರಬಾರದು ಎಂದು ನಮ್ಮ ಕೈಗಳನ್ನು ಅಡ್ಡ ಇಟ್ಟು ರಕ್ಷಣೆ ಮಾಡುತ್ತೇವೋ, ನಿಜಕ್ಕೂ ಅದೇ ದೀಪ ನಮ್ಮ ಕೈಗಳನ್ನು ಸುಡುತ್ತದೆ. ಕೆಲವು ಜನರು ಕೂಡ ಅದೇ ತರಹ ನಾವು ಅವರ ಮೇಲೆ ಎಷ್ಟು ಪ್ರೀತಿ ತೋರಿಸಿದರೂ ಸಮಯ ಬಂದಾಗ ಅವರು ತಮ್ಮ ಬುದ್ಧಿ ತೋರಿಸುತ್ತಾರೆ.

 

ಈಗಿನ ಕಾಲದಲ್ಲಿ ಯಾರಿಗೂ ಅಯ್ಯೋ ಪಾಪ ಅಂತ ಸಹಾಯ ಮಾಡಬಾರದು ಯಾಕೆಂದ್ರೆ ಸಮಯ ಬಂದಾಗ ಮಾಡಿದ ಉಪಕಾರವನ್ನು ಮರೆತು ನಮ್ಮನ್ನು ಅಪರಾಧಿಯಂತೆ ದೂರುವ ಜನರಿರುವರು..

 

ನಿಮ್ಮನ್ನು ತಿರಸ್ಕಾರ ಮಾಡಿ ದೂರ ಆಗೋರು ಆಗಲಿ ಬಿಡಿ, ಸಮಯ ಬಂದಾಗ ನಿಮ್ಮ ಬೆಲೆ ತಿಳಿಯುತ್ತೆ ಅವಾಗ ನೀವು ಅವರಿಗಿಂತ ಎಲ್ಲ ರೀತಿಯಲ್ಲೂ ಎತ್ತರದಲ್ಲಿ ಇರ್ತೀರ…

 

ಸತ್ಯವೆಂಬುದು ಕೆಂಡವಿದ್ದಂತೆ

ಸದ್ಯಕ್ಕೆ ಬೂದಿ ಮುಚ್ಚಿಕೊಂಡಿರಬಹುದು,

ಆದರೆ ಅದು ಶಾಶ್ವತ ಮತ್ತು ಸಮಯ ಬಂದಾಗ ಅದರ ಕಾವು ತಟ್ಟೋದು ನಿಶ್ಚಿತ

 

ಸಮಯ ಬಂದಾಗ ಸಿಗಬೇಕಾದ್ದೆಲ್ಲ ಸಿಕ್ಕೆ ಸಿಗುತ್ತೆ ಪ್ರಯತ್ನ ನಿರಂತರವಾಗಿರಲಿ…

 

ಆರಿ ಹೋಗುವ ದೀಪಕ್ಕೆ ಎಷ್ಟು ಎಣ್ಣೆ ಹಾಕಿದರೇನು ಫಲ

ಬತ್ತಿಯೇ ಬೂದಿಯಾಗುವ ಸಮಯ ಬಂದಾಗ

ನಮ್ಮವರಿಗೆನಾವು ಎಷ್ಟು ನಿಯತ್ತಾಗಿದ್ದರೇನು ಫಲ

ಸಂಬಂಧವೆ ಮುರಿದು ಹೋಗುವ ಸಮಯ ಬಂದಾಗ

ಹುಡುಕಿಕೊಂಡು ಬಂದವರಿಗೆ ಹೃದಯದಿಂದ ಪ್ರೀತಿ ಕೊಟ್ಟರೇನು ಫಲ

ಮನಸುಗಳೇ ಅಗಲಿ ಹೋಗುವ ಸಮಯ ಬಂದಾಗ

ಅರೆತು ಮರೆತು ಬಂದವರ ಜೊತೆ ಬೆರೆತು ಸ್ವಾಭಿಮಾನಿಯಾಗಿ 

ಸಾಗಲಿ ನಿನ್ನ ಬದುಕು ಜಟಕಾ ಬಂಡಿ

ಯಾವಾಗ ಕಳಚುತ್ತೋ ಗೊತ್ತಿಲ್ಲ ಅದರ ಕೊಂಡಿ

ತೆರದಿಡು ನಿನ್ನ ಖುಷಿಯೆಂಬ ಬೆಳಕಿನ ಕಿಂಡಿ ಬಂದೆ ಬರುತ್ತೆ ನಿನಗೂ ಒಂದು ಒಳ್ಳೆ ದಂಡಿ.

 

ಬಹಳ ಯೋಚನೆ ಬೇಡ ಯಾವಾಗ ನಮಗೆ ಏನು ಸಿಗಬೇಕೋ ಅದು ಸಮಯ ಬಂದಾಗ ಸಿಕ್ಕೆ ಸಿಗುತ್ತೆ

 

 

 

|| ಶ್ರೀ ಕೃಷ್ಣ||

ಜೀವನದಲ್ಲಿ ನಮಗೆ ಯಾರೇ ಎಷ್ಟೇ ಪ್ರಿಯರಾಗಿದ್ದರು, ಸಮಯ ಬಂದಾಗ ಅವರನ್ನು ಒಂದೇ ಕ್ಷಣದಲ್ಲಿ ತ್ಯಾಗ ಮಾಡುವ ಸಾಮರ್ಥ್ಯ ನಮ್ಮಲ್ಲಿರಬೇಕು.

 

ಈ ಧರಣಿ ಮಂಡಲದಲ್ಲಿ ಯಾರು ಒಳ್ಳೆವರಲ್ಲ, ಯಾರು ಕೆಟ್ಟವರಲ್ಲ…!!!

ಸಮಯ ಬಂದಾಗ ನಿಜವಾದ ಮುಖಾನ ತೋರ್ಸ್ತಾರೆ..!!!

 

ಇಲ್ಲಿ ಅತಿಯಾಗಿ ನಂಬಿದರೆ ನಾವೇ ಮೂರ್ಖರು ಅಷ್ಟೇ..

ಸಮಯ ಕಲಿಸುವ ಪಾಠವನ್ನು ಎಂದಿಗೂ ಮರೆಯಬಾರದು…

 

ನಾವು ಪ್ರೀತಿ ಮಾಡುವ ವ್ಯಕ್ತಿಗೆ ನಮಗೋಸ್ಕರ ಸಮಯ ನೀಡಲು ಒತ್ತಾಯ ಮಾಡಬಾರದು.

ಯಾಕಂದ್ರೆ, ನಿಜವಾಗಿಯೂ ಪ್ರೀತಿ ಮಾಡುವವರು ಹೇಗಾದರೂ ಸಮಯ ಮಾಡಿಕೊಂಡು ಮಾತನಾಡುತ್ತಾರೆ. ಅದೇ ನಿಜವಾದ ಪ್ರೀತಿ ..

 

ನಾವು ಮೋಸ ಹೋದಾಗ ಮತೊಬ್ಬರನ್ನು ದೂರುವ ಅವಶ್ಯಕತೆ ಇಲ್ಲ ಯಾಕೆ ಅಂದರೆ ನಾವೇ ಅವರಿಗೆ ಕೊಟ್ಟ ಸಮಯ ನಂಬಿಕೆ ನಮ್ಮದೇ ತಪ್ಪು. 

 

ಇದನ್ನೂ ಓದಿ: 

Time Quotes in Kannada Images

ನಮ್ಮ 150+ ಕನ್ನಡ ಸಮಯದ ಕುರಿತ ಉಲ್ಲೇಖಗಳ ಸಂಗ್ರಹವನ್ನು (time quotes in kannada collection) ಓದಿ, ನೀವು ಪ್ರೇರಣೆಯನ್ನು ಪಡೆದು, ನಿಮ್ಮ ಜೀವನದಲ್ಲಿ ಕಾಲದ ಮಹತ್ವವನ್ನು ಅರಿತುಕೊಂಡಿದ್ದೀರಿ ಎಂದು ನಾವು ಆಶಿಸುತ್ತೇವೆ. ಪ್ರೀತಿಯ ಸಂಬಂಧಗಳನ್ನು ಬಲಪಡಿಸಲು, ಕಷ್ಟದ ಸಮಯದಲ್ಲಿ ಧೈರ್ಯ ಪಡೆಯಲು, ಮತ್ತು ಜೀವನದ ಪ್ರತಿಯೊಂದು ಕ್ಷಣವನ್ನು ಸಾರ್ಥಕವಾಗಿ ಬಳಸಲು ಈ ಉಲ್ಲೇಖಗಳು ನಿಮಗೆ ಸಹಾಯವಾಗುತ್ತವೆ ಎಂಬ ವಿಶ್ವಾಸವಿದೆ.

ನಿಮಗೆ ಈ ಸಂಗ್ರಹ ಇಷ್ಟವಾಯಿತೆಂದು ಭಾವಿಸುತ್ತೇವೆ. ದಯವಿಟ್ಟು ಈ ಸಂದೇಶಗಳನ್ನು ನಿಮ್ಮ ಸ್ನೇಹಿತರ ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ. ಇನ್ನಷ್ಟು ಕನ್ನಡ ಉಲ್ಲೇಖಗಳು ಮತ್ತು ಮಾಹಿತಿಗಳಿಗಾಗಿ ನಮ್ಮ ಬ್ಲಾಗ್‌ಗೆ ನಿರಂತರವಾಗಿ ಭೇಟಿ ನೀಡುತ್ತಿರಿ.


ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.