ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ವಿಸ್ತರಣೆ | Oggattinalli Balavide

“ಒಗ್ಗಟ್ಟಿನಲ್ಲಿ ಬಲವಿದೆ” (oggattinalli balavide) ಎಂಬ ಗಾದೆ ಮಾತು ನಮ್ಮ ಜೀವನದ ಅತ್ಯಂತ ಮುಖ್ಯ ಸಂದೇಶಗಳನ್ನು ಒತ್ತಿಹೇಳುತ್ತದೆ. ಇದು ಒಗ್ಗಟ್ಟಿನ ಶಕ್ತಿ ಮತ್ತು ಸಹಕಾರದ ಮಹತ್ವವನ್ನು ವಿವರಿಸುವ ನುಡಿಮುತ್ತಾಗಿದೆ. ಮನುಷ್ಯನಿಗೆ ಒಬ್ಬರೇ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ; ಆದರೆ ಒಟ್ಟಾಗಿ ಕೆಲಸ ಮಾಡಿದರೆ ದೊಡ್ಡ ಗುರಿಗಳನ್ನು ಸಾಧಿಸಬಹುದು.

ಈ ಗಾದೆ ಮಾತಿನ ಪ್ರಸ್ತುತತೆ ನಮ್ಮ ದಿನನಿತ್ಯದ ಬದುಕಿನಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರು ಒಂದಾಗಿ ಹೋರಾಡಿದ ಪರಿಣಾಮವೇ ಸ್ವಾತಂತ್ರ್ಯ ದೊರಕಿತು. ಹಾಗೆಯೇ, ಬಡತನ, ಹಸಿವು ಮತ್ತು ಅನಕ್ಷರತೆ ಮುಂತಾದ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಮಾನವೀಯ ಒಗ್ಗಟ್ಟು ಅಗತ್ಯವಾಗಿದೆ. ಈ ಗಾದೆಯು ನಮ್ಮನ್ನು ಸಹಕಾರದಿಂದ ಬಾಳಲು ಪ್ರೇರೇಪಿಸುತ್ತದೆ.

ಈ ಲೇಖನದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ವಿಸ್ತರಣೆಯನ್ನು ವಿವರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಪರೀಕ್ಷೆಗಳಲ್ಲಿ ಅಥವಾ ಭಾಷಣಗಳಲ್ಲಿ ಉಪಯೋಗಿಸಬಹುದಾದ ಮಾಹಿತಿಯನ್ನು ನೀಡಲಾಗಿದೆ. ಇದು ನಮ್ಮ ಜೀವನವನ್ನು ಉತ್ತಮಗೊಳಿಸುವ ದಾರಿ ತೋರಿಸುವ ಅಮೂಲ್ಯ ನುಡಿಮುತ್ತಾಗಿದೆ.Oggattinalli Balavide in Kannada

ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ವಿಸ್ತರಣೆ | Oggattinalli Balavide in Kannada

ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ಮಾತಿನ ವಿವರಣೆ | Oggattinalli Balavide Gade Matina Vivarane

“ಗಾದೆಗಳು ವೇದಗಳ ಹಾಗೇ ಸಮಾನವಾಗಿವೆ, ವೇದಗಳು ಸುಳ್ಳಾಗಿದೆಯಾದರೂ ಗಾದೆ ಸುಳ್ಳಾಗದು” ಎಂಬ ಮಾತು ಇದೆ. ಗಾದೆಗಳು ನಮ್ಮ ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಅವು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ನಮ್ಮ ಜೀವನವನ್ನು ಹಸನಾಗಿಸುವಂತಿವೆ. ಅಂತಹ ಅಮೂಲ್ಯವಾದ ಗಾದೆಗಳಲ್ಲಿ ಮೇಲಿನ ಗಾದೆ ಕೂಡ ಒಂದಾಗಿದೆ.

ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಯಾವುದೇ ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಒಗ್ಗಟ್ಟಿನಿಂದ ಮಾತ್ರ ಬಲಶಾಲಿಯಾದ ಸಮುದಾಯವನ್ನು ನಿರ್ಮಿಸಬಹುದು. ಉದಾಹರಣೆಗೆ, ಹಕ್ಕಿಗಳ ಗುಂಪು ಶತ್ರುವಿನಿಂದ ರಕ್ಷಿಸಿಕೊಳ್ಳಲು ಒಟ್ಟಾಗಿ ಹಾರುವುದು ಅಥವಾ ಮನುಷ್ಯರು ಸಹಕಾರದಿಂದ ದೊಡ್ಡ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಈ ಗಾದೆಯ ನಿಜವಾದ ಅರ್ಥವನ್ನು ತೋರಿಸುತ್ತದೆ.

ಈ ಗಾದೆಯು ಆರ್ಥಿಕ ಮತ್ತು ಸಾಮಾಜಿಕ ಪ್ರಭಾವವನ್ನೂ ಹೊಂದಿದೆ. ಇದು ನಮ್ಮನ್ನು ಸಮಾಜಮುಖಿಯಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಏಕೆಂದರೆ ಒಗ್ಗಟ್ಟಿನಿಂದ ಮಾತ್ರ ನಾವೆಲ್ಲರೂ ಅಭಿವೃದ್ಧಿ ಹೊಂದಬಹುದು. ಈ ಗಾದೆಯ ಆಶಯವೆಂದರೆ, ಒಗ್ಗಟ್ಟಿನಿಂದ ಯಾವುದೇ ದೊಡ್ಡ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಯಶಸ್ಸನ್ನು ಸಾಧಿಸಬಹುದು.

ಗಾದೆ ಮಾತಿನ ವಿಸ್ತರಣೆ : ಒಗ್ಗಟ್ಟಿನಲ್ಲಿ ಬಲವಿದೆ | Gade Vistarane Oggattinalli Balavide

ಗಾದೆಗಳು ನಮ್ಮ ಹಿರಿಯರ ಅನುಭವದ ಅಮೂಲ್ಯ ನುಡಿಮುತ್ತುಗಳು. “ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ಗಾದೆ ಮಾತು ಸಹಜವಾಗಿ ನಮ್ಮ ಜೀವನದ ಮಾರ್ಗದರ್ಶನ ನೀಡುವಂತಹದು. ಈ ಗಾದೆಯು ಸಾಮೂಹಿಕತೆಯ ಶಕ್ತಿಯನ್ನು ಸಾರುತ್ತದೆ ಮತ್ತು ಎಲ್ಲರ ಸಹಕಾರದಿಂದ ಮಾತ್ರ ದೊಡ್ಡ ಸಾಧನೆಗಳನ್ನು ಸಾಧ್ಯವಾಗುತ್ತವೆ ಎಂಬುದನ್ನು ನೆನಪಿಸುತ್ತದೆ.

ಎಲ್ಲಾ ಕೆಲಸಗಳನ್ನು ಒಬ್ಬ ವ್ಯಕ್ತಿಯೇ ಮಾಡುವುದು ಅಸಾಧ್ಯ. ದೊಡ್ಡ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಹಲವಾರು ಜನರ ಸಹಕಾರ ಅಗತ್ಯ. 

ಭಾರತವು ಸ್ವಾತಂತ್ರ್ಯವನ್ನು ಗಳಿಸಿದ ಉದಾಹರಣೆ ಕೂಡ ಈ ಗಾದೆಯ ಮಹತ್ವವನ್ನು ತೋರಿಸುತ್ತದೆ. ಭಾರತೀಯರು ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಿದ ಫಲವಾಗಿ ಸ್ವಾತಂತ್ರ್ಯ ದೊರೆತಿತು. ಆದರೆ ನಾವೇ ನಮ್ಮಲ್ಲಿ ಕಚ್ಚಾಡಿದರೆ, ನಮ್ಮ ಒಡಕವನ್ನು ಗಮನಿಸುವ ಇತರರು ಅದರಿಂದ ಲಾಭ ಪಡೆಯಬಹುದು. ಹೀಗಾಗಿ, ಈ ಗಾದೆ ನಮಗೆ ಒಗ್ಗಟ್ಟಿನ ಮಹತ್ವವನ್ನು ಬೋಧಿಸುತ್ತದೆ ಮತ್ತು ಯಾವ ಸಂದರ್ಭದಲ್ಲೂ ಒಗ್ಗಟ್ಟನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಸುತ್ತದೆ.

ಒಗ್ಗಟ್ಟಿನಿಂದ ನಾವು ಬಲಶಾಲಿಯಾಗುತ್ತೇವೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಮತ್ತು ನಮ್ಮ ಜೀವನವನ್ನು ಸಂತೋಷದಿಂದ ಸಾಗಿಸಬಹುದು. ಈ ಗಾದೆಯ ಆಶಯವೆಂದರೆ, ಒಗ್ಗಟ್ಟಿನಿಂದ ಮಾತ್ರ ನಾವೆಲ್ಲರೂ ಯಶಸ್ಸಿನ ದಾರಿ ಹಿಡಿಯಬಹುದು ಮತ್ತು ನಮ್ಮ ಬಾಳನ್ನು ಹಸನಾಗಿಸಬಹುದು.

ಗಾದೆ ವಿಸ್ತರಣೆ : ಒಗ್ಗಟ್ಟಿನಲ್ಲಿ ಬಲವಿದೆ | Oggattinalli Balavide Gaadhe Vistharane

ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಈ ಗಾದೆಯ ಮಹತ್ವವನ್ನು ಹೇಳುತ್ತದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳಿಲ್ಲದ ದೇಶವಿಲ್ಲ; ಭಾಷೆಯಿಲ್ಲ. ಈ ಗಾದೆಯೂ ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ. 

ನಾವು ಒಟ್ಟಾಗಿ ಯಾವುದೇ ಕೆಲಸ ಮಾಡಿದರೂ ಅದು ಯಶಸ್ವಿಯಾಗುತ್ತದೆ. ಎಷ್ಟೋ ಕೆಲಸಗಳನ್ನು ಒಬ್ಬರಿಂದ ಮಾಡಲು ಸಾಧ್ಯವಿಲ್ಲದಿದ್ದಾಗ ಹಲವಾರು ಜನ ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಯಶ್ವಸ್ವಿಯಾಗುತ್ತದೆ. ಆದ್ದರಿಂದ ನಾವು ಯಾವಾಗಲೂ ಒಗ್ಗಟ್ಟಿನಿಂದ ಇರಬೇಕು.

ಕುಟುಂಬದಲ್ಲೂ ಒಗ್ಗಟ್ಟಿರಬೇಕು. ಮನೆಯಲ್ಲಿ ಇರುವ ಯಾರೊಬ್ಬರಿಗೂ ತೊಂದರೆಯಾದರೆ ಎಲ್ಲರೂ ಸೇರಿ ಸಮಸ್ಯೆಯನ್ನು ಬಗೆಹರಿಸಬಹುದು. ಒಗ್ಗಟ್ಟಿನಿಂದ ಯಾವುದೇ ಕಾರ್ಯವನ್ನು ಸುಲಭವಾಗಿ ಮಾಡಬಹುದು. ಒಗ್ಗಟ್ಟಿನ ಹೋರಾಟ ಯಾವಾಗಲೂ ಯಶಸ್ವಿಯಾಗುತ್ತದೆ. ಇದೆ ಈ ಗಾದೆಯ ಅರ್ಥ.

ಇದನ್ನೂ ಓದಿ:

ಗಾದೆ ಮಾತಿನ ವಿಸ್ತರಣೆ : ಒಗ್ಗಟ್ಟಿನಲ್ಲಿ ಬಲವಿದೆ | Oggattinalli Balavide | Gade Vistarane in Kannada

ಗಾದೆಗಳು ವೇದಗಳಿಗೆ ಸಮನಾಗಿವೆ. ಇವು ಹಿರಿಯರ ಅನುಭವದ ಸಾರವಾಗಿದ್ದು, ಈ ಮೇಲಿನ ಗಾದೆಯು ಕನ್ನಡದ ಒಂದು ಜನಪ್ರಿಯ ಮಾತಾಗಿದೆ.

ಸಹಬಾಳ್ವೆ ಅಥವಾ ಒಗ್ಗಟ್ಟಿನಲ್ಲಿರುವ ಶಕ್ತಿ ಅಪಾರವಾದದ್ದು. ಜನರು ಒಗ್ಗಟ್ಟಾಗಿ ದುಡಿದರೆ ಉತ್ತಮ ಫಲವನ್ನು ಪಡೆಯಬಹುದು ಎಂಬುದು ಈ ಗಾದೆಯ ಸಾರ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಗಾದೆಯು ಇದೆ ಅರ್ಥವನ್ನು ನೀಡುತ್ತದೆ. 

ಕುಂತಿಯು ಪಾಂಡವರಿಗೆ ಒಗ್ಗಟ್ಟಿನ ಮಹತ್ವವನ್ನು ತಿಳಿಸಿ ಹೇಳುತ್ತಾಳೆ. ಅದರಂತೆ ನಡೆದ ಪಾಂಡವರು ವಿಜಯಿಗಳಾಗುತ್ತಾರೆ. ಜಾನಪದ ಕಥೆಯೊಂದರಲ್ಲಿ ಮುದುಕನು ಸದಾ ಜಗಳವಾಡುತ್ತಿದ್ಧ ತನ್ನ ನಾಲ್ವರು ಮಕ್ಕಳನ್ನು ಕರೆದು ಒಂದೊಂದು ಕೋಲನ್ನು ಅವರ ಕೈಯಲ್ಲಿ ಕೊಟ್ಟು ಮುರಿಯಲು ಹೇಳುತ್ತಾನೆ. ಆಗ ಎಲ್ಲಾ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಸುಲಭವಾಗಿ ಆ ಕೋಲನ್ನು ಮುರಿಯುತ್ತಾರೆ. ನಂತರ ನಾಲ್ಕು ಕೋಲುಗಳ ಕಟ್ಟೊಂದನ್ನು ಕೊಟ್ಟು ಮುರಿಯಲು ಹೇಳುತ್ತಾನೆ. ನಾಲ್ವರು ಮಕ್ಕಳು ಸಹ ಎಷ್ಟೇ ಪ್ರಯತ್ನಿಸಿದರು ಆ ಕಟ್ಟನ್ನು ಮುರಿಯಲು ಸಾಧ್ಯವಾಗುವುದಿಲ್ಲ. ಆಗ ಆ ಮಕ್ಕಳಿಗೆ ಒಗ್ಗಟ್ಟಿನ ಮಹತ್ವದ ಅರಿವಾಗುತ್ತದೆ.

ಪಶು-ಪಕ್ಷಿಗಳಲ್ಲೂ ಸಹ ಒಗ್ಗಟ್ಟನ್ನು ನಾವು ದಿನ ನಿತ್ಯ ನೋಡುತ್ತೇವೆ. ಕಾಗೆಯು ಆಹಾರವನ್ನು ಕಂಡ ಕೂಡಲೇ ತನ್ನೆಲ್ಲಾ ಬಳಗವನ್ನು ಕೂಗಿ ಕರೆದು ಒಟ್ಟಾಗಿ ಸೇರಿ ತಿನ್ನುತ್ತದೆ. ಇರುವೆಗಳು ಸಹ ಇದೆ ರೀತಿ ಜೀವಿಸುತ್ತದೆ. ಏನೇ ಆದರೂ ನಾವೆಲ್ಲರೂ ಪರಸ್ಪರ ಒಗ್ಗಟ್ಟಿನಿಂದ ಇರಬೇಕು. ಅನಗತ್ಯ ಜಗಳವಾಡುವುದರಿಂದ ಏನನ್ನು ಸಾಧಿಸಲು ಆಗುವುದಿಲ್ಲ. ಅದರಿಂದ ಕೇವಲ ದ್ವೇಷ ಹುಟ್ಟುತ್ತದೆಯೇ ಹೊರತು ಇನ್ನೇನು ಸಾಧ್ಯವಿಲ್ಲ. ಆದರೆ ಒಗ್ಗಟ್ಟಿನಿಂದ ಇದ್ದರೆ ಪರಸ್ಪರ ಸ್ನೇಹ, ವಿಶ್ವಾಸದಿಂದ ಇದ್ದರೆ ಯಾವ ಕೆಲಸವನ್ನಾದರೂ ಸುಲಭವಾಗಿ ಸಾಧಿಸಬಹುದು. ಒಗ್ಗಟ್ಟಿನಲ್ಲಿ ಯಾವ ಎದುರಾಳಿಯನ್ನಾದರೂ ಸಹ ದೈರ್ಯದಿಂದ ಎದುರಿಸಬಹುದು ಹಾಗೂ ಸೋಲಿಸಬಹುದು.

ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ಮಾತಿನ ವಿವರಣೆ | Oggattinalli Balavide Gaade Maathina Vivarane

ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ.

ನಾವು ಒಟ್ಟಾಗಿ ಯಾವುದೇ ಕೆಲಸವನ್ನು ಮಾಡಿದರೂ ಅದು ಯಶಸ್ವಿಯಾಗುತ್ತದೆ. ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ಸಹಪಾಟಿಗಳ ಸಹಾಯ ಬೇಕು. ಎಲ್ಲರೂ ಒಂದಾಗಿ ಕೆಲಸ ಕಾರ್ಯಕ್ರಮಗಳನ್ನು ಹಂಚಿಕೊಂಡು ಮಾಡಿದಾಗ ಆ ಕೆಲಸವನ್ನು ಯಶಸ್ವಿಯಾಗುತ್ತದೆ. ಅನಗತ್ಯವಾಗಿ ದ್ವೇಷ, ಅಸೂಯೆ, ಮೇಲೂ-ಕೀಳು ಎಂಬ ಭಾವನೆ ತೋರದೆ ಪರಸ್ಪರರು ಪ್ರೀತಿ ಮತ್ತು ಸ್ನೇಹದಿಂದ ಕೆಲಸಗಳನ್ನು ಮಾಡಿದರೆ ಸದಾ ಯಶಸ್ಸನ್ನು ಹೊಂದಿ ಸಂತೋಷದಿಂದ ಇರಬಹುದು.  

ಉದಾಹರಣೆಗೆ, ಒಬ್ಬ ವ್ಯಕ್ತಿ ಒಂದು ಕೋಲನ್ನು ಸುಲಭವಾಗಿ ಮುರಿಯಬಹುದು. ಆದರೆ ಹತ್ತಾರು ಕೋಲುಗಳ ಕಟ್ಟನ್ನು ಕೊಟ್ಟರೆ ಒಬ್ಬ ವ್ಯಕ್ತಿ ಮುರಿಯಲು ಸಾಧ್ಯವಿಲ್ಲ. ಅದೇ ಒಗ್ಗಟ್ಟಿನಿಂದ ಪರಸ್ಪರರೆಲ್ಲರೂ ಸಹಾಯ ಮಾಡಿದರೆ ಹತ್ತಾರು ಕೋಲುಗಳ ಕಟ್ಟನ್ನು ಸಹ ಸುಲಭವಾಗಿ ಮುರಿಯಬಹುದು. ಇವೆಲ್ಲವುಗಳಿಂದ ತಿಳಿಯುವುದೇನೆಂದರೆ ಪರಸ್ಪರರು ಪ್ರೀತಿ, ವಿಶ್ವಾಸದಿಂದ ಒಗ್ಗಟ್ಟಾಗಿ ಕೆಲಸ ಮಾಡಿದರೆ ನಾವು ಏನನ್ನಾದರೂ ಸಾಧಿಸಬಹುದು.

ಇದನ್ನೂ ಓದಿ:

ಒಗ್ಗಟ್ಟಿನಲ್ಲಿ ಬಲವಿದೆ Gaade Maatu Explained

ಒಳ್ಳೆಯ ಕೆಲಸಗಳನ್ನು ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಎರಡೂ ಕೈಗಳು ಸೇರಿದಾಗ ಮಾತ್ರ ಚಪ್ಪಾಳೆಯಾಗುತ್ತದೆ. ಎಷ್ಟೋ ಕೆಲಸ-ಕಾರ್ಯಗಳನ್ನು ಒಬ್ಬರಿಂದ ಮಾಡಲು ಸಾಧ್ಯವಾಗದಾಗ ಹಲವಾರು ಜನ ಒಟ್ಟಾಗಿ ಸೇರಿ ಮಾಡಿದಾಗ ಅದು ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ ನಾವು ಯಾವಾಗಲೂ ಒಗ್ಗಟ್ಟಿನಿಂದ ಇರಬೇಕು. ಕುಟುಂಬದಲ್ಲೂ ಒಗ್ಗಟ್ಟಿರಬೇಕು. ಮನೆಯ ಯಾರೊಬ್ಬರಿಗೂ ತೊಂದರೆಯಾದರೆ ಎಲ್ಲ ಸೇರಿ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. 

ಆದ್ದರಿಂದ ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಿಂದ ಯಾವುದೇ ಕಾರ್ಯವನ್ನು ಸುಲಭವಾಗ್ಗಿ ಮಾಡಬಹುದು. ಒಗ್ಗಟ್ಟಿನ ಹೋರಾಟ ಯಾವಾಗಲೂ ಯಶಸ್ಸನ್ನು ತರುತ್ತದೆ ಎಂಬುದೇ ಈ ಗಾದೆಯ ಅರ್ಥ.



ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.

All content on this blog is copyrighted and copying is not allowed without permission from the author.