“ಮನೆಗೆ ಮಾರಿ ಊರಿಗೆ ಉಪಕಾರಿ” (manege mari oorige upakari) ಇದು ವಿವೇಕ ಇಲ್ಲದವನ ಕುರಿತ ಗಾದೆಯಾಗಿದ್ದು, ಊರಿನವರಿಗೆಲ್ಲಾ ಸಹಾಯ ಮಾಡುತ್ತಾ, ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಇರುವ ಆದರೆ ತನ್ನ ಮನೆಯವರಿಗಾಗಿ ಏನೂ ದುಡಿಯದ ವ್ಯಕ್ತಿಯ ಗುಣಗಳ ಬಗ್ಗೆ ಒತ್ತಿ ಹೇಳುತ್ತದೆ. ಮೊದಲು ತನ್ನ ಮನೆಯ ಹಾಗೂ ಮನೆಯವರ ಯೋಗಕ್ಷೇಮ ನೋಡಿಕೊಂಡು, ನಂತರ ಊರಿನವರ ಯೋಗಕ್ಷೇಮ ನೋಡಿಕೊಳ್ಳಬೇಕು ಎಂಬುದು ಈ ಗಾದೆಯ ಆಶಯವಾಗಿದೆ.
ಇಂದಿನ ಈ ಲೇಖನವು ವಿವಿಧ “ಮನೆಗೆ ಮಾರಿ ಊರಿಗೆ ಉಪಕಾರಿ” ಗಾದೆ ವಿಸ್ತರಣೆಯನ್ನು (manege mari oorige upakari gade matina vivarane) ನಿಮಗೆ ನೀಡುತ್ತದೆ. ಇವು ನಿಮಗೆ ಪರೀಕ್ಷೆಯಲ್ಲಿ ಬರೆಯಲು, ಪ್ರಬಂಧ ಬರೆಯಲು ಅಥವಾ ಭಾಷಣ ನೀಡಲು ಸಹಾಯ ಮಾಡುತ್ತದೆ.
Table of Contents
ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ವಿಸ್ತರಣೆ | Manege Mari Oorige Upakari Gade Vistharane
ಪೀಠಿಕೆ: ಗಾದೆಗಳು ವೇದಗಳಿಗೆ ಸಮ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಗಾಡು ಎಂಬುದು ಗಾದೆಯ ಮಹತ್ವವನ್ನು ಬಹು ಸುಂದರವಾಗಿ ಅರ್ಥೈಸುತ್ತದೆ. ಪ್ರಸ್ತುತ ಗಾದೆ “ಮನೆಗೆ ಮಾರಿ ಊರಿಗೆ ಉಪಕಾರಿ” ಎಂಬುದು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ.
ಕೆಲವು ಜನರು ಮನೆಯಲ್ಲಿ ಮನೆಯವರಿಗೆ ಸಹಾಯ-ಸಹಕಾರ ನೀಡದೆ, ಮನೆಯ ಜನರಿಗೆ ಒಳಿತನ್ನು ಮಾಡದೆ, ಹೊರಗಿನ ಜನ ಮೆಚ್ಚುವಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಈ ಗಾದೆ ಮಾತನ್ನು ಹೇಳುತ್ತಾರೆ.
ಮನೆಯೂ ಸಹ ಸಮಾಜದ ಒಂದು ಚಿಕ್ಕ ಘಟಕ. ಈ ಘಟಕದಿಂದ ಸಮಾಜ ಆರಂಭವಾಗುತ್ತದೆ. ಇಲ್ಲಿಯೇ ನಮ್ಮ ನಾಡದೇ ಚೆನ್ನಾಗಿರದಿದ್ದರೆ ಮನೆ ಅಶಾಂತಿಯ ಆಗರವಾಗಿಬಿಡುತ್ತದೆ. ನಮ್ಮೆಲ್ಲ ನೋವು ನಲಿವುಗಳಿಗೆ ಸ್ಪಂದಿಸುವ ಮನೆಯವರಿಗೆ ಮಾರಿಯಾಗಿ, ಊರಿನವರಿಗೆ ಉಪಕಾರಿಯಾದರೆ ಉಪಕಾರದ ನೆನಪು ಇರುವವವರೆಗೆ ಮಾತ್ರ ಜನ ನೆನೆಸಿಕೊಳ್ಳುತ್ತಾರೆ. ನಂತರ ಮರೆತು ಬಿಡುತ್ತಾರೆ. ಕೆಲವು ಜನರು ತಮ್ಮ ಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ, ಸಮಾಜದಲ್ಲಿ ಹೆಸರು ಮಾಡಬೇಕೆಂಬ ಆಸೆಯಿಂದ ಹೀಗೆ ಮಾಡುವುದುಂಟು.
ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಸಹ “ಹುಲ್ಲಾಗು ಬೆಟ್ಟದಡಿ, ಮನೆಗೂ ಮಲ್ಲಿಗೆಯಾಗು” ಎಂದಿದ್ದಾರೆ. ನಾವು ಯಾವಾಗಲೂ ಮನೆಯ ಒಳಗೆ ಹಾಗೂ ಮನೆಯ ಹೊರಗೆ ಒಳ್ಳೆಯವರಾಗಿ ಜೀವನ ನಡೆಸಬೇಕು. ಆಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣುವುದು ಸಾಧ್ಯ. ಅದನ್ನು ಬಿಟ್ಟು ನಾವು ಕೇವಲ ಹೊರಗಿನ ಜನರಿಗೆ ಒಳ್ಳೆಯವರಾಗಿದ್ದು ಹೆಸರುವಾಸಿಯಾಗಿ ಮನೆಯಲ್ಲಿ ಕೆಟ್ಟದಾಗಿ ವರ್ತಿಸಿದರೆ ಅದು ಅಸಹ್ಯವಾಗಿ ಕಾಣುತ್ತದೆ.
“ಊರು ಉಪಕಾರ ಅರಿಯದು, ಹೆಣ ಶೃಂಗಾರ ಅರಿಯದು” ಹಾಗೂ “ಊರ ದಾನ ಕಾಯ್ದು ದೊಡ್ಡ ಭೋರೇಗೌಡ ಏನೆಸಿಕೊಂಡ” ಎಂಬ ಗಾದೆಯು ಸಹ ಇದೆ ಅರ್ಥವನ್ನು ನೀಡುತ್ತದೆ. ಆದ್ದರಿಂದ ಊರಿಗೆ ಉಪಕಾರ ಮಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳುವುದಕ್ಕಿಂತ ಮನೆಗೆ ಮಲ್ಲಿಗೆಯಾಗಿ ನಿತ್ಯ ಸುಖ ಅನುಭವಿಸುವುದೇ ಒಳ್ಳೆಯದು.
ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ಮಾತು | Manege Mari Oorige Upakari Gade in Kannada
ಗಾದೆಗಳು ವೇದಗಳಿಗೆ ಸಮವಾಗಿವೆ. ಗಾದೆಗಳು ಹಿರಿಯರು ನುಡಿದ ನುಡಿಮುತ್ತುಗಳಾಗಿವೆ. ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಗಾದೆ ಮಾತು ತುಂಬಾ ಜನಪ್ರೀಯವಾಗಿದೆ.
ಕೆಲವು ಜನರು ಮನೆಯಲ್ಲಿನ ಸದಸ್ಯರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡದೆ ಹೊರಗಿನ ಜನರಿಗೆ ಸಹಾಯವನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಾರ್ಥಕ ಬದುಕು ಆಗುವುದಿಲ್ಲ. ಮನೆಯವರೆಲ್ಲರ ಯೋಗಕ್ಷೇಮ, ಕಷ್ಟ-ಸುಖ ವಿಚಾರಿಸದ ವ್ಯಕ್ತಿ ಊರಿಗೆ ಉಪಕಾರಿಯಾಗಿರುವುದರಿಂದ ಯಾವುದೇ ಉಪಯೋಗವಿಲ್ಲ. ಮನುಷ್ಯನಾದವನು ಯಾವಾಗಲೂ ಒಂದೇ ರೀತಿಯ ವ್ಯಕ್ತಿತ್ವವನ್ನು ಹೊಂದಿರಬೇಕು. ಕೆಲವು ಹೊರಗಿನವರೊಂದಿಗೆ ಪ್ರತಿಷ್ಟೆಗಾಗಿ ಒಳ್ಳೆಯ ವ್ಯಕ್ತಿ ಎಂದು ತೋರಿಸಿಕೊಳ್ಳಬಾರದು. ಹಾಗೆ ಮಾಡಿದರೆ ಒಂದಲ್ಲ ಒಂದು ದಿನ ಪಶ್ಚಾತಾಪವನ್ನು ಅನುಭವಿಸಬೇಕಾಗುತ್ತದೆ.
ಮೊದಲು ಮನೆಯ ವ್ಯಕ್ತಿಗಳ ಮನಸ್ಸನ್ನು ಗೆದ್ದರೆ ಮನೆಯ ಹೊರಗಿನ ವ್ಯಕ್ತಿಗಳ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು. ಉದಾಹರಣೆಗೆ, ವೃದ್ದಾಪ್ಯದಲ್ಲಿರುವ ಪೋಷಕರು ಮನೆಯಲ್ಲಿದ್ದಾರೆ ಅವರ ಯೋಗ-ಕ್ಷೇಮವನ್ನು ವಿಚಾರಿಸದೇ, ಮನೆಯ ಹೊರಗಿನ ಅಂದರೆ ಸಮಾಜದ ಇತರ ಜನರ ಯೋಗ ಕ್ಷೇಮವನ್ನು ವಿಚಾರಿಸಿ ಉಪಕಾರ ಮಾಡಿದರೆ ಏನು ಫಲವಿಲ್ಲ. ಅದು ಕೇವಲ ತೋರಿಕೆಯ ಪ್ರೀತಿ ಹಾಗೂ ಉಪಕಾರವಾಗುತ್ತದೆ.
ಪ್ರತಿಷ್ಟೆಗಾಗಿ ಜೀವನವನ್ನು ಮಾಡದೆ ಮನೆಯಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ನಂತರ ಸಮಾಜದ ಪ್ರೀತಿ-ವಿಶ್ವಾಸವನ್ನು ಗಳಿಸಬೇಕು. ಆಗ ನಮ್ಮ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ.
ಇದನ್ನೂ ಓದಿ:
- ಆರೋಗ್ಯವೇ ಭಾಗ್ಯ ಗಾದೆ ವಿಸ್ತರಣೆ | Arogyave Bhagya Gade Mathu Vistarane
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಮನಸಿದ್ದರೆ ಮಾರ್ಗ ಗಾದೆ ವಿಸ್ತರಣೆ | Manasiddare Marga Gaade in Kannada
- ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ | Desha Suttu Kosha Odu
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ | Gidavagi Baggadu Maravagi Baggite
- ಕೈ ಕೆಸರಾದರೆ ಬಾಯಿ ಮೊಸರು | Kai Kesaradare Bai Mosaru Gade in Kannada
- (ಗಾದೆ ವಿಸ್ತರಣೆ) ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ
ಮನೆಗೆ ಮಾರಿ ಪರರಿಗೆ ಉಪಕಾರಿ ಗಾದೆ ವಿಸ್ತರಣೆ | Manege Mari, Pararige Upakaari Gade Vistharane
ಮನೆಗೆ ಮಾರಿ, ಪರರಿಗೆ ಉಪಕಾರಿ ಈ ಗಾದೆ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ಜನರ ಬಾಯಲ್ಲಿ ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ. ಆದರೆ ಇಂತಹ ಜನರು ಸಹ ಸಮಾಜದಲ್ಲಿ ಇರುವುದು ಸುಳ್ಳಲ್ಲ. ಊರ ತುಂಬಾ ಒಳ್ಳೆಯ ಹೆಸರು ಪಡೆದು ಜನಾನುರಾಗಿಯಾಗಿ, ಮಾನವೀಯತೆಗೆ ಹೆಸರಾಗಿ, ಎಲ್ಲರಿಗೂ ಸಹಾಯ ಮಾಡುವ ಸಹೃದಯ ವ್ಯಕ್ತಿಯಾಗಿದ್ದು, ಮನೆಯಲ್ಲಿ ಮಾತ್ರ ವಿರುದ್ಧ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
ಇಂತಹ ಜನಗಳಿಗೆ ಊರ ಉಸಾಬರಿಯೆ ಮುಖ್ಯವಾಗಿದ್ದು, ಮನೆಯ ಹಾಗೂ ಮನೆಯವರ ಕಷ್ಟಕ್ಕೆ ಅವರು ಎಂದಿಗೂ ಸ್ಪಂದಿಸುವುದಿಲ್ಲ.
ಇದರಲ್ಲಿ ಗಂಡು-ಹೆಣ್ಣೆಂಬ ತಾರತಮ್ಯವಿಲ್ಲ. ಎಲ್ಲವನ್ನೂ ಹೆಂಡತಿಯ ತಲೆಗೆ ಕಟ್ಟಿ ಯಾವ ಜವಾಬ್ದಾರಿಯೂ ಇಲ್ಲದಂತೆ ವರ್ತಿಸುವ ಗಂಡಸರೂ ಇದ್ದಾರೆ ಹಾಗೂ ಸಮಾಜದಲ್ಲಿ ಒಳ್ಳೆಯ ಮಾತುಗಳನ್ನು ಹೇಳಿಸಿಕೊಳ್ಳುತ್ತಾ ಮನೆಯಲ್ಲಿ ಕೆಟ್ಟದಾಗಿ ವರ್ತಿಸುವ ಹೆಂಗಸರೂ ಇದ್ದಾರೆ.
ಸಂಸ್ಕೃತ ಭಾಷೆಯಲ್ಲಿ “ಪರೋಪ ಕಾರಮಿದಂ ಶರೀರಂ” ಎಂಬ ಆದರ್ಶ ವಾಕ್ಯವಿದೆ. ಈ ಶರೀರವಿರುವುದೇ ಪರರಿಗೆ ಉಪಕಾರ ಮಾಡುವುದಕ್ಕಾಗಿ ಎಂಬ ಉದ್ದೇಶದಿಂದ ಎಂಬ ಭಾವನೆಯನ್ನು ಪ್ರತಿಜ್ನೆಯನ್ನಾಗಿ ಸ್ವೀಕರಿಸಿದ ಮಹನೀಯರೂ ಸಮಾಜದಲ್ಲಿದ್ದಾರೆ. ಬೇರೆಯವರಿಗೆ ಕೈಲಾದ ಅಥವಾ ಕೈಮೀರಿ ಸಹಾಯ ಮಾಡಿ ಪುಣ್ಯ ಕಟ್ಟುಕೊಳ್ಳಲು ಹೋಗಿ ಮನೆಯವರೆಲ್ಲರನ್ನು ಕಡೆಗಣಿಸುವುದು ಸರಿಯಲ್ಲ. ಮನೆಗೆ ಮಾರಿಯಾಗಿ ಪರರಿಗೆ ಉಪಕಾರಿತಾಗುವುದು ಸರಿಯಾದ ಮಾರ್ಗವಲ್ಲ. ಮನೆಗೆ ಮಾರಿಯಾಗುವುದು ಎಂದರೆ ಮನೆಯವರ ಯೋಗ-ಕ್ಷೇಮಕ್ಕೆ ತಿಲಾಂಜಲಿಯನ್ನಿಟ್ಟು, ಹೊರಗಿನವರಿಗೆ ಮಾತ್ರ ಉಪಕಾರ ಮಾಡುತ್ತಾ ಬದುಕುವುದು ಎಂಬ ಅರ್ಥವಲ್ಲ.
ಇತರಿರಿಗೆಲ್ಲ ಅನ್ಯಾಯವನ್ನು ಮಾಡುತ್ತಾ ಮನೆಯವರಿಗೆ ಮಾತ್ರ ಉಪಕಾರ ಮಾಡುವುದು ಹೇಗೆ ಸರಿಯಲ್ಲವೂ ಹಾಗೆಯೇ ಇತರರಿಗೆ ಉಪಕರಿಸಿ ಮನೆಯವರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂಬುದನ್ನೂ ಈ ಗಾದೆ ಮಾತು ನಮಗೆ ತಿಳಿಸುತ್ತದೆ.
ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ಮಾತಿನ ವಿವರಣೆ | Manege Mari Oorige Upakari Gade Matina Vivarane
“ಮನೆಗೆ ಮಾರಿ, ಊರಿಗೆ ಉಪಕಾರಿ” ಎಂಬ ಗಾದೆ ಮಾತು ಒಂದು ಗಹನ ಅರ್ಥವನ್ನು ಹೊತ್ತಿದೆ. ಇದರ ಅರ್ಥವನ್ನು ವಿವರಿಸಲು, ಇದು ವ್ಯಕ್ತಿ ಅಥವಾ ವಸ್ತುವಿನ ಎರಡು ವಿಭಿನ್ನ ದೃಷ್ಟಿಕೋನಗಳನ್ನು ತೋರಿಸುತ್ತದೆ.
ಈ ಗಾದೆಯ ಪ್ರಕಾರ ಒಂದು ವ್ಯಕ್ತಿಯು ಮನೆಯೊಳಗೆ ಅನುಪಯುಕ್ತನಾಗಿರಬಹುದು. ಆದರೆ ಅದೇ ವ್ಯಕ್ತಿ ತನ್ನ ಊರಿನಲ್ಲಿ, ಅಥವಾ ಸಮುದಾಯದಲ್ಲಿ ಬಹಳ ಉಪಯುಕ್ತನಾಗಿರಬಹುದು.
ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿರುವಾಗ ಅಲಕ್ಷ್ಯ, ಕೆಲಸ ಮಾಡದ ನಿಷ್ಪ್ರಯೋಜಕನಾಗಿರಬಹುದು. ಆದರೆ, ಅವನು ತನ್ನ ಊರಿನಲ್ಲಿ ಅಥವಾ ಇತರರಿಗೆ ಸಮಾಜ ಸೇವೆ ಮಾಡುತ್ತಾ, ಜನರಿಗೆ ಸಹಾಯ ಮಾಡುತ್ತಾ, ಒಂದು ಉತ್ತಮ ವ್ಯಕ್ತಿತ್ವವನ್ನು ಹೊಂದಿರಬಹುದು. ಈ ರೀತಿಯಾಗಿ, ಮನೆಯವರು ಅವನನ್ನು “ಮಾರಿ” ಎಂದು ಭಾವಿಸಿದರೂ ಸಹ ಊರು ಅವನನ್ನು “ಉಪಕಾರಿ” ಎಂದು ಮೆಚ್ಚುತ್ತದೆ.
ಈ ಗಾದೆ ಮಾತು ನಮಗೆ ಒಂದು ಮಹತ್ವದ ಪಾಠವನ್ನು ಕಲಿಸುತ್ತದೆ. ವ್ಯಕ್ತಿಯ ಮೌಲ್ಯವನ್ನು ವೈಯಕ್ತಿಕ ಮತ್ತು ಸಾಮಾಜಿಕ ದೃಷ್ಟಿಕೋನಗಳಲ್ಲಿ ಅಳೆಯಬೇಕು. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳಿರುತ್ತವೆ, ಅದು ಎಲ್ಲಿಗೆ ಉಪಯೋಗವಾಗುತ್ತದೆ ಎಂಬುದು ಸಂದರ್ಭದ ಮೇಲೆ ಅವಲಂಬಿತವಾಗಿದೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.