ಗಾದೆಗಳು ನಮ್ಮ ಜೀವನದ ದಾರಿದೀಪಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ಹಿರಿಯರ ಅನುಭವದ ನುಡಿಮುತ್ತುಗಳು., ಜೀವನದ ಸತ್ಯಗಳನ್ನು ಸರಳವಾಗಿ ಬಿಂಬಿಸುವ ಮಾತುಗಳು. “ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ” ಎಂಬ ಗಾದೆ ಸತ್ಯ ಮತ್ತು ಸುಳ್ಳಿನ ತಾತ್ವಿಕತೆಯನ್ನು ಮನವರಿಕೆ ಮಾಡಿಸುವ ಒಂದು ಶ್ರೇಷ್ಠ ನುಡಿಮುತ್ತಾಗಿದೆ.
ಈ Sathyakke Savilla Sullige Sukhavilla ಗಾದೆ ನಮ್ಮ ಜೀವನದಲ್ಲಿ ಸತ್ಯದ ಶಾಶ್ವತತೆಯನ್ನು ಮತ್ತು ಸುಳ್ಳಿನ ತಾತ್ಕಾಲಿಕತೆಯನ್ನು ವಿವರಿಸುತ್ತದೆ. ಸತ್ಯವು ಯಾವಾಗಲೂ ಶಾಶ್ವತ ಮತ್ತು ಜೀವಂತವಾಗಿರುತ್ತದೆ, ಆದರೆ ಸುಳ್ಳು ಕ್ಷಣಿಕ ಸುಖವನ್ನು ನೀಡಿದರೂ, ಅದು ಜೀವನದಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ.
ಈ ಲೇಖನದಲ್ಲಿ, ಸತ್ಯಕ್ಕೆ ಸಾವಿಲ್ಲ- ಸುಳ್ಳಿಗೆ ಸುಖವಿಲ್ಲ ನಾವು ಈ ಗಾದೆಯ ಅರ್ಥವನ್ನು, ಅದರ ಪ್ರಾಯೋಗಿಕತೆಯನ್ನು ಮತ್ತು ಜೀವನದಲ್ಲಿ ಅದರ ಅನ್ವಯಿಕತೆಯನ್ನು ವಿಸ್ತಾರವಾಗಿ ಚರ್ಚಿಸುತ್ತೇವೆ. ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಉತ್ತರ ಬರೆಯಲು, ಶಿಕ್ಷಕರಿಗೆ ಪಾಠ ಕಲಿಸಲು ಹಾಗೂ ಭಾಷಣಕಾರರಿಗೆ ಮಾರ್ಗದರ್ಶನ ನೀಡುತ್ತವೆ ಹಾಗೂ ಸತ್ಯದ ಹಾದಿಯಲ್ಲಿ ನಡೆಯುವ ಮಹತ್ವವನ್ನು ತಿಳಿಸುವಲ್ಲಿ ಸಹಾಯಕವಾಗುತ್ತದೆ.
Table of Contents
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಗಾದೆ ವಿಸ್ತರಣೆ | Sathyakke Savilla; Sullige Sukhavilla Gade Vistharane
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ.
ಸತ್ಯಕ್ಕೆ ಸಾವಿಲ್ಲ ಎಂದರೆ ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಸುಳ್ಳನ್ನು ತಾತ್ಕಾಲಿಕವಾಗಿ ಹೇಳಿದರೂ ಒಂದಲ್ಲ ಒಂದು ದಿನ ಆ ಸುಳ್ಳು ಹೊರ ಬೀಳುತ್ತದೆ. ಹೇಳಿದ ಸುಳ್ಳು ಬಯಲಾದಗ ನಮ್ಮ ಘನತೆ ಗೌರವ ವ್ಯಕ್ತಿತ್ವವೇ ಹಾಳಾಗುತ್ತದೆ. ಅಶೋಕನು ಅಶೋಕ ಸ್ತಂಬದಲ್ಲಿ ಸತ್ಯಮೇವ ಜಯತೆ ಎಂದು ಬರೆಸಿರುವುದನ್ನು ಗಮನಿಸಿರಬಹುದು. ಸುಳ್ಳು ಹೇಳಿದರೆ ಸುಳ್ಳಿಗೆ ಇನ್ನೊಂದು ಸುಳ್ಳಿನಂತೆ ಸುಳ್ಳಿನ ಸರಮಾಲೆಯೇ ಆಗುತ್ತದೆ. ಇದರಿಂದ ನಮ್ಮ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ ಹಾಗೂ ಇದರಿಂದ ವ್ಯಕ್ತಿಯೊಂದಿನ ಸಂಬಂಧ ಕಡಿತಗೊಳ್ಳುವ ಸಂದರ್ಭವು ಬರುತ್ತದೆ. ಆದ್ದರಿಂದ ಎಲ್ಲರೂ ಸತ್ಯದ ಹಾದಿಯಲ್ಲೇ ನಡೆಯಬೇಕು.
ಉದಾಹರಣೆಗೆ ಸತ್ಯಹರಿಶ್ಚಂದ್ರರು ಸತ್ಯದಿಂದಲೇ ತನ್ನ ಸುಖ ಸಂಪತ್ತನ್ನು ತ್ಯಜಿಸಿ ಮುಂದೆ ಸತ್ಯವನ್ನೇ ಗೆದ್ದ ಮಹಾಪುರುಷನಾಗಿದ್ದಾನೆ. ಗಾಂಧೀಜಿಯವರು ಸತ್ಯ, ಶಾಂತಿ, ಅಹಿಂಸೆಯಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟರು. ಸುಳ್ಳು ಕ್ಷಣಿಕ ಸುಖವನ್ನು ನೀಡುತ್ತದೆ ನಿಜ. ಆದರೆ ಸತ್ಯ ಎಂದಿಗೂ ಸತ್ಯವಾಗಿಯೇ ಉಳಿಯುತ್ತದೆ. ವ್ಯಕ್ತಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ ಒಂದು ದಿನ ಅವನು ನಿಜವನ್ನೇ ಹೇಳಿದರೂ ಯಾರೂ ನಂಬುವುದಿಲ್ಲ. ಹಾಗಾಗಿ ಎಲ್ಲರೂ ಸತ್ಯದ ಹಾದಿಯಲ್ಲೇ ನಡೆಯುವುದು ಉತ್ತಮ ಎಂಬುದು ಈ ಗಾದೆಯ ಅರ್ಥ.
ಗಾದೆ ವಿಸ್ತರಣೆ : ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ | Satyakke Savilla Sullige Sukhavilla Gade Matina Vistarane
ಹಿರಿಯರ ಅನುಭವದ ಮಾತೇ ಗಾದೆ. ವೇದ ಸುಳ್ಳಾದರೂ ಗಾದೆ ಸುಳ್ಳಗದು ಎನ್ನುವ ಮಾತಿನಂತೆ ಪ್ರತಿಯೊಂದು ಗಾದೆಯು ಸಂದರ್ಭಕ್ಕನುಸಾರ ಉಪಯೋಗಿಸಲ್ಪಡುತ್ತದೆ. ಅಂತಹ ಗಾದೆಗಳಲ್ಲಿ ಮೇಲಿನ ಗಾದೆಯು ಒಂದಾಗಿದೆ.
ಸತ್ಯಕ್ಕೆ ಒಂದೇ ದಾರಿ. ಸುಳ್ಳಿಗೆ ಹಲವಾರು ದಾರಿ. ಇದು ದಿನನಿತ್ಯದಲ್ಲಿ ಕಂಡುಬರುವ ಸಾಮಾನ್ಯ ವಾಕ್ಯ, ಸತ್ಯ ಶಾಶ್ವತ ಆದರೆ ಸುಳ್ಳು ಅಶಾಶ್ವತ. ಸುಳ್ಳಿನಿಂದ ಕ್ಷಣಿಕ ಆನಂದ ದೊರಕಬಹುದು. ಆದರೆ ಅದರಿಂದ ಅನೇಕ ತೊಂದರೆಗಳು ಪ್ರಾರಂಭವಾಗುತ್ತವೆ. ಸತ್ಯವೊಂದೇ ಜಯವನ್ನು ತರುವ ಸಾಧನ. ಅನೇಕರು ಸತ್ಯವನ್ನೇ ಕಡೆಯವರೆಗೂ ನಂಬಿ ವಿಜಯಿಯಾಗಿದ್ದಾರೆ. ಸತ್ಯವನ್ನು ಅನ್ವರ್ಥಕ ನಾಮವನ್ನಾಗಿ ಸಾರ್ಥಕವನ್ನಾಗಿಸಿದ ಮಹಾರಾಜರು ಆಗಿ ಹೋಗಿದ್ದಿದೆ. ದಾಸ ಶ್ರೇಷ್ಠ, ಮಹಾತ್ಮರು ಸತ್ಯದ ಆಚರಣೆಯ ಮೂಲಕ ನಿರಂತರವಾಗಿ ಗೌರವ ಪಡೆದುಕೊಂಡಿದ್ದಾರೆ. ಸತ್ಯ ಹೇಳಿ ಪಾರಾಗಬಹುದು. ಸುಲ್ಲಿನಿಂದ ಮತ್ತೊಂದು ಸುಳ್ಳಿಗೆ ಹೋಗಿ ಕಷ್ಟಪಡಬೇಕಾಗುತ್ತದೆ. ಸುಳ್ಳು ಹೇಳುವವರನ್ನು ಯಾರೂ ನಂಬುವುದಿಲ್ಲ. ಸುಳ್ಳು ತಾತ್ಕಾಲಿಕ ಸುಖ ಆದರೆ ಸತ್ಯ ಶಾಶ್ವತ ಸುಖ ಎನ್ನುತ್ತದೆ ಈ ಗಾದೆ.
ಇದನ್ನೂ ಓದಿ:
- ಮಾತು ಬೆಳ್ಳಿ ಮೌನ ಬಂಗಾರ ಗಾದೆ ವಿಸ್ತರಣೆ | Mathu Belli Mouna Bangara Gade in Kannada
- ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ | Desha Suttu Kosha Odu
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ | Gidavagi Baggadu Maravagi Baggite
- ಕೈ ಕೆಸರಾದರೆ ಬಾಯಿ ಮೊಸರು | Kai Kesaradare Bai Mosaru Gade in Kannada
- (ಗಾದೆ ವಿಸ್ತರಣೆ) ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಜಯವಿಲ್ಲ ಗಾದೆ ಮಾತು ವಿಸ್ತರಣೆ | Savilla Sullige Jayavilla Gaadhe Explanation in Kannada
ಗಾದೆಗಳು ಜನಪದರ ಅನುಭವದ ನುಡಿಮಾತುಗಲಾಗಿವೆ. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೇ ಇದೆ. ಅಂತಹ ಸಾವಿರಾರು ಗಾದೆ ಮಾತುಗಳನ್ನು ಕನ್ನಡ ಭಾಷೆಯಲ್ಲಿ ಕಾಣಬಹುದಾಗಿದೆ. ಅಂತಹ ಗಾದೆಗಳಲ್ಲಿ ಒಂದು ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಜಯವಿಲ್ಲ.
ಸತ್ಯಕ್ಕೆ ಸಾವಿಲ್ಲ ಎಂದರೆ ಸತ್ಯ ಸದಾ ಜೀವಂತವಾದುಡ್ಡು. ನಮ್ಮ ರಾಷ್ಟ್ರೀಯ ಲಾಂಛನದಲ್ಲೂ ಸಹ ಸತ್ಯಮೇವ ಜಯತೆ ಎಂಬ ಸಂಸ್ಕೃತದ ಉಕ್ತಿಯೇ ಇದೆ. ಅದರ ಅರ್ಥ ಸತ್ಯ ಎಂದಿಗೂ ಜಯ ಎಂದು. ನಮ್ಮ ಪುರಾಣ, ಇತಿಹಾಸಗಳಲ್ಲೂ ಸಹ ಸತ್ಯಕ್ಕೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಜೀವನಪರ್ಯಂತ ಸುಳ್ಳನ್ನೇ ಹೇಳದೇ ಸತ್ಯಪರಿಪಾಲನೆ ಮಾಡಿದ ಸತ್ಯ ಹರಿಶ್ಚಂದ್ರಣ ಬದುಕು ನಮ್ಮೆಲ್ಲರಿಗೂ ಆದರ್ಶವಾದುದಾಗಿದೆ. ನಮ್ಮ ಸಂಸ್ಕೃತಿಯು ‘ಸತ್ಯಂ ಶಿವಂ ಸುಂದರಂ’ ಎಂಬ ಸುಂದರ ಸಂದೇಶವನ್ನು ಸಾರಿ ಹೇಳುತ್ತದೆ.
ಹಾಗೆಯೇ ಸುಳ್ಳಿಗೆ ಸುಖವಿಲ್ಲ ಎಂದರೆ ಸುಳ್ಳಿನ ಆಯಸ್ಸು ಕಮ್ಮಿ ಹಾಗೂ ಅದರಿಂದ ಸುಖ ಖಂಡಿತಾ ಸಿಗುವುದಿಲ್ಲ. ನಾವು ನಮ್ಮ ಸುಳ್ಳಿನ ಮಾತುಗಳಿಂದ ಇತರರನ್ನು ಮೋಸಗೊಳಿಸಬಹುದು. ಆದರೆ ಅದು ಕ್ಷಣಿಕವಾದುದಾಗಿದೆ. ಅಷ್ಟೇ ಅಲ್ಲದೆ ಸುಳ್ಳನ್ನು ನಂಬಿಸಲು ನಾವು ಸುಳ್ಳಿನ ಮೇಲೆ ಸುಳ್ಳು ಹೇಳಲೇ ಬೇಕಾಗುತ್ತದೆ. ಇದು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸುತ್ತದೆ. ಆದರೂ ಮುಂದೆ ಒಂದಲ್ಲ ಒಂದು ಸಮಯದಲ್ಲಿ ಸತ್ಯ ಹೊರಬಂದೇ ಬರುತ್ತದೆ. ಆಗ ನಾವು ಸುಳ್ಳು ಹೇಳಿದ್ದರಿಂದ ನಮ್ಮ ಮೇಲಿನ ಗೌರವ, ನಂಬಿಕೆ ಹಾಳಾಗುತ್ತದೆ. ಹಾಗಾಗಿ ನಾವು ಸದಾ ಸತ್ಯವಂತರಾಗಿ ಸುಳ್ಳು ಹೇಳದೇ ಬದುಕಬೇಕೆಂಬ ಸುಂದರ ಸಂದೇಶವನ್ನು ಈ ಗಾದೆ ಮಾತು ತಿಳಿಸಿಕೊಡುತ್ತಾದೆ.
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ | Satyakke Savilla Sullige Sukavilla
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ.
ಸತ್ಯ ಸದಾ ಜೀವಂತವಾದುದು. ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದದ್ದು ‘ಸತ್ಯಕ್ಕೆ ಜಯ’ ಸತ್ಯವಂತರಿಗೆ ಎಂದೆಂದಿಗೂ ಜಯವಿದ್ದೇ ಇದೆ ಎಂದು ಎಲ್ಲಾ ಧರ್ಮಗಳಿಂದ ತಿಳಿದು ಬಂದಿದೆ. ಸತ್ಯ ಹರಿಶ್ಚಂದ್ರ ಜೀವನವೆಲ್ಲಾ ಸತ್ಯಕ್ಕಾಗಿ ಹೋರಾಡಿ ಶಾಶ್ವತವಾದ ಕೀರ್ತಿಯನ್ನು ಪಡೆದನು. ಗಾಂಧೀಜಿ, ಸ್ವಾಮಿ ವಿವೇಕಾನಂದ ಮೊದಲಾರೂ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು. ಸತ್ಯವನ್ನೇ ನುಡಿಯಿರಿ, ಪ್ರೇಯವಾದದ್ದನ್ನೆ ಹೇಳಿರಿ ಎಂಬ ನೀತಿ ವಾಕ್ಯವು ಸತ್ಯ ನಿತ್ಯವೆಂಬುದನ್ನೂ ಸಾರುತ್ತದೆ.
ಸುಳ್ಳಿಗೆ ಸುಖವಿಲ್ಲ ಸುಳ್ಳಿನ ಒಡನಾಟ ಕೇಸರೊಳಗೆ ಮುಳ್ಳು ತುಳಿದಂತೆ. ಸುಳ್ಳು ಹೇಳಿ ಆ ಸುಳ್ಳು ಬಯಲಾದಗ ಮನುಷ್ಯ ತನ್ನ ಗೌರವ, ಮರ್ಯಾದೆ, ನಂಬಿಕೆ ಕಳೆದುಕೊಳ್ಳುವುದರ ಜೊತೆಗೆ ಮನಸಿಕವಾಗಿ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.
ಸುಳ್ಳು ಒಂದು ಬಲೆ ಇದ್ದಹಾಗೆ. ಅದರಲ್ಲಿ ಸಿಕ್ಕಿ ಬಿದ್ದರೆ ಹೊರಬರುವುದು ಕಷ್ಟ. ಆದ್ದರಿಂದ ಸುಳ್ಳಿನ ದಾಸರಾಗಿ ಜೀವನವನ್ನು ಹಾಳುಮಾಡಿಕೊಳ್ಳುವ ಬದಲು ಸತ್ಯವೆಂಬ ಬೆಳಕಿನ ಹಾದಿಯಲ್ಲಿ ನಡೆದು ಜೀವನ ಸಾರ್ಥಕಗೊಳಿಸಕೊಳ್ಳಬೇಕು.
ಸತ್ಯಕ್ಕೆ ಸಾವಿಲ್ಲ ; ಸುಳ್ಳಿಗೆ ಸುಖವಿಲ್ಲ ಗಾದೆ | Sathyakke Savilla Sullige Sukhavilla Gade
ಪೀಠಿಕೆ: ಗಾದೆಗಳು ವೇದಗಳಿಗೆ ಸಮಾನ. ಹಿರಿಯರ ಅನುಭವದ ನುಡಿಮುತ್ತುಗಳೇ ಈ ಗಾದೆಗಳು. ಬಿಂದುವಿನಂತಹ ಗಾದೆಯಲ್ಲಿ ಸಿಂಧುವಿನಂತಹ ವಿಶಾಲ ಅರ್ಥವು ಅಡಗಿರುತ್ತದೆ. ಅಂತಹ ಕನ್ನಡದ ಹಲವಾರು ಸುಪ್ರಸಿದ್ಧ ಗಾದೆಗಳಲ್ಲಿ “ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ” ಎಂಬ ಗಾದೆ ಮಾತು ಕೂಡಾ ಒಂದಾಗಿದೆ.
ವಿಷಯ ನಿರೂಪಣೆ: ದಿನನಿತ್ಯದ ವ್ಯವಹಾರದಲ್ಲಿ ಮನುಷ್ಯ ಹಲವಾರು ಸಂಗತಿಗಳನ್ನು ಮಾತನಾಡುತ್ತಾನೆ. ವಿಷಯವನ್ನು ಇದ್ದಂತೆ ಹೇಳಿದರೆ ಸತ್ಯ; ಅದನ್ನೇ ತಿರುಚಿ ಹೇಳಿದರೆ ಸುಳ್ಳು ಎನಿಸುತ್ತದೆ. ‘ಸುಳ್ಳು’ ಕ್ಷಣಿಕ ಸುಖವನ್ನು ನೀಡಬಹುದು. ಆದರೆ ಶಾಶ್ವತವಾದ ಅಪಾಯವನ್ನುಂಟು ಮಾಡುತ್ತದೆ. ಆದರೆ ಸತ್ಯ ಆ ರೀತಿಯಲ್ಲ. ಒಮ್ಮೆ ಹೇಳಿದ ಸತ್ಯದ ಮಾತು ಎಂದೆಂದಿಗೂ ಸತ್ಯವಾಗಿಯೇ ಇರುತ್ತದೆ. ಸತ್ಯವಂತನಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಅಸತ್ಯವಂತನನ್ನು ಸಮಾಜ ತಿರಸ್ಕರಿಸುತ್ತದೆ.
“ಸತ್ಯ ಮೇವ ಜಯತೆ” ಎನ್ನುವ ಉಪನಿಷತ್ತಿನ ಸಾಲಿನಂತೆ, ಸತ್ಯಕ್ಕಾಗಿ ಹೋರಾಡಿದ ಸತ್ಯನ್ನೇ ನುಡಿದು ಬದುಕಿ ಅಜರಾಮರರದ ಮಹಾತ್ಮರ ನಿದರ್ಶನಗಳನ್ನು ಇತಿಹಾಸ ಪುರಾಣಗಳಲ್ಲಿ ಓದಿದ್ದೇವೆ ಹಾಗೂ ಕೇಳಿದ್ದೇವೆ. ರಾಜ ಹರಿಶ್ಚಂದ್ರ ಕೊನೆಯವರೆಗೂ ಸತ್ಯವನ್ನೇ ನುಡಿದು ಸತ್ಯ ಹರಿಶ್ಚಂದ್ರನೆನೆಸಿಕೊಂಡಿದ್ದು, ಆಧುನಿಕ ಜಗತ್ತಿನಲ್ಲಿ ಸತ್ಯವನ್ನೇ ನುಡಿದು ಮಹಾತ್ಮ ಗಾಂಧಿಯವರು ‘ಸತ್ಯದ ಸಾಕಾರಮೂರ್ತಿ’ ಎನಿಸಿದ್ದು ಇವೆಲ್ಲವೂ ನಮಗೆ ಉತ್ತಮ ನಿದರ್ಶನಗಳಾಗಿವೆ. ಅಲ್ಲದೆ ಸತ್ಯಕ್ಕೆ ಎಂದೂ ಸವಿಲ್ಲ ಅದು ಜೀವಂತವಾಗಿರುತ್ತದೆ. ‘ಸುಳ್ಳಿಗೆ ಸುಖವಿಲ್ಲ’ ಸುಳ್ಳು ಹೇಳಿದವರು ದುಃಖದಲ್ಲಿ ಮುಳುಗಬೇಕಾಗುತ್ತದೆ ಎಂಬ ಅರ್ಥವನ್ನು ಈ ಗಾದೆ ಮಾತು ತಿಳಿಸುತ್ತದೆ.
ಉಪಸಂಹಾರ: ಇಂತಹ ಉತ್ತಮವಾದ ಹಿರಿಯರ ಅನುಭವದ ನುಡಿಮುತ್ತುಗಳನ್ನು ವಿದ್ಯಾರ್ಥಿಗಳಾದ ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದು ಉತ್ತಮ ಜೀವನ ನಡೆಸೋಣ.
ಇದನ್ನೂ ಓದಿ:
- ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ವಿಸ್ತರಣೆ | Manege Mari Oorige Upakari Gade in Kannada
- ಆರೋಗ್ಯವೇ ಭಾಗ್ಯ ಗಾದೆ ವಿಸ್ತರಣೆ | Arogyave Bhagya Gade Mathu Vistarane
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಮನಸಿದ್ದರೆ ಮಾರ್ಗ ಗಾದೆ ವಿಸ್ತರಣೆ | Manasiddare Marga Gaade in Kannada
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಗಾದೆ ವಿಸ್ತರಣೆ | Sathyake Savilla Sullige Sukavilla Gadhe in Kannada
“ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ” ಎಂಬ ಗಾದೆ ಕನ್ನಡದ ಜನಪ್ರಿಯ ನುಡಿಮುತ್ತುಗಳಲ್ಲಿ ಒಂದಾಗಿದೆ. ಈ ಗಾದೆಯ ಅರ್ಥ ಮತ್ತು ಮಹತ್ವವನ್ನು ವಿವರಿಸುವುದಾದರೆ, ಇದು ಸತ್ಯ ಮತ್ತು ಸುಳ್ಳಿನ ನಡುವಿನ ಭಿನ್ನತೆಯನ್ನು ತೋರಿಸುತ್ತದೆ.
ಸತ್ಯ ಎಂದರೆ ಶುದ್ಧತೆ, ನೈತಿಕತೆ ಮತ್ತು ಆಧಾರಿತ ಜೀವನ. ಸತ್ಯವು ಯಾವಾಗಲೂ ಶಾಶ್ವತವಾಗಿರುತ್ತದೆ, ಅದು ಕಾಲದ ಪ್ರಭಾವದಿಂದ ಬದಲಾಯಿಸುವುದಿಲ್ಲ. ನಮ್ಮ ರಾಷ್ಟ್ರೀಯ ಲಾಂಛನದಲ್ಲಿ “ಸತ್ಯಮೇವ ಜಯತೇ” ಎಂಬುದನ್ನು ಕಾಣಬಹುದು. ಇದು ಸತ್ಯವು ಯಾವಾಗಲೂ ಜಯಶಾಲಿಯಾಗಿರುತ್ತದೆ ಎಂಬುದನ್ನು ಸಾರುತ್ತದೆ.
ಪುರಾಣಗಳಲ್ಲಿ ಸತ್ಯ ಹರಿಶ್ಚಂದ್ರನಂತಹ ವ್ಯಕ್ತಿಗಳು ತಮ್ಮ ಜೀವನವನ್ನು ಸತ್ಯಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಮಹಾತ್ಮ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ಕೂಡಾ ಸತ್ಯಮಾರ್ಗವನ್ನು ಅನುಸರಿಸಿ ಜಗತ್ತಿಗೆ ಮಾದರಿಯಾದರು.
ಸುಳ್ಳು ಎಂದರೆ ತಾತ್ಕಾಲಿಕ ಸುಖವನ್ನು ನೀಡುವ ಆದರೆ ಶಾಶ್ವತವಾಗಿ ಕಷ್ಟಕ್ಕೆ ಕಾರಣವಾಗುವ ಒಂದು ಅಂಶ. ಸುಳ್ಳು ಹೇಳಿದಾಗ ಅದನ್ನು ಸಮರ್ಥಿಸಲು ಮತ್ತೊಂದು ಸುಳ್ಳು ಹೇಳಬೇಕಾಗುತ್ತದೆ. ಹೀಗೆ ಅದು ಒಂದು ಸರಮಾಲೆಯಂತೆ ಬೆಳೆಯುತ್ತದೆ. ಆದರೆ, ಸುಳ್ಳು ಬಯಲಾಗುವ ಸಮಯದಲ್ಲಿ ಮನುಷ್ಯ ತನ್ನ ಗೌರವ, ನಂಬಿಕೆ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಸುಳ್ಳು ಜೀವನವನ್ನು ಕೆಸರಿನಲ್ಲಿ ಮುಳ್ಳು ತುಳಿದಂತೆ ಮಾಡುತ್ತದೆ.
ಈ ಗಾದೆ ನಮಗೆ ಜೀವನದಲ್ಲಿ ಸತ್ಯದ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತದೆ. ಸತ್ಯವು ನಮ್ಮನ್ನು ಮಾನಸಿಕ ನೆಮ್ಮದಿಯೊಂದಿಗೆ ಬದುಕಲು ಸಹಾಯ ಮಾಡುತ್ತದೆ. ಆದರೆ ಸುಳ್ಳು ನಮ್ಮ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ, ನಾವು ಯಾವಾಗಲೂ ಸತ್ಯವನ್ನು ಪಾಲಿಸಬೇಕು ಮತ್ತು ಸುಳ್ಳಿನಿಂದ ದೂರವಿರಬೇಕು ಎಂದು ಈ ಗಾದೆ ಬೋಧಿಸುತ್ತದೆ.
ಈಗಿನ ಕಾಲದಲ್ಲೂ ಈ ಗಾದೆಯ ಪ್ರಸ್ತುತತೆ ಕಡಿಮೆಯಾಗಿಲ್ಲ. ಇದು ನಮ್ಮ ನೈತಿಕ ಮೌಲ್ಯಗಳನ್ನು ಕಟ್ಟಿಕೊಳ್ಳಲು ಮಾರ್ಗದರ್ಶಕವಾಗಿದೆ. “ಸತ್ಯಂ ಶಿವಂ ಸುಂದರಂ” ಎಂಬ ಮಾತು ಸತ್ಯದ ಮಹತ್ವವನ್ನು ಮತ್ತಷ್ಟು ಬಲಪಡಿಸುತ್ತದೆ
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಗಾದೆಯ ವಿಸ್ತರಣೆ | Satyakke Savilla Sullige Sukhavilla Short Story in Kannada
ಈ ಗಾದೆಯ ಅರ್ಥ ಸತ್ಯವು ಶಾಶ್ವತವಾದುದು, ಅದು ಯಾವಾಗಲೂ ಉಳಿಯುತ್ತದೆ; ಆದರೆ ಸುಳ್ಳು ತಾತ್ಕಾಲಿಕವಾಗಿದ್ದು, ಅದು ಬಹಳಷ್ಟು ದುಃಖ ಮತ್ತು ಕಷ್ಟವನ್ನು ಉಂಟುಮಾಡುತ್ತದೆ. ಸತ್ಯ ಮತ್ತು ಸುಳ್ಳಿನ ಮೌಲ್ಯಗಳನ್ನು ಜೀವನದಲ್ಲಿ ಅರ್ಥಮಾಡಿಕೊಳ್ಳಲು ಈ ಗಾದೆಯು ಅತ್ಯಂತ ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ.
ಇತಿಹಾಸದಲ್ಲಿ ದೊಡ್ಡ ಮಹನೀಯರು ಸತ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಸತ್ಯ ಒಂದು ಪ್ರಕಾರದ ಶಕ್ತಿಯಾಗಿದ್ದು, ಅದು ನಮ್ಮ ಬದುಕಿನಲ್ಲಿ ನಂಬಿಕೆ ಮತ್ತು ನೈತಿಕತೆ ನೀಡುತ್ತದೆ.
ಸುಳ್ಳು ಸಹಜವಾಗಿ ಕೆಲವು ಸಮಯಕ್ಕೆ ಮಾತ್ರ ಸಹಾಯ ಮಾಡಬಹುದು. ಆದರೆ, ಸುಳ್ಳಿನ ಮೇಲೆ ಕಟ್ಟಿದ ಜೀವನ ಸುಖಕರವಾಗುವುದಿಲ್ಲ. ಸುಳ್ಳು ನಮ್ಮ ಜೀವನದಲ್ಲಿ ಭಯ, ಅನುಮಾನ ಮತ್ತು ಅಶಾಂತಿಯನ್ನುಂಟುಮಾಡುತ್ತದೆ. ಅದು ನಿರಂತರವಾಗಿ ನಮ್ಮ ಶಾಂತಿಯನ್ನು ಹಾಳುಮಾಡುತ್ತದೆ.
ಈ ಗಾದೆಯು ನಮಗೆ ಸತ್ಯದ ಮಾರ್ಗವನ್ನು ಅನುಸರಿಸುವಂತೆ ಪ್ರೇರೇಪಿಸುತ್ತದೆ. ನಾವು ಸತ್ಯವನ್ನು ಆಶ್ರಯಿಸಿದರೆ, ಜೀವನದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬಹುದು. ಆದರೆ, ಅಂತಿಮದಲ್ಲಿ ಸತ್ಯವೇ ಗೆಲ್ಲುತ್ತದೆ ಎಂಬ ನಂಬಿಕೆಯನ್ನು ಇದು ಮೂಡಿಸುತ್ತದೆ.
“ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ” ಎಂಬ ಗಾದೆ ನಮ್ಮನ್ನು ಸತ್ಯನಿಷ್ಠ ಜೀವನಕ್ಕೆ ಮಾರ್ಗದರ್ಶಿ ಮಾಡುತ್ತದೆ. ಸತ್ಯದ ಹಾದಿಯಲ್ಲಿ ನಡೆಯುವುದು ಕಷ್ಟಕರ, ಆದರೆ ಅದು ಶ್ರೇಷ್ಠ ಜೀವನಕ್ಕೆ ದಾರಿ ತೋರುತ್ತದೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.