“ಆಳಾಗಬಲ್ಲವನು ಅರಸನಾಗಬಲ್ಲ” (alaga ballavanu arasanaga balla in kannada) ಎಂಬ ಗಾದೆಯು ಕಠಿಣ ಹೋರಾಟಗಳನ್ನು ಜಯಿಸುವ ಶಕ್ತಿ ಮತ್ತು ಬದುಕಿನಲ್ಲಿ ಹೆಚ್ಚು ಸಾಧಿಸಲು ಮಾನವನ ಸಾಮರ್ಥ್ಯವನ್ನು ಕುರಿತು ನಮ್ಮ ಮನಸ್ಸಿಗೆ ಆಳವಾದ ಯೋಚನೆಗಳನ್ನು ಮೂಡಿಸುತ್ತದೆ. ಈ ಲೇಖನವು ಈ ಗಾದೆಯ ವಿವಿಧ ವ್ಯಾಖ್ಯಾನಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯಲು ಸಹಾಯ ಮಾಡುತ್ತದೆ, ಶಿಕ್ಷಕರಿಗೆ ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ಸಹ ಮಾರ್ಗದರ್ಶನವನ್ನು ಒದಗಿಸುತ್ತದೆ. ಹಾಗೆಯೇ ಭಾಷಣಗಳಲ್ಲಿ ಉಪಯೋಗಿಸಲು ಅಗತ್ಯವಿರುವ ಅರಿವು ಮತ್ತು ಸಂದೇಶವನ್ನು ತಲುಪಲು ನೆರವಾಗುತ್ತದೆ.
Table of Contents
ಆಳಾಗಬಲ್ಲವನು ಅರಸನಾಗಬಲ್ಲ | Alaga Ballavanu Arasanaga Balla in Kannada
ಆಳಾಗಬಲ್ಲವನು ಅರಸನಾಗಬಲ್ಲ ಗಾದೆ ವಿಸ್ತರಣೆ | Alaga Ballavanu Arasanaga Balla Gade Vistarane
“ಆಳಾಗಬಲ್ಲವನು ಅರಸನಾಗಬಲ್ಲ” ಎಂಬ ಗಾದೆಯು ನಮಗೆ ಸ್ಥೈರ್ಯ ಮತ್ತು ಶಕ್ತಿಯ ಬಗ್ಗೆ ಅಮೂಲ್ಯವಾದ ಪಾಠವನ್ನು ಕಲಿಸುತ್ತದೆ. ಕಠಿಣ ಸಮಯಗಳನ್ನು ಸಹಿಸಿಕೊಳ್ಳಬಲ್ಲವರು ಮತ್ತು ಸವಾಲುಗಳನ್ನು ಎದುರಿಸಬಲ್ಲವರು ತಮ್ಮ ಪರಿಸ್ಥಿತಿಗಳಿಗಿಂತ ಮೇಲೇರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬುದನ್ನು ಇದು ನಮಗೆ ತಿಳಿಸುತ್ತದೆ. ಕಷ್ಟಗಳನ್ನು ಅನುಭವಿಸಿದ ವ್ಯಕ್ತಿಯು ಶ್ರೇಷ್ಠತೆಯನ್ನು ಸಾಧಿಸಲು ಬೇಕಾದ ಆಂತರಿಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಅವರು ಆರಂಭ ಕಷ್ಟದಿಂದ ಶುರುವಾದರೂ ಸಹ ಅವರ ಪರಿಶ್ರಮದ ಸಾಮರ್ಥ್ಯವು ಅಂತಿಮವಾಗಿ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
ಈ ಗಾದೆಯು ನಮ್ಮ ಜೀವನದ ಪ್ರತಿ ಘಟ್ಟದಲ್ಲೂ ಪರಿಶ್ರಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಜೀವನವು ಯಾವಾಗಲೂ ಸುಲಭವಲ್ಲ. ಅನೇಕ ಅಡೆತಡೆಗಳು ನಮ್ಮ ದಾರಿಯಲ್ಲಿ ಬರಬಹುದು. ಆದರೆ, ಕಷ್ಟಗಳ ನಡುವೆಯೂ ತಮ್ಮ ಗುರಿಯತ್ತ ಮುನ್ನುಗ್ಗುವವರು ತಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಆಳಾಗಿ ಕಷ್ಟಪಟ್ಟು ಕೆಲಸ ಮಾಡಿ, ತುಳಿತಕ್ಕೊಳಗಾದರೂ ಸಹ ಕಲಿಯುವ ಮತ್ತು ಬೆಳೆಯುವ ಸಾಮರ್ಥ್ಯವನ್ನು ಹೊಂದಿದ ವ್ಯಕ್ತಿ ಮುಂದೊಂದು ದಿನ ಖಂಡಿತ ಯಶಸ್ಸನ್ನು ಸಾಧಿಸುತ್ತಾನೆ. ಯಾರೆ ಆದರೂ ಅವರ ಜೀವನದ ಮೊದಲ ಹಂತ ಕಷ್ಟಗಳಿಂದ ತುಂಬಿದ್ದರೂ ಸಹ ಕಠಿಣ ಪರಿಶ್ರಮ ಮತ್ತು ನಿರ್ಣಯದ ಮೂಲಕ ತಮ್ಮ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಈ ಗಾದೆ ಎತ್ತಿ ಹೇಳುತ್ತದೆ.
ಸ್ವ ಶಕ್ತಿಯಿಂದ ಕಠಿಣ ಪರಿಶ್ರಮದಿಂದ ದುಡಿವ ವ್ಯಕ್ತಿ ಮುಂದೊಂದು ದಿನ ರಾಜನಂತೆಯೇ ನಾಯಕತ್ವದ ಸ್ಥಾನಗಳಿಗೆ ಏರಬಹುದು. ಇದು ಪ್ರತಿಯೊಬ್ಬ ವ್ಯಕ್ತಿಯೊಳಗೆ ಇರುವ ಸಾಮರ್ಥ್ಯವನ್ನು ತೋರಿಸುತ್ತದೆ.
ಅಂತಿಮವಾಗಿ, ಗಾದೆ ನಮ್ಮ ಸ್ವಂತ ಸಾಮರ್ಥ್ಯವನ್ನು ನಂಬಲು ಪ್ರೋತ್ಸಾಹಿಸುತ್ತದೆ. ಕಷ್ಟಕರ ಎಷ್ಟೇ ಕಷ್ಟದ ಸಂದರ್ಭಗಳನ್ನು ಎದುರಿಸಿದಾಗಲೂ, ನಮ್ಮ ಪರಿಸ್ಥಿತಿಗಳನ್ನು ಮೆಟ್ಟಿ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂಬುದನ್ನು ನೆನಪಿನಲ್ಲಿಡಬೇಕು. ಪ್ರತಿಯೊಬ್ಬರೂ ಪ್ರತಿಕೂಲತೆಯನ್ನು ಜಯಿಸುವ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಸರಿಯಾದ ಮನಸ್ಥಿತಿಯೊಂದಿಗೆ ತಮ್ಮ ಗುರಿಗಳನ್ನು ತಲುಪಬಹುದು ಎಂದು ಅದು ಕಲಿಸುತ್ತದೆ.
ಆಳಾಗ ಬಲ್ಲವನು ಅರಸನಾಗ ಬಲ್ಲ ಕನ್ನಡ ಗಾದೆ | Alaga Ballavanu Arasanaga Balla in Kannada Gade
“ಆಳಾಗಬಲ್ಲವನು ಅರಸನಾಗಬಲ್ಲ” ಎಂಬ ಗಾದೆಯು ಕಠಿಣ ಪರಿಸ್ಥಿತಿಗಳಿಂದ ಹೊರಬರುವ ಶಕ್ತಿ ಮತ್ತು ಸಾಮರ್ಥ್ಯವನ್ನು ವಿವರಿಸುತ್ತದೆ. ಇದರ ಅರ್ಥವೇನೆಂದರೆ, ಯಾವುದೇ ವ್ಯಕ್ತಿಯು ತೀವ್ರ ಕಷ್ಟಗಳು ಮತ್ತು ಸಂಕಷ್ಟಗಳನ್ನು ಸಮರ್ಥವಾಗಿ ತಡೆದುಕೊಳ್ಳಲು ಸಾಧ್ಯವಾದರೆ, ಅವನು ತನ್ನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಅಂದರೆ, ಕಷ್ಟ, ದುಃಖ ಮತ್ತು ಅಡೆತಡೆಗಳನ್ನು ಎದುರಿಸಿದ ವ್ಯಕ್ತಿ ಆ ಸವಾಲುಗಳನ್ನೆಲ್ಲಾ ಎದುರಿಸಿ ಮುನ್ನುಗ್ಗಿದ್ದರೆ ಆ ವ್ಯಕ್ತಿ ಸಮಯ ಬಂದಾಗ ಇನ್ನೂ ದೊಡ್ಡ ಸ್ಥಾನವನ್ನು ಪಡೆಯಲು ಸಹ ಸಮರ್ಥನಾಗುತ್ತಾನೆ.
ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದವರು ಮಾತ್ರ ತಮ್ಮ ಮನೋವೃತ್ತಿಯನ್ನು ಬದಲಾಯಿಸಲು ಹಾಗೂ ಸಕಾರಾತ್ಮಕ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ತಾವು ಎದುರಿಸಿದ ಸಂಕಷ್ಟಗಳು ಅಥವಾ ತೊಂದರೆಗಳು ಅವರು ಎದುರಿಸಿದ ಸುದೀರ್ಘ ಪ್ರಯಾಣದಲ್ಲಿ ಅವರಿಗೆ ಹೊಸ ಅವಕಾಶಗಳನ್ನು ಕಲ್ಪಿಸಬಹುದು.
ಈ ಗಾದೆ ನಾವು ಯಾವುದೇ ಸ್ಥಿತಿಯಲ್ಲಿ ಇದ್ದರೂ, ನಾವು ನಮ್ಮೊಳಗಿನ ಶಕ್ತಿಯನ್ನು ಬಳಸಿಕೊಂಡು ಸ್ವಯಂ ಅಭಿವೃದ್ಧಿಗೆ ಧೈರ್ಯದಿಂದ ಹೋರಾಟ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಸಾಧಿಸಲು ಮತ್ತು ಉನ್ನತ ಮಟ್ಟವನ್ನು ತಲುಪಲು ಕಷ್ಟಪಡಬೇಕು ಎನ್ನುವ ಸಾರಾಂಶವನ್ನು ನೀಡುತ್ತದೆ.
ಆಳಾಗಬಲ್ಲವನು ಅರಸನಾಗಬಲ್ಲ ಗಾದೆ ವಿವರಣೆ | Alagaballavanu Arasanagaballanu Gade Kannada
“ಗಾದೆಗಳು ವೇದಗಳ ಹಾಗೇ ಸಮಾನವಾಗಿವೆ, ವೇದಗಳು ಸುಳ್ಳಾಗಿದೆಯಾದರೂ ಗಾದೆ ಸುಳ್ಳಾಗದು” ಎಂಬ ಮಾತು ಇದೆ. ಗಾದೆಗಳು ನಮ್ಮ ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಅವು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ನಮ್ಮ ಜೀವನವನ್ನು ಹಸನಾಗಿಸುವಂತಿವೆ. ಅಂತಹ ಅಮೂಲ್ಯವಾದ ಗಾದೆಗಳಲ್ಲಿ ಮೇಲಿನ ಗಾದೆ ಕೂಡ ಒಂದಾಗಿದೆ.
ಈ ಗಾದೆಮಾತು ಕೆಲಸಕ್ಕೆ ಸಂಬಂದಿಸಿದ ಗಾದೆ ಮಾತಾಗಿದೆ. ಯಾವುದೇ ಕೆಲಸವಾದರೂ ಕಷ್ಟಪಟ್ಟು ಇಷ್ಟಪಟ್ಟು ಶ್ರದ್ದೆಯಿಂದ ಮಾಡಿದರೆ ಉತ್ತಮ ಫಲ ದೊರೆತು ಎತ್ತರದ ಸ್ಥಾನಕ್ಕೆ ಏರಬಹುದು. ನಾವು ಮಾಡುವ ಕೆಲಸವನ್ನು ಕೀಳಾಗಿ ಖಂಡರೆ ಮತ್ತು ಸೋಮಾರಿತನವನ್ನು ಬೆಳೆಸಿಕೊಂಡರು ಯಾವುದೇ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಕಷ್ಟಪಟ್ಟು ಕೆಲಸವನ್ನು ಮಾಡಿದರೆ ಆಳಾದವನು ಸಹ ಮುಂದೊಂದು ದಿನ ಅರಸನಾಗಬಹುದು.
ಮನುಷ್ಯನಾದವನು ತನ್ನ ಕೆಲಸವನ್ನು ನಿಲ್ಲಿಸದೆ, ಕಷ್ಟಪಟ್ಟು ದುಡಿದು, ಯಾರ ಮೇಲೂ ಅವಲಂಬಿತನಾಗದೆ ಎಲ್ಲಾ ಕೆಲಸಗಳನ್ನು ಅರಿತು, ಕಲಿತು ಮಾಡಿದಾಗ ಯಾರೇ ಆದರೂ ಯಶಸ್ಸನ್ನು ಕಾಣಲು ಸಾಧ್ಯ ಎಂಬುದೇ ಈ ಗಾದೆಯ ಅರ್ಥ.
ಇದನ್ನೂ ಓದಿ:
- ಕಾಯಕವೇ ಕೈಲಾಸ ಗಾದೆ ವಿಸ್ತರಣೆ | Kayakave Kailasa Gade in Kannada
- ಆಳಾಗಿ ದುಡಿ ಅರಸನಾಗಿ ಉಣ್ಣು ಗಾದೆ ವಿಸ್ತರಣೆ | Alagi Dudi Arasanagi Unnu in Kannada
- ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿಸ್ತರಣೆ | Beleyuva Siri Molakeyalli in Kannada
- ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಗಾದೆ ವಿಸ್ತರಣೆ | Sathyakke Savilla Sullige Sukhavilla in Kannada
- ಮನೆಗೆ ಮಾರಿ ಊರಿಗೆ ಉಪಕಾರಿ ಗಾದೆ ವಿಸ್ತರಣೆ | Manege Mari Oorige Upakari Gade in Kannada
- ಬೆಳ್ಳಗಿರುವುದೆಲ್ಲಾ ಹಾಲಲ್ಲ ಗಾದೆ ವಿಸ್ತರಣೆ | Bellagiruvudella Halalla Gade in Kannada
- ಒಗ್ಗಟ್ಟಿನಲ್ಲಿ ಬಲವಿದೆ ಗಾದೆ ವಿಸ್ತರಣೆ | Oggattinalli Balavide
- ಮಾತು ಬೆಳ್ಳಿ ಮೌನ ಬಂಗಾರ ಗಾದೆ ವಿಸ್ತರಣೆ | Mathu Belli Mouna Bangara Gade in Kannada
- ಆರೋಗ್ಯವೇ ಭಾಗ್ಯ ಗಾದೆ ವಿಸ್ತರಣೆ | Arogyave Bhagya Gade Mathu Vistarane
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಮನಸಿದ್ದರೆ ಮಾರ್ಗ ಗಾದೆ ವಿಸ್ತರಣೆ | Manasiddare Marga Gaade in Kannada
ಆಳಾಗಬಲ್ಲವನು ಅರಸನಾಗಬಲ್ಲ ಕನ್ನಡ ಗಾದೆ | Alagaballavanu Arasagaballa Gade Kannada
“ಆಳಾಗಬಲ್ಲವನು ಅರಸನಾಗಬಲ್ಲ” ಎಂಬ ಗಾದೆ ವ್ಯಕ್ತಿಯ ಆತ್ಮನಿಯಂತ್ರಣ ಮತ್ತು ನಾಯಕತ್ವದ ಗುಣಗಳನ್ನು ಸಾರುತ್ತದೆ. ಇದರ ಅರ್ಥ, ಯಾರು ತಮ್ಮ ಮನಸ್ಸನ್ನು, ಭಾವನೆಗಳನ್ನು, ಮತ್ತು ಕೋಪವನ್ನು ನಿಯಂತ್ರಿಸಬಲ್ಲರೋ, ಅವರು ಉತ್ತಮ ನಾಯಕನಾಗಲು ಅರ್ಹರಾಗುತ್ತಾರೆ ಎಂಬುದಾಗಿದೆ. ಈ ಗಾದೆಯು ತಾಳ್ಮೆ ಮತ್ತು ಬುದ್ಧಿವಂತಿಕೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
ತಾಳ್ಮೆ ಮತ್ತು ಸ್ವಯಂ ನಿಯಂತ್ರಣವು ಉತ್ತಮ ನಾಯಕತ್ವದ ಪ್ರಮುಖ ಅಂಶಗಳಾಗಿವೆ. ಒಬ್ಬ ವ್ಯಕ್ತಿ ತನ್ನ ಆಂತರಿಕ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಕಠಿಣ ಪರಿಸ್ಥಿತಿಗಳಲ್ಲಿ ಸಮರ್ಥ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇತಿಹಾಸದಲ್ಲಿ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೆಲಾ ಅವರಂತಹ ಮಹಾನ್ ನಾಯಕರ ಉದಾಹರಣೆಗಳು ಈ ಗಾದೆಯ ಆಶಯವನ್ನು ದೃಢಪಡಿಸುತ್ತವೆ. ಅವರು ತಮ್ಮ ತಾಳ್ಮೆಯಿಂದ ಮತ್ತು ಶಾಂತ ಸ್ವಭಾವದಿಂದ ದೊಡ್ಡ ಬದಲಾವಣೆಗಳನ್ನು ತಂದಿದ್ದಾರೆ.
ಈ ಗಾದೆಯು ನಮ್ಮ ಜೀವನದಲ್ಲೂ ಅನ್ವಯವಾಗುತ್ತದೆ. ಉದಾಹರಣೆಗೆ, ಕೆಲಸದ ಸ್ಥಳದಲ್ಲಿ ಅಥವಾ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳಲ್ಲಿ ತಕ್ಷಣವೇ ಕೋಪಗೊಳ್ಳದೆ, ತಾಳ್ಮೆಯಿಂದ ವಿಚಾರಿಸಿ ಪರಿಹಾರ ಕಂಡುಹಿಡಿಯುವುದು ಮುಖ್ಯ. ಉತ್ತಮ ನಾಯಕನಾಗಲು ಕೇವಲ ಅಧಿಕಾರ ಅಥವಾ ಶಕ್ತಿ ಸಾಕಾಗುವುದಿಲ್ಲ; ಬುದ್ಧಿವಂತಿಕೆ, ತಾಳ್ಮೆ, ಮತ್ತು ಸ್ವಯಂ ನಿಯಂತ್ರಣವೂ ಅಗತ್ಯವಿದೆ.
ಸಾರಾಂಶವಾಗಿ, “ಆಳಾಗಬಲ್ಲವನು ಅರಸನಾಗಬಲ್ಲ” ಎಂಬ ಗಾದೆಯು ವ್ಯಕ್ತಿಯ ಆತ್ಮನಿಯಂತ್ರಣ ಹಾಗೂ ಬುದ್ಧಿವಂತಿಕೆಯ ಮಹತ್ವವನ್ನು ವಿವರಿಸುತ್ತದೆ. ಇದು ನಮ್ಮ ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಪ್ರೇರಣೆ ನೀಡುತ್ತದೆ.
ಆಳಾಗಬಲ್ಲವನು ಅರಸನಾಗಬಲ್ಲ ಗಾದೆ ಮಾತಿನ ವಿವರಣೆ | Alagaballavanu Arasanagaballa Gade Mathina Vivarane
ಗಾದೆಗಳು ವೇದಗಳಿಗೆ ಸಮಾನ. ಹಿರಿಯರ ಅನುಭವದ ನುಡಿಮುತ್ತುಗಳೇ ಈ ಗಾದೆಗಳು. ಬಿಂದುವಿನಂತಹ ಗಾದೆಯಲ್ಲಿ ಸಿಂಧುವಿನಂತಹ ವಿಶಾಲ ಅರ್ಥವು ಅಡಗಿರುತ್ತದೆ. ಅಂತಹ ಕನ್ನಡದ ಹಲವಾರು ಸುಪ್ರಸಿದ್ಧ ಗಾದೆಗಳಲ್ಲಿ “ಆಳಾಗಬಲ್ಲವನು ಅರಸನಾಗಬಲ್ಲ” ಎಂಬ ಗಾದೆ ಮಾತು ಕೂಡಾ ಒಂದಾಗಿದೆ.
ಕಾಯಕದ ಮಹತ್ವವನ್ನು ಬಡವ ಶ್ರೀಮಂತ ಎಂಬ ಭೇದವಿಲ್ಲದೆ ತಿಳಿದುಕೊಳ್ಳುವುದು ಮಹತ್ವವಾಗಿದೆ. ಕಾಯಕವೇ ಕೈಲಾಸ ಎಂದು ಬಸವಣ್ಣನವರೇ ಹೇಳಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಯಾರು ತಾವು ಮಾಡುವ ಕಾಯಕದಲ್ಲಿ ಕಾಯಾ, ವಾಚಾ, ಮನಸಾ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೋ ಅವನು ಮುಂದೆ ನೆಮ್ಮದಿಯ ಜೀವನ ನಡೆಸುತ್ತಾನೆ. ಕಷ್ಟಪಟ್ಟು ದುಡಿದರೆ ಫಲವುಂಟು ಎಂಬುದು ಎಂದಿಗೂ ಸತ್ಯ. ದುಡಿಯುವ ಸಂದರ್ಭದಲ್ಲಿ ಸಮರ್ಪಣೆ ಬಹಳ ಪ್ರಮುಖವಾದದ್ದು. ಆಳುಮಾಡುವ ಕೆಲಸವು ಕೆಲಸ ಮಾಡಿಸುತ್ತಿರುವ ಯಜಮಾನನಿಗೂ ಸಹ ಗೊತ್ತಿರಬೇಕು. ಅವನಿಗೂ ಆ ಕೆಲಸ ಮಾಡುವ ಸಾಮರ್ಥ್ಯವಿರಬೇಕು. ಇಲ್ಲವಾದರೆ ಅವನಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಆಳಿನ ದುಡಿಮೆ, ಸಮಸ್ಯೆ, ಸ್ಟಿತಿಗತಿಗಳನ್ನು ಸ್ವತಃ ಅವರೊಂದಿಗೆ ಬೆರೆತು ಅರ್ಥ ಮಾಡಿಕೊಂಡಿರಬೇಕು. ಆಗ ಮಾತ್ರ ಅರಸನಾಗಿ ಬಾಳಬಹುದು ಎಂಬುದು ಈ ಗಾದೆಯ ಸಾರ.
ಆಳಾಗಬಲ್ಲವನು ಅರಸನಾಗಬಲ್ಲನು ಗಾದೆಮಾತು | Alagaballavanu Arasanagaballa Gade Matu
ಪೀಠಿಕೆ: ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ.
ವಿಷಯ ವಿವರಣೆ: ‘ಆಳು’ ಎಂದರೆ ಕೆಲಸ ಮಾಡುವವನು, ದುಡಿಯುವವನು ಎಂದರ್ಥ. ಅಂತವನು ‘ಅರಸನಾಗಬಲ್ಲ’ ಅಂದರೆ ‘ಯಜಮಾನನಗಬಲ್ಲ’ ಎಂದು ಈ ಗಾದೆ ತಿಳಿಸುತ್ತದೆ.
ಕೃಷಿ, ಕೈಗಾರಿಕೆ, ತೋಟಗಾರಿಕೆ, ಶಿಕ್ಷಣ, ಹೀಗೆ ಯಾವುದೇ ಕ್ಷೇತ್ರವೆ ಆಗಿರಲಿ. ಮೊದಲು ಆಳಾಗಿ ಕಷ್ಟಪಟ್ಟು ದುಡಿದು ತನ್ನ ಕೆಲಸದ ಮೇಲಿನ ಶ್ರದ್ಧೆ ಹಾಗೂ ಪರಿಶ್ರಮಗಳಿಂದ ಆಟ ಎತ್ತರಕ್ಕೆ ಏರಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಆಳಾಗಿ ದುಡಿಯದೆ, ಅನುಭವ ಇಲ್ಲದೆ ಯಜಮಾನನಾಗಿ ಮೆರೆದರೆ ಆ ಕೆಲಸದಲ್ಲಿ ಸೂಕ್ತವಾದ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಆತ ಇನ್ನೊಬ್ಬರ ಮೇಲೆ ಅವಲಂಬಿತವಾಗಲೇಬೇಕಾಗುತ್ತದೆ.
ಆದ್ದರಿಂದ ಬಸವಣ್ಣನವರು ಹೇಳಿದಂತೆ ‘ಕಾಯಕವೇ ಕೈಲಾಸ’ ಎಂದು ತಿಳಿದುಕೊಂಡು ಯಾವ ಕೆಲಸವನ್ನಾದರೂ ಅದನ್ನು ಶ್ರದ್ಧೆ, ಭಕ್ತಿಯಿಂದ ಮಾಡಬೇಕು. ಆಳಿನಂತೆ ಕೆಲಸ ಮಾಡಲು ಯಾರಿಗೆ ಸಾಧ್ಯವಿದೆಯೋ ಅವರು ಮುಂದೊಂದು ದಿನ ಅರಸನಂತೆಯೇ ಜೀವಿಸಬಹುದು ಎಂಬುದು ಈ ಗಾದೆಯ ಅರ್ಥ.
ಉಪಸಂಹಾರ: ಇಂತಹ ಅರ್ಥವತ್ತಾದ ಗಾದೆಯನ್ನು ವಿಧ್ಯಾರ್ಥಿಗಳಾದ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಇದನ್ನೂ ಓದಿ:
- ಅತಿ ಆಸೆ ಗತಿ ಕೇಡು ಗಾದೆ ವಿಸ್ತರಣೆ | Athi Ase Gathi Kedu Gade in Kannada
- ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ | Desha Suttu Kosha Odu
- ಮಾಡಿದ್ದುಣ್ಣೋ ಮಾರಾಯ | Madiddunno Maharaya Gade in Kannada
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ | Gidavagi Baggadu Maravagi Baggite
- ಕೈ ಕೆಸರಾದರೆ ಬಾಯಿ ಮೊಸರು | Kai Kesaradare Bai Mosaru Gade in Kannada
- ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಗಾದೆ ವಿಸ್ತರಣೆ | Uta Ballavanige Rogavilla Mathu Ballavanige Jagalavilla
- (ಗಾದೆ ವಿಸ್ತರಣೆ) ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ.
ಈ ಲೇಖನ ನಿಮಗೆ ಇಷ್ಟವಾಗಿದ್ದಾರೆ ದಯಮಾಡಿ ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಹಂಚಿಕೊಳ್ಳಿ. ಇನ್ನೂ ಹೆಚ್ಚು ಓದುಗರಿಗೆ ಈ ಗಾದೆ ವಿಸ್ತರಣೆಯನ್ನು ತಲುಪಿಸಲು ಇದು ಸಹಾಯ ಮಾಡುತ್ತದೆ. ನಿಮ್ಮ ಬೆಂಬಲ ಮತ್ತು ಪ್ರತಿಕ್ರಿಯೆ ನಾವು ಇನ್ನಷ್ಟು ಉತ್ತಮ ವಿಷಯಗಳನ್ನು ತಯಾರಿಸಲು ಸ್ಪೂರ್ತಿಯಾಗುತ್ತವೆ. ನಮ್ಮ ವೆಬ್‌ಸೈಟ್‌ಗೆ ಆಗಾಗ ಭೇಟಿ ನೀಡಿ ಮತ್ತು ಹೊಸ ವಿಷಯಗಳ ಜ್ಞಾನವನ್ನು ಪಡೆಯುತ್ತಿರಿ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.